ಯುವ ಪೀಳಿಗೆ ಕ್ರೀಡೆಗಳಿಗೆ ಆದ್ಯತೆ ನೀಡಿ ಕೆ ಪಿ ತಿಪ್ಪೇಸ್ವಾಮಿ
ನಾಯಕನಹಟ್ಟಿ ::ಶ್ರೀ ಮರ‍್ಷಿ ವಾಲ್ಮೀಕಿ ಜಯಂತಿ ಹಾಗೂ ದೀಪಾವಳಿ ಪ್ರಯುಕ್ತ ಕಬಡ್ಡಿ ಪಂದ್ಯಾವಳಿಯನ್ನು ರ‍್ಪಡಿಸಲಾಗಿತ್ತು ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ರವರು ಹೇಳಿದ್ದಾರೆ.
ಅವರು ಬುಧವಾರ ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾಮಟ್ಟದ ಶ್ರೀರಾಮ ಕಬಡ್ಡಿ ಪಂದ್ಯಾವಳಿಯನ್ನು ಮೊಳಕಾಲ್ಮುರು ವಿಧಾನಸಭಾ ಮಾಜಿ ಶಾಸಕರಾದ ಎಸ್ ತಿಪ್ಪೇಸ್ವಾಮಿ ಅವರ ಅನುಪಸ್ಥಿತಿಯಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯತ್ ಸದಸ್ಯರಾದ ಕೆ ಪಿ ತಿಪ್ಪೇಸ್ವಾಮಿಯವರು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ.
ಯುವ ಪೀಳಿಗೆ ಕ್ರೀಡೆಗಳಿಗೆ ಹೆಚ್ಚಿನ ಒತ್ತನ್ನು ನೀಡ ನೀಡಬೇಕು ಮತ್ತು ಪ್ರೋತ್ಸಾಹಿಸಬೇಕು ಆಗ ಮನುಷ್ಯ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಆರೋಗ್ಯವಂತರಾಗಿರಲು ಸಾಧ್ಯ ಎಂದು ಪಟ್ಟಣ ಪಂಚಾಯತ್ ಸದಸ್ಯರಾದ ಕೆ ಪಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಈ ಸಂರ‍್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಗುಂಡಪ್ಪ ಅನಿತಮ್ಮ ಸಿದ್ಲಿಂಗಮ್ಮ ಮಂಜಮ್ಮ ಹಾಗೂ ನಾಯಕನಹಟ್ಟಿ ಯುವ ಮುಖಂಡರಾದ ಅಮೀನುದ್ದೀನ್ ಊರಿನ ಗ್ರಾಮಸ್ಥರಾದ ಬಿ ಚಂದ್ರಣ್ಣ.ಗೊಂಚಿಗಾರ್ ಪಾಲಯ್ಯ.ಬೂಟ್ ತಿಪ್ಪೆಸ್ವಾಮಿ ಮಾಳಿಗೆ ತಿಪ್ಪೇಸ್ವಾಮಿ .ಒ ಸುರೇಶ ಅಪ್ಪು ಕರಿಬಸಪ್ಪ . ಕೆ ಎಸ್ ಸಿದ್ದಲಿಂಗಯ್ಯ.ಬಡಿಗೆ ತಿಪ್ಪೇಸ್ವಾಮಿ.ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು