ಚಳ್ಳಕೆರೆ : ಅ.28 ರಂದು ಕೋಟಿಕಂಠದಲ್ಲಿ ಗೀತ ಗಾಯನ : ತಹಶಿಲ್ದಾರ್ ಎನ್. ರಘುಮೂರ್ತಿ ಕರೆ
ಚಳ್ಳಕೆರೆ ನಗರದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದಿನಾಂಕ 28 ರಂದು ಕೋಟಿಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮವನ್ನು ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದು ಇಲ್ಲಿ 10000 ವಿದ್ಯಾರ್ಥಿಗಳು, ಹಾಗೂ ಆಯ್ದ ಹತ್ತು ಜನ ಗಾಯಕರೊಂದಿಗೆ ಹುಯಿಲ ಗೋಲ್ ನಾರಾಯಣ ರಾವ್ ರವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತಯು ಸೇರಿದಂತೆ ಐದು ಕನ್ನಡ ಗೀತೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಲಾಗುವುದು
ಇನ್ನು ನವಂಬರ್ 1ನೇ ತಾರೀಕು ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ಶ್ರಮಿಸಿದಂತಹ ಮಹನೀಯರನ್ನು ಸ್ಮರಿಸುವಂತಹ ಮತ್ತು ಮುಂದುವರೆದು ಕನ್ನಡದ ಉಳಿವಿಗೆ ಹೋರಾಟ ಮಾಡಿದಂತ ಆದಮ್ಯ ಚೇತನಗಳನ್ನು ಸ್ಮರಿಸಲಾಗುವುದು.
ಇದಕ್ಕೂ ಪೂರ್ವದಲ್ಲಿ ಭುವನೇಶ್ವರಿಯ ಫೋಟೋವನ್ನು ಸಾರೋಟಿನಲ್ಲಿ ಅಲಂಕರಿಸಿ ತರಲಾಗುವುದು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಯ್ದ ಐದು ಮನೋರಂಜನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ
ಕನ್ನಡ ನಾಡು ನುಡಿ ಪರಂಪರೆಯ ಬಗ್ಗೆ ಕನ್ನಡ ಸಾಹಿತಿಗಳು ಮಾತನಾಡಲಿದ್ದಾರೆ ಕನ್ನಡ ಉಳಿವಿಗೆ ಹೋರಾಟ ಮಾಡಿದಂತ ಕನ್ನಡ ಭಾಷೆಯಲ್ಲಿ ಡಾಕ್ಟರೇಟ್ ಪಡೆದಂತ ಅನೇಕರನ್ನು ಸನ್ಮಾನಿಸಲಾಗುವುದು ಹೊರ ರಾಜ್ಯಗಳಿಂದ ಬಂದು ಚಳ್ಳಕೆರೆ ತಾಲೂಕಿನಲ್ಲಿ ವಾಸಿಸುತ್ತಾ ಕನ್ನಡದ ಉಳಿವಿಗೆ ಸೇವೆ ಸಲ್ಲಿಸಿರುವ ಅಂತಹ ಗಣ್ಯರನ್ನು ಸನ್ಮಾನಿಸಲಾಗುವುದು.
ಶಾಸಕ ಟಿ ರಘುಮೂರ್ತಿ ಅಧ್ಯಕ್ಷತೆಯಲ್ಲಿ ಸಂಪೂರ್ಣ ಕಾರ್ಯಕ್ರಮ ನಡೆಯಲಿದ್ದು ಎಲ್ಲ ಕನ್ನಡಪರ ಸಂಘಟನೆಗಳು ಎಲ್ಲ ಸರ್ಕಾರಿ ತಾಲೂಕು ಮಟ್ಟದ ಅಧಿಕಾರಿಗಳು, ಎಲ್ಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಒಡಗೂಡಿ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಕಾರ್ಯಕ್ರಮವನ್ನು ಅಯೋಜಿಸಿದ್ದು
ಇದಕ್ಕೆ ಎಲ್ಲರೂ ಪೂರ್ಣ ಪ್ರಮಾಣದ ಸಹಕಾರ ನೀಡಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಟಿಜೆ.ತಿಪ್ಪೆಸ್ವಾಮಿ, ನಗರಸಭಾ ಆಯುಕ್ತ ಚಂದ್ರಪ್ಪ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಮೂರ್ತಿ ಇನ್ನು ಮುಂತಾದ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು