ಚಳ್ಳಕೆರೆ ನಗರದಲ್ಲಿ ಪುನೀತ್ ರಾಜ್‌ಕುಮಾರ್ ರಸ್ತೆ, ವೃತ್ತಕ್ಕೆ ಅಭಿಮಾನಿಗಳ ಮನವಿ

ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಗಾಂಧಿನಗರದ ಹೆಬ್ಬಾಗಿಲಿನ ಕೆ.ಇ.ಬಿ ಸಮೀಪದ ಮುಂಭಾಗದ ರಸ್ತೆಗೆ ಪುನೀತ್ ರಾಜ್‌ಕುಮಾರ್ ವೃತ್ತ ಎಂದು ನಾಮಕರಣ ಮಾಡಿಕೊಡುವಂತೆ ನಗರಸಭೆ ಪೌರಾಯುಕ್ತರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳಿAದ ಮನವಿ ಸಲ್ಲಿಸಿದರು.
ಇನ್ನೂ ನಗರದ ಅಪಾರ ಅಭಿಮಾನಿ ಬಳಗಹೊಂದಿದ ಪುನೀತ್ ರಾಜ್‌ಕುಮಾರ್ ಅವರ ವೃತ್ತಕ್ಕೆ ಅಭಿಮಾನಗಳ ದಂಡು ಸುಮಾರು ಒಂದು ಕಿಲೋ ಮೀಟರ್ ಉದ್ದದ ಪಾದಯಾತ್ರೆ ಮೂಲಕ ದಾವಿಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿದಿದ್ದಾರೆ.
ನಗರದ ಸಾಮಾಜಿಕ ಸಂಘರ್ಷ ಸಮಿತಿ, ಅಪ್ಪುಯೂತ್ ಬ್ರೀಗ್ರೇಡ್, ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಭಿಮಾನಿಗಳ ಬಳಗ, ಅಖಿಲ ಕರ್ನಾಟಕ ಯುವ ರಾಜ್‌ಕುಮಾರ್ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಈಗೇ ವಿವಿಧ ಕನ್ನಡ ಪರ ಸಂಘಟನನೆಗಳು ಮನವಿ ನೀಡಿ ವೃತ್ತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇನ್ನೂ ಕನ್ನಡ ರಕ್ಷಣಾ ವೇದಿಕೆ ಟಿಜೆ.ಸ್ವಪ್ನ ವೆಂಕಟೇಶ್ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ಕಂಡ ಶ್ರೇಷ್ಠ ನಟ, ಕರ್ನಾಟಕದ ಸಾಂಸ್ಕೃತಿಕ ರಾಯಬಾರಿ, ಯುವಕರಿಗೆ ಸ್ಫೂರ್ತಿಯಾದ ಹಾಗೂ ಸಮಾಜ ಸೇವೆಯಲ್ಲಿ ಅತ್ಯಅದ್ಭುತ ಕೊಡುಗೆ ನೀಡಿರುವ ಮಹಾ ಮಾನವತವಾದಿ ಕರ್ನಾಟಕ ರತ್ನ ಡಾ|| ಪುನೀತ್ ರಾಜ್‌ಕುಮಾರ್ ರವರ ಪುತಳಿ ಹಾಗೂ ವೃತ್ತವನ್ನು ಚಳ್ಳಕೆರೆ ಹೃದಯ ಬಾಗದಲ್ಲಿ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಉಮೇಶ್ ಚಂದ್ರ ಬ್ಯಾನರ್ಜಿ ಮಾತನಾಡಿ, ಈಡೀ ಚಳ್ಳಕೆರೆ ನಗರದಲ್ಲಿ ಬಹು ಸಂಖ್ಯಾತ ಅಭಿಮಾನಿ ಬಳಗ ಹೊಂದಿದೆ ರಾಷ್ಟç ಕಂಡ ಮಹಾನಾಯಕ ವೃತ್ತ ಮಾಡುವುದು ನಮ್ಮ ಭಾಗ್ಯ ಆದ್ದರಿಂದ ಹೃದಯ ಬಾಗದಲ್ಲಿ ಮಾಡಬೇಕು ಎಂದು ಹೇಳಿದರು.

ಇದೇ ಸಂಧರ್ಬದಲ್ಲಿ ಮಾಜಿ ಪುರಸಭೆ ಸದಸ್ಯ ಚೇತನ ಕುಮಾರ್ (ಕುಮ್ಮಿ), ಆಮ್ ಆದ್ಮಿ ಪಕ್ಷದ ತಾಲೂಕು ಅದ್ಯಕ್ಷ ಪಾಪಣ್ಣ, ಓಬಳೇಶ್, ಬಿಜೆಪಿ ಯುವ ಮುಖಂಡ ಪಾಲನೇತ್ರ, ದಲಿತ ಮುಖಂಡ ಗಾಂಧಿ ನಗರದ ಡಿ.ಚಂದ್ರು, ಅಪ್ಪು ಯುವ ಬ್ರೀಗ್ರೇಡ್ ಪ್ರವೀಣ್ ಕುಮಾರ್, ಮಂಜುನಾಥ್, ಓಬಳೇಶ್, ಏಕಾಂತಯ್ಯ, ಗುರುಪ್ರಸಾದ್, ರಾಜು ಇತರರು ಪಾಲ್ಗೋಡಿದ್ದರು.

About The Author

Namma Challakere Local News
error: Content is protected !!