ಜಾನುವಾರುಗಳ ರ್ಮಗಂಟು ರೋಗದ ಬಗ್ಗೆ ಎಚ್ಚರವಿರಲಿ : ಪಶು ವೈದ್ಯಾಧಿಕಾರಿ ವಿಜಯಕುಮಾರ್ ಹೇಳಿಕೆ
ಚಳ್ಳಕೆರೆ : ಜಾನುವಾರುಗಳಿಗೆ ಬರುವ ರ್ಮಗಂಟು ರೋಗಗಳು ತೀವ್ರವಾದರೆ ಶರೀರವನ್ನು ಸೊರಗುವಂತೆ ಮಾಡುತ್ತದೆ ಆದ್ದರಿಂದ ರೈತರು ಎಚ್ಚೆತ್ತುಕೊಂಡು ಮುಂಬರುವ ರೋಗವನ್ನು ನಿಯಂತ್ರಣ ಮಾಡಲು ಲಸಿಕೆ ಹಾಕಿಸಿ ಎಂದು ಹಿರಿಯ ಪಶು ವೈದ್ಯಾಧಿಕಾರಿ ವಿಜಯ್ ಕುಮಾರ್ ಮನವಿ ಮಾಡಿದ್ದಾರೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದ ರೈತ ಗೊಂಚಿಗರ್ ಪಾಲಯ್ಯ ಎಂಬುವವರ ಎತ್ತು ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿ, ರೈತರು ಮತ್ತು ಸರ್ವಜನಿಕರು ಯಾರೇ ಆತಂಕ ಪಡುವ ಅಗತ್ಯವಿಲ್ಲ,
ಜಾನುವಾರುಗಳ ಬಗ್ಗೆ ಜಾಗೃತಿ ವಹಿಸಿ ಪ್ರಚಲಿತದಲ್ಲಿರುವ ಮಹಾಮಾರಿ ರ್ಮಗಂಟು ರೋಗ ಯಾವುದೇ ಸೂಕ್ತ ಚಿಕಿತ್ಸೆ ಇಲ್ಲದ ಕಾರಣ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಹಾಗೆ ರ್ಮಗಂಟು ರೋಗದ ಲಕ್ಷಣಗಳು ಕಂಡುಬಂದಲ್ಲಿ ಅಂತಹ ರೋಗಪೀಡಿತ ಜಾನುವಾರುಗಳನ್ನು ಇತರೆ ಜಾನುವಾರುಗಳಿಂದ ದೂರವಿರುವುದು ಸೂಕ್ತ ರೋಗದಿಂದ ಜಾನುವಾರುಗಳು ಮೃತಪಟ್ಟರೆ ರ್ಕಾರದ ವತಿಯಿಂದ ಪರಿಹಾರವನ್ನು ವಿತರಿಸಲಾಗುತ್ತದೆ ರ್ಮಗಂಟು ರೋಗದಿಂದ ಮೃತಪಟ್ಟಿರುವ ಪ್ರತಿ ರಾಶಿಗಳಿಗೆ ತಲಾ ೨೦,೦೦೦ ಎತ್ತುಗಳಿಗೆ ತಲಾ ರೂ.೩೦,೦೦೦ ಕರುಗಳಿಗೆ ತಲಾ ೫೦೦೦ ಪರಿಹಾರವನ್ನು ರ್ಕಾರ ನಿಗದಿಪಡಿಸಲಾಗಿದೆ ಎಂದು ಹಿರಿಯ ಪಶು ವೈದ್ಯಧಿಕಾರಿ ವಿಜಯ್ ಕುಮಾರ್ ರವರು ರೈತರಿಗೆ ಸಲಹೆ ನೀಡಿದ್ದಾರೆ.
ಈ ವೇಳೆ ರೈತ ಗೊಂಚಿಗಾರ್ ಪಾಲಯ್ಯ ಮಾತನಾಡಿ ಕಳೆದ ಎರಡು ರ್ಷದಿಂದ ಕರೋನ ಮಹಾಮಾರಿಯಿಂದ ರೈತರು ಕಂಗಲಾಗಿದ್ದೇವೆ ಇಂಥ ಪರಿಸ್ಥಿತಿಯಲ್ಲಿ ಒಂದು ಎತ್ತು ತರಲು ಒಂದರಿಂದ ಎರಡು ಲಕ್ಷದವರೆಗೆ ಹಣ ಬೇಕಾಗುತ್ತದೆ ರ್ಮ ಗಂಟು ರೋಗದಿಂದ ಇಂದು ನಮ್ಮ ಎತ್ತು ಮೃತಪಟ್ಟಿರೋದು ತುಂಬಾ ನೋವಿನ ಸಂಗತಿ ಎಂದು ಅಳಲು ತೋಡಿಕೊಂಡರು.
ಈಸಂರ್ಭದಲ್ಲಿ ಪಶುಆಸ್ಪತ್ರೆಯ ಸಿಬ್ಬಂದಿ ರಾಜಣ್ಣ, ರೈತರ ಗೊಂಚಿಗರ್ ಪ್ರಹ್ಲಾದ್, ದೇವರಾಜ್ ,ಸೇರಿದಂತೆ ಉಪಸ್ಥಿತರಿದ್ದರು