ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯಿಂದ ರಾಹುಲ್‌ಗೆ ಅದ್ದೂರಿ ಸ್ವಾಗತ

ದಾರಿಯುದ್ದಕ್ಕೂ ವಿವಿಧ ಗಣ್ಯರ ಬ್ಯಾನರ್‌ಗಳ, ಕಟೌಂಟ್ಗಳು

ಕ್ಷೇತ್ರದಲ್ಲಿ ಸುಮಾರು 2 ದಿನಗಳ ಕಾಲ ರಾಹುಲ್ ನೆರಳು

ಕೋಟೆನಾಡಿನ ಏಕೈಕ ಕಾಂಗ್ರೇಸ್ ಪಕ್ಷದ ಶಾಸಕರ

ತವರೂರಲ್ಲಿ ರಾಹುಲ್ ವಾಸ್ತವ್ಯ

ಪಾದಯಾತ್ರೆಯಲ್ಲಿ ಸು.5 ಸಾವಿರ ಕಾಂಗ್ರೇಸ್ ಬಾವುಟ

ಮುಖ್ಯ ಅತಿಥಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ ವಿಶೇಷ

ಪಾದಯಾತ್ರಿಗಳಿಗೆ ಸು.1ಲಕ್ಷ ಜೋಡೋ ನೀರಿನ ಬಾಟಲ್

ಚಳ್ಳಕೆರೆ : ಕಾಗ್ರೇಸ್ ಯುವ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೊ ಪಾದಯಾತ್ರೆಗೆ ಕೋಟೆ ನಾಡಿನ ಚಳ್ಳಕೆರೆಯಲ್ಲಿ ಅಭೂತ ಪೂರ್ವ ಸ್ವಾಗತ ದೊರೆಯಿತು.
ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆಗೆ ಜನಸಾಗರದ ಮೂಲಕ ಅಭೂತ ಪೂರ್ವ ಸ್ವಾಗತ ಕೋರಿದರು.
ಇನ್ನೂ ವಿಶೇಷವಾಗಿ ಲಂಬಾಣಿ ಉಡುಗೆ ತೊಟ್ಟ ಮಹಿಳೆಯರು ವಿಶೇಷ ನೃತ್ಯದ ಮೂಲಕ ಚಳ್ಳಕೆರೆಗೆ ಬರಮಾಡಿಕೊಂಡರು. ಬೆಳಗ್ಗೆ 6ಗಂಟೆಯ ತನಕ ತುಂತುರು ಮಳೆ ಸುರಿದಿದ್ದರಿಂದ ರಾಹುಲ್ ಅವರ ಭಾರತ್ ಜೋಡೊ ಪಾದಯಾತ್ರೆಯೂ ಒಂದು ಗಂಟೆಗಳ ಕಾಲ ತಡವಾಗಿ ಪ್ರಾರಂಭವಾಯಿತು.
ಬೆಳಗ್ಗೆ 7.30 ಆರಂಭವಾಗುತ್ತಿದ್ದAತೆ ಪಾದಯಾತ್ರೆಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಾಹುಲ್ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷಕ್ಕೆ ಜೈಕಾರದ ಹೂ ಮಳೆ ಗೈದರು. ಮತ್ತೊಂದೆಡೆ ಕಾಲೇಜು ವಿದ್ಯಾರ್ಥಿಗಳು ಕೂಡ ಪಾದಯಾತ್ರೆ ಸಾಗುವ ರಸ್ತೆಯಲ್ಲಿ ನಿಂತು ಭಾರತ್ ಜೋಡೊ, ಭಾರತ್ ಜೋಡೊ ಎಂದು ಘೋಷಣೆಗಳನ್ನು ಕೂಗಿ ಪ್ರೋತ್ಸಾಹಿಸಿದರು.
ಹರ್ತಿಕೋಟೆಯಿಂದ ಚಳ್ಳಕೆರೆ ಮಾರ್ಗದ ಇಕ್ಕೆಲು ರಸ್ತೆಗಳಲ್ಲಿ ಹಾಗೂ ಮೇಲೆ ನೆರೆದಿದ್ದ ಜನಸ್ತೋಮಕ್ಕೆ ಕೈ ಬೀಸಿ ಮುಗುಲ್ನಕ್ಕ ರಾಹುಲ್ ಅಭಿನಂದನೆ ಸಲ್ಲಿಸಿ ಹೆಜ್ಜೆ ಹಾಕಿದರು. ಭಾರತ್ ಜೋಡೊ ಪಾದಯಾತ್ರೆಯ 12ನೇ ದಿನವಾದ ಇಂದು ಉತ್ಸಾಹದಿಂದಲೇ ಹೆಜ್ಜೆ ಹಾಕಿದ ರಾಹುಲ್ ಅವರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಕಾರಮಂಡಕ್ಕಿ ಮಿರ್ಚಿ ಸವಿದ ರಾಹುಲ್
ಹಿರಿಯೂರಿನ ವೇದಾವತಿ ಕಾಲೇಜಿನಿಂದ ಪಾದಯಾತ್ರೆ ಕೈಗೊಂಡಿದ್ದ ರಾಹುಲ್ ಒಂದೂವರೆ ತಾಸು ಐದು ಕಿಲೋ ಮೀಟರ್ ಪಾದಯಾತ್ರೆ ನಡೆದು, ರೊಟ್ಟಿ ಲ್ಯಾಂಡ್ ಡಾಬಾದಲ್ಲಿ ಅರ್ಧ ಗಂಟೆಗಳ ವಿಶ್ರಮಿಸಿ ಕಾರಮಂಡಕ್ಕಿ, ಮಿರ್ಚಿ ಸವಿದರು. ಈ ವೇಳೆ ಕಾರಮಂಡಕ್ಕಿ ಮಿರ್ಚಿ ಕುರಿತು ಡಾಬಾದ ಮಾಲೀಕರ ಬಳಿ ವಿಚಾರಿಸಿದಾಗ, ಈ ಭಾಗದ ಹೆಚ್ಚು ಸ್ವಾದ ಭರಿತ ತಿಂಡಿತಿನಿಸು ಇದಾಗಿದೆ ಎಂದು ತಿಳಿಸಿದರು. ಬಳಿಕ ರಾಹುಲ್ ತಮ್ಮ ಇಷ್ಟವಾದ ಸ್ಯಾಂಡ್ ವಿಚ್ ತಿನಿಸನ್ನು ಸೇವಿಸಿದರು.
ನಂತರ ಮುಖಂಡರೊAದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು.
ರಾಹುಲ್ ಅವರು ಪಾದಯಾತ್ರೆಯ ಉದ್ದಕ್ಕೂ ನೆರೆದಿದ್ದ ಜನರು ಹಾಗೂ ಕೂಲಿ ಕಾರ್ಮಿಕರತ್ತ ಹೋಗಿ ಮಾತನಾಡಿಸಿದರು. ಹರ್ತಿಕೋಟೆಯಿಂದ ಸುಮಾರು 2 ಗಂಟೆಗಳ ಕಾಳ 12 ಕಿಲೋ. ಪಾದಯಾತ್ರೆ ದೂರ ನಡೆದರು ರಾಹುಲ್ ದೇವಿ ಹೋಟೆಲ್ ನಲ್ಲಿ ಚಹಾ ಸೇವನೆ ಮಾಡಿದರು ನಂತರ ಸಾಣಿಕೆರೆಗೆ ಆಮಿಸಿ ವಿಶ್ರಾಂತಿ ಪಡೆದರು.
ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಎರಡೂ ಕಡೆ ಹಗ್ಗ ಹಿಡಿದುಕೊಂಡು ಪಾದಯಾತ್ರೆ ನಡೆಯುವುದಕ್ಕೆ ಸುಗಮವಾಗಿ ನೆರವಾದರು.

ಪಾದಯಾತ್ರೆಯಲ್ಲಿ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಎಐಸಿಸಿ ವೇಣುಗೋಪಾಲ್, ಪ್ರದಾನ ಕಾರ್ಯದರ್ಶಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ.ಹರಿಪ್ರಸಾದ್, ಡಿ.ಕೆ.ಸುರೇಶ್, ಪ್ರಿಯಾಂಕ ಖರ್ಗೆ, ಮಾಜಿ ಸಚಿವ ಹೆಚ್. ಆಂಜನೇಯ, ಸುಧಾಕರ್, ಶಾಸಕರಾದ ರಘುಮೂರ್ತಿ, ಲಕ್ಷ್ಮೀ ಹೆಬ್ಬಾಳಕರ್, ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದರು.

Namma Challakere Local News
error: Content is protected !!