ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭುರವರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ವಿಶೇಷ ಪೂಜೆ
ಚಳ್ಳಕೆರೆ ತಾಲೂಕಿನ
ನಾಯಕನಹಟ್ಟಿ ಹೋಬಳಿಯ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ವಿಶೇಷ ಪೂಜಿಸಲ್ಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಮೊದಲಿಗೆ ಚಿತ್ರದುರ್ಗ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ,
ಒಬ್ಬ ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ಯೋಜನೆಗಳನ್ನು ಜನರಿಗೆ ನಿಗಧಿತ ಕಾಲದ ಒಳಗೆ ಮನೆಯ ಬಾಗಿಲಿಗೆ ತಲುಪಿಸುವ ನಿಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತೇವೆ.
ನಮ್ಮ ಚಿತ್ರದುರ್ಗ ಜಿಲ್ಲೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರು ಬಹುಸಂಖ್ಯೆಯಲ್ಲಿ ಇರುವುದರಿಂದ ಅವರ ಒಂದು ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಜಿಲ್ಲಾಡಳಿತ ಕರ್ತವ್ಯ ನಿರ್ವಹಿಸುತ್ತದೆ
ಜಿಲ್ಲೆಯ ಜನತೆಯ ಸಹಕಾರ ನೀಡಿದಲ್ಲಿ ಈ ಜಿಲ್ಲೆಯ ಅಭಿವೃದ್ಧಿಪಡಿಸಲು ಮುಂದಾಗುತ್ತೇವೆ.
ಈ ಭಾಗದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರವರ ಮಹಿಮೆಯಿಂದ ಮಳೆ ಉತ್ತಮವಾಗಿ ಆಗಿದೆ ಮುಂದಿನ ದಿನಗಳಲ್ಲಿ ಈ ಹೋಬಳಿಯಲ್ಲಿ ಉತ್ತಮ ಮಳೆ ಬೆಳೆಯಾಗುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿಲ್ಲೆಯ ಜನತೆಗೆ ಶುಭ ಹಾರೈಸಿದರು.
ಮೊದಲ ದಿನವೇ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಗೆ ಜಿಲ್ಲಾಧಿಕಾರಿ ಬೇಟಿ ನೀಡಿದ ಸಂಧರ್ಭದಲ್ಲಿ ಚಳ್ಳಕೆರೆ ತಹಶಿಲ್ದಾರ್ ಎನ್ ರಘುಮೂರ್ತಿ ಆಧಾರದ ಸ್ವಾಗತ ನೀಡುವ ಮೂಲಕ ದೇವಾಲಯ ಪ್ರದಕ್ಷಿಣೆ ಮಾಡಿಸಿದರು.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಬಾಲಕೃಷ್ಣ, ತಹಶೀಲ್ದಾರ್ ಎನ್ ರಘುಮೂರ್ತಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಹೆಚ್ ಗಂಗಾಧರಪ್ಪ, ಜಿಲ್ಲಾಧಿಕಾರಿಗಳ ಪತಿಯಾದ ಐಎಎಸ್ ಅಧಿಕಾರಿ ಡಾ.ವಿ.ರಾಮಪ್ರಸಾತ್‌ಮನೋಹರ್,ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಎಂ ಶಿವಸ್ವಾಮಿ, ದೇವಸ್ಥಾನ ಅರ್ಚಕರದ ಶಿವಲಿಂಗಮೂರ್ತಿ, ರವಿ, ಸಿಬ್ಬಂದಿಗಳಾದ ಎಸ್ ಸತೀಶ್, ಮನು, ಪ್ರಕಾಶ್, ಬಿ ಟಿ ರುದ್ರೇಶ್, ಮಂಜಣ್ಣ ,ಮಹದೇವ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಪುಷ್ಪಲತಾ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು