ಡಾ ಯೋಗೇಶ್ ಬಾಬು ರವರಿಂದ ಪತ್ರರ‍್ತ ಕೆ ಟಿ ಓಬಳೇಶ್ ರವರಿಗೆ ಸನ್ಮಾನ
ನಾಯಕನಹಟ್ಟಿ:: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು ರವರು ಪತ್ರರ‍್ತ ಕೆ ಟಿ ಓಬಳೇಶ್ ರವರು ಪತ್ರಿಕಾ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಡಾ ಯೋಗೇಶ್ ಬಾಬು ರವರು ಹೇಳಿದ್ದಾರೆ.
ಅವರು ಬುದುವಾರ ಪಟ್ಟಣದಲ್ಲಿ ಪತ್ರರ‍್ತ ಕೆ ಟಿ ಓಬಳೇಶ್ ರವರಿಗೆ ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿ ಭಾಜನರಾಗಿರುವುದು ಸಂತಸ ತಂದಿದೆ ಪತ್ರರ‍್ತ ಕೆ ಟಿ ಓಬಳೇಶ್ ರವರು ನಮ್ಮ ನಾಯಕನಹಟ್ಟಿ ಹೋಬಳಿ ತಳಕು ಹೋಬಳಿ ಚಳ್ಳಕೆರೆ ತಾಲ್ಲೂಕು ಸೇರಿದಂತೆ ಉತ್ತಮವಾಗಿ ಪತ್ರಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಪರಿಶ್ರಮದ ಫಲವಾಗಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡುವುದು ಸಂತೋಷದ ವಿಷಯ ಎಂದು ಡಾ ಯೋಗೇಶ್ ಬಾಬು ರವರು ತಿಳಿಸಿದ್ದಾರೆ.
ಈ ಸಂರ‍್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಪಟೇಲ್ ಜಿ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಟಿ ಬಸಣ್ಣ, ಎಂ ಪಾಪಣ್ಣ, ಚಂದ್ರಣ್ಣ ಗುಂತಕೋಲಮ್ಮನಹಳ್ಳಿ, ನಿವೃತ್ತ ಶಿಕ್ಷಕ ತಿಪ್ಪೇರುದ್ರಸ್ವಾಮಿ, ಜಾಗನೂರಹಟ್ಟಿ ಮುತ್ತಯ್ಯ, ಚೌಳಕೆರೆ ಪಿ ಶಿವರಾಜ್ ಇಮ್ರಾನ್ ಸೇರಿದಂತೆ ಉಪಸ್ಥಿತರಿದ್ದರು