ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥವತ್ತಾಗಿ ಆಚರಿಸೋಣ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ವೀರ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಗರ್ಭಿತವಾಗಿ ಸಮುದಾಯದ ಜನರು ಸೇರಿಕೊಂಡು ಆಚರಿಸೊಣ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ಅ.23ರಂದು ಆಚರಿಸುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭಾಗವಹಿಸುತ್ತಾರೆ, ವಿವಿಧ ಗಣ್ಯರ ಆಹ್ವಾನಸ ಮೂಲಕ ಸಾರ್ವಜನಕರು ಸೇರೆ ಬೆಂಗಳೂರು ರಸ್ತೆಯಲ್ಲಿರುವ ಬಸವೇಶ್ವರ ವೃತ್ತಕ್ಕೆ ಪುರ್ಷ್ಪಾಚನೆ ಮಾಡುವ ಮೂಲಕ, ಮೆರವಣಿಗೆ ಮೂಲಕ ಸಾಗೋಣ ನಂತರ ವೀರಶೈವ ಕಲ್ಯಾಣ ಮಂಟಪದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸೊಣ ಎಂದರು.
ಇನ್ನೂ ಸಮುಯದಾದ ಮುಖಂಡ ಹಾಗೂ ನಗರಸಭೆ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಕಳೆದ ಬಾರಿ ಕೊವಿಡ್ ಕಾರಣಗಳಿಂದ ಸರಳವಾಗಿ ಜಯಂತಿ ಆಚರಿಸಿದ್ದೆವೆ ಆದರೆ ಈ ಭಾರಿ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ಸಮುದಾಯ ಮುಖಂಡರಿAದ ಕಿತ್ತೂರು ರಾಣಿ ಚೆನ್ನಮರವರ ವಿಷ್ಲೇಶಣೆ ಮಾಡುವ ಮೂಲಕ ಇತಿಹಾಸ ಮರುಕಳಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಹೊಸಮನೆ ಸ್ವಾಮಿ, ಜಗದೀಶ್, ಪ್ರಕಾಶ್, ಶಿವಕುಮಾರ್, ಪ್ರೇಮಾ, ಸುಮಾ, ತೋಟಗಾರಿಕೆ ಇಲಾಕೆ ಅಧಿಕಾರಿ ವಿರುಪಾಕ್ಷಪ್ಪ, ಕೃಷಿ ಸಹಯಾಕ ನಿದೇರ್ಶಕ ಜೆ.ಅಶೋಕ್, ರೇಷ್ಮೇ ಇಲಾಖೆ ಅಧಿಕಾರಿ ಕೆಂಚಾಜಿರವೋ, ಆರೋಗ್ಯ ಇಲಾಕೆ ಸಹಯಾಕ ಅಧಿಕಾರಿ ಕುದಾಪುರ ತಿಪ್ಪೆಸ್ವಾಮಿ, ಪಶು ಇಲಾಕೆ ಸಹಯಾಕ ನಿದೇರ್ಶಕ ಡಾ.ರೇವಣ್ಣ, ಎಒ.ಹೇಮಂತ್ಕುಮಾರ್, ಪರುಶುರಾಂಪುರ ಎಎಓ ಜೀವನ್, ಪ್ರವೀಣ್, ಅಜೇಯ್, ವಿಜಯ್ ಕುಮಾರ್, ಇತರರು ಪಾಲ್ಗೊಂಡಿದ್ದರು.
ಪೋಟೋ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಅಧ್ಯಕ್ಷತೆವಹಿಸಿ ಮಾತನಾಡಿದರು.