ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈನ್ ಕಳ್ಳ
ಆಡ ಹಗಲೆ ಕಳ್ಳನ ಕೈಚಳಕ
ಸಾರ್ವಜನಿಕರಿಂದ ಕಳ್ಳನಿಗೆ ಧರ್ಮದೇಟು
ಚಳ್ಳಕೆರೆ : ಪೊಲೀಸರ ನಿದ್ದೆ ಗೆಡಿಸದ ಕಳ್ಳರು ಈಡೀ ನಗರದಲ್ಲಿ ಒಂದಿಲ್ಲೋAದು ಕಳ್ಳತನ ಮಾಡುವ ಮೂಲಕ ಪೊಲೀಸ ಇಲಾಕೆಗೆ ಕಳಂಕ ತರುವ ನಿಟ್ಟಿನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರುತ್ತಿದ್ದರು ಆದರೆ ಚಳ್ಳಕೆರೆ ಪೊಲೀಸ್‌ರು ಸೂಕ್ಷö್ಮ ಕಾರ್ಯಚರಣೆ ಮೂಲಕ ಕಳ್ಳರ ಮೇಲೆ ಹದ್ದಿನ ಕಣ್ಣು ಇಡುವ ಮೂಲಕ ಒಬ್ಬ ಒಬ್ಬರನ್ನು ಎಡೆಮುರೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ

ಇನ್ನೂ ಕಳೆದ ದಿನಗಳಲ್ಲಿ ವರ್ಗಾವಣೆ ಮೂಲಕ ಠಾಣೆಗೆ ಇನ್ಸೆಪೆಕ್ಟೆರ್ ಉಮೇಶ್ ಅಧಿಕಾರಿ ವಹಿಸದಾಗಿನಿಂದ ಕಳ್ಳರ ಹವಾಳಿ ಇರಲಿಲ್ಲ ಆದರೆ ಇಂದು ಏಕಾಏಕಿ ಮದಕರಿ ನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ ಸರವನ್ನು ಕದ್ದು ಪರಾರಿಯಾಗುತಿದ್ದ ಸರಗಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಗೂಸ ನೀಡಿದ ಸ್ಥಳೀಯರ ಸಹಕಾರದಿಂದ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ.

ಇನ್ನೂ ಕಳ್ಳತನ ಮಾಡಿ ಕದ್ದೋಯ್ಯುವ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಚಳ್ಳಕೆರೆ ನಗರದ ಮಧಕರಿ ನಗರದಲ್ಲಿ ಬುಧವಾರ ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಮಧಕರಿನಗರದ ತಿಪ್ಪಮ್ಮ ರಸ್ತೆಯಲ್ಲಿ ನಡೆದುಹೋಗುವಾಗ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗುವಾಗ ಸ್ಥಳಿಯರು ಪ್ರಾಣದ ಹಂಗು ತೊರೆದು ಕಳ್ಳನ್ನು ಸೆರೆಯಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ
ಮತ್ತೊಬ್ಬ ಕಳ್ಳ ಪರಾರಿಯಾಗಿದ್ದಾನೆ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಕಳ್ಳನಿಗೆ ಮಹಿಳೆಯರು ಸೇರಿದಂತೆ ಧರ್ಮದೇಟು ನೀಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪೋಲಿಸರು ಪ್ರಕಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ ಎನ್ನಲಾಗಿದೆ.

About The Author

Namma Challakere Local News
error: Content is protected !!