ಸಾರಿಗೆ ಬಸ್ ನಿಲ್ದಾಣದಲ್ಲಿ
ವಿಶ್ರಾಂತಿ ಕೊಠಡಿಗಳಿಗೆ ಬರ
ಸಾರ್ವಜನಿಕ ಸ್ಥಳದಲ್ಲಿ
ಮಲಗುವ ಪ್ರಯಾಣಿಕರು
ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣದಲ್ಲಿ ಘಟನೆ
ಪ್ರಯಾಣಿಕರ ಮೂಲಭೂತ ವ್ಯವಸ್ಥೆಗೆ
ಅಧಿಕಾರಿಗಳ ತಾತ್ಸರ..!
ಶಾಸಕ ಟಿ.ರಘುಮೂರ್ತಿಯ
ಕನಸಿನ ಬಸ್ ನಿಲ್ದಾಣದಲ್ಲಿ
ಸಮಸ್ಯೆಗಳ ಸರಮಾಲೆ..!
ಸಮಸ್ಯೆಗಳ ನಿಯಂತ್ರಣಕ್ಕೆ ಶಾಸಕರು
ಅಧಿಕಾರಿಗಳಿಗೆ ಸೂಚನೆ ನೀಡುವರಾ..!
ಚಳ್ಳಕೆರೆ ನಗರದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕನಸಿನ ಬಸ್ ನಿಲ್ದಾಣಕ್ಕೆ ಸುಮಾರು ಕೋಟಿಗಟ್ಟಲೆ ಅನುದಾನ ತಂದು ಸಾರಿಗೆ ಬಸ್‌ನಿಲ್ದಾಣ ಮಾಡಿದರೆ ಅಧಿಕಾರಿಗಳು ಮಾತ್ರ ವಿಶ್ರಾಂತಿ ಕೊಠಡಿ ಬಳಕೆಗೆ ನೀಡದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನಲ್ಲಿ ಅತೀ ದೊಡ್ಡದಾದ ಸಾರಿಗೆ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳು, ಕುಡಿಯುವ ನೀರಿನ ಘಟಕ, ಹೋಟೆಲ್, ಶೌಚಾಲಯ, ಸಾರ್ವಜನಿಕರ ವಿಶ್ರಾಂತಿ ಗೃಹ, ಮಹಿಳೆಯರ ತಂಗುದಾಣ ಈಗೇ ವಿವಿಧ ರೀತಿಯಲ್ಲಿ ವಿನ್ಯಾಸ ಹೊಂದಿದ ಕಟ್ಟದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದು ಶೌಚನೀಯ
ಆದರೆ ಪ್ರಯಾಣಿಕರು ರಾತ್ರಿ ಪಾಳಯದಲ್ಲಿ ದೂರದ ಊರುಗಳಿಗೆ ಪ್ರಯಾಣ ಬೆಳೆಸಬೇಕಾದ ಸಂಧರ್ಭದಲ್ಲಿ ಬಸ್‌ಮಿಸ್ ಹಾಗಿ, ಖಾಸಗಿ ಹೋಟೆಲ್ ವಿಶ್ರಾಂತಿ ಪಡೆಯಲಾಗದೆ ಬಸ್ ನಿಲ್ದಾಣದ ಪುಟ್‌ಬಾತ್ ಮೇಲೆ ಮಲಗುವುದರಿಂದ ಭದ್ರತೆ ಇಲ್ಲದೆ ರಾತ್ರಿ ವೇಳೆ ಕಳ್ಳತನಗಳು ಜರುಗುತ್ತಿವೆ
ಇನ್ನೂ ನಿಯಂತ್ರಣ ಅಧಿಕಾರಿಗಳು ಇಂತಹ ಪ್ರಯಾಣಿಕರು ಕಣ್ಣಿಗೆ ಕಂಡರು ಕಾಣದಾಗೆ ಜಾಣ ಕುರುಡು ಪ್ರದರ್ಶನ ತೋರುತ್ತಿದ್ದಾರೆ.
ನಗರದಲ್ಲಿ ಹಾಡಹಗಲೆ ಕಳ್ಳತನ ಮಾಡುವ ಕಳ್ಳರ ಅವಾಳಿ ಹೆಚ್ಚಾಗಿದೆ ಆದರೆ ಇತ್ತ ಸಾರ್ವಜನಿಕವಾಗಿ ಮಲಗುವುರಿಂದ ಕಳ್ಳರಿಗೆ ಸಹಾಯವಾಗಲಿದೆ ಇದನ್ನು ಸಾರಿಗೆ ನಿಯಂತ್ರಣ ಅಧಿಕಾರಿಗಳು ಗಮನಹರಿಸಬೇಕಾದ ಅನಿವಾರ್ಯತೆ ಇದೆ
ಇನ್ನೂ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸಮಾಜಿಕ ಕಾರ್ಯಕರ್ತ ಹೆಚ್.ಎಸ್.ಸೈಯದ್ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ಹಳ್ಳಿ ಹೈದರ ಪಾಡು.. ನೋಡಿ ಸರಕಾರವೇ ಸಾವಿರಾರು ಕೋಟಿಗಳ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನೂಕುಲ ಮಾಡಿದೆ
ಆದರೆ ಕೆಲವು ಯೋಜನೆಗಳು ಅಧಿಕಾರಿಗಳ ವೈಪಲ್ಯದಿಂದ ಹಳ್ಳ ಹಿಡಿಯುವುದು ಸಾರ್ವಜನಿಕರಿಗೆ ಮಾರಕವಾಗಿರುವುದು ಇಲ್ಲಿ ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.