ಶಾಸಕರ ಕಪಿ ಮುಸ್ಟಿಯಲ್ಲಿ ಅಧಿಕಾರಿ ವರ್ಗ : ಜಯಪಾಲಯ್ಯ ಕಿಡಿ
ಚಳ್ಳಕೆರೆ : ಸಿದ್ದರಾಮಯ್ಯನವರ ಪೋಸ್ಟ್ರ್ ಕೇವಲ ಚಳ್ಳಕೆರೆಯಲ್ಲಿ ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯರನವರ ಪೋಸ್ಟರ್ ಅಂಟಿಸಿದೆ ಅದೇ ರೀತಿಯಲ್ಲಿ ಮೊಳಕಾಲ್ಮೂರಿನಲ್ಲಿ ಹಾಕಿದೆ ಆದರೆ ಪ್ರಕರಣ ದಾಖಲಿಸಿಲ್ಲ ಆದರೆ ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೇಸ್ ಶಾಸಕರು ಇರುವುದರಿಂದ ಇಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅತ್ತಿಕ್ಕುವ ಕೆಲಸವಾಗುತ್ತಿದೆ, ಇಂತಹ ಕೆಸ್‌ಗಳಿಗೆ ನಾವು ಎದುರುವುದಿಲ್ಲ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಶಾಸಕರ ವಿರುಧ್ದ ಕಿಡಿ ಕಾರಿದ್ದಾರೆ.
ಅವರು ನಗರದ ಬಿಜೆಪಿ ಕಾರ್ಯಾಲಾಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪ್ರಕರಣ ದಾಖಲಿಸುವುದು ಕಾಂಗ್ರೇಸ್ ಮುಖಂಡರಿಗೆ ಶೋಭೆಯಲ್ಲ, ಹಾಗಂತ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಪ್ರಯುಕ್ತ ಇಡೀ ನಗರದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಪ್ಲೆಕ್ಸ್ ಹಾಕಿದ್ದಾರೆ, ಇನ್ನೂ ನಗರದ ವೆಲ್‌ಕಮ್ ಬೋರ್ಡ್ಗಳಿಗೆ ಕಾಂಗ್ರೇಸ್ ಪಕ್ಷದ ಬ್ಯಾನರ್ ಹಾಕಿದ್ದಾರೆ, ಆದರೆ ನಗರಸಭೆ ಅಧಿಕಾರಿಗಳು ಮೌನವಾಗಿದ್ದಾರೆ.
https://youtu.be/nzIl7A4NT44
ಇನ್ನೂ ನಮ್ಮ ಕಾರ್ಯಕರ್ತರು ಪೋಸ್ಟ್ರ್ ಹಾಕಿದ್ದಕ್ಕೆ ಪ್ರಕರಣ ದಾಖಲಿಸುವ ಪೊಲೀಸರು ರಾಹುಲ್ ಗಾಂಧಿ, ಸಿದ್ದರಾಮಯ್ಯ ಟಿ.ರಘುಮೂರ್ತಿ ಮೇಲೆ ಸುಮೊಟೋ ಪ್ರಕರಣ ದಾಖಲಿಸಲಿ ಎಂದು ಕಿಡಿ ಕಾರಿದರು.
ಇನ್ನೂ ಮಂಡಲ ಅದ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಸ್ಥಳೀಯ ಶಾಸಕರು ಇಡೀ ತಾಲೂಕು ಮಟ್ಟದ ಅಧಿಕಾರಿಗಳಿಗೆ ಭಯದ ವಾತವಾರಣ ನಿರ್ಮಿಸಿ ಅವರನ್ನು ತಾವು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಪ್ರತಿ ಕಚೇರಿಯ ಮುಂದೆ ಪ್ರತಿಭಟನೆ ಮೂಲಕ ನಮ್ಮ ಹಕ್ಕು ಪಡೆಯಬೇಕಿದೆ.
ಭಾರತ್ ಜೋಡೋಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಂತೆ ಬಳಕೆ ಮಾಡಿಕೊಂಡಿದ್ದಾರೆ
ಇಡೀ ನಗರದಲ್ಲಿ ಯಾವುದೇ ಅಭಿವೃದ್ದಿ ಕಾಣದ ರಸ್ತೆ ತಗ್ಗುಗುಂಡಿಗಳು ರಾಹುಲ್ ಬಂದ ತಕ್ಷಣ ಮುಖ್ಯ ರಸ್ತೆ ಮಾತ್ರ ತಗ್ಗು ಗುಂಡಿ ಮುಚ್ಚುವುದಲ್ಲ ಪ್ರತಿ ವಾರ್ಡನಲ್ಲಿ ಸಮಸ್ಯೆ ಸರಿದೂಗಿಸಿ ಕ್ಷೇತ್ರದ ಶಾಸಕರಾಗಿರುವುದು ಸಾರ್ಥಕವಾಗುತ್ತದೆ ಎಂದು ಆಕ್ರೊಶ್ ವ್ಯಕ್ತಪಡಿಸಿದರು.
ಇನ್ನೂ ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ್, ಎಸ್ ಮೋರ್ಚಾ ಅಧ್ಯಕ್ಷ ಕಾಂತರಾಜ್, ಎಸ್ಟಿ ಮೋರ್ಚಾ ಅಧ್ಯಕ್ಷ ತಿಪ್ಪೆಸ್ವಾಮಿ, ಕಾರ್ಯಲಾಯದ ಅಧ್ಯಕ್ಷಮೋಹನ್ ಇತರರು ಇದ್ದರು.