ವಿದ್ಯುತ್ ಕಂಪನಿಗಳ ಖಾಸಗೀಕರಣ : ಕೆಪಿ.ಭೂತಯ್ಯ ಆಕ್ರೋಶ
ಚಳ್ಳಕೆರೆ ತಾಲೂಕು ಕಛೇರಿ ಮುಂಬಾಗ ರಾಜ್ಯ ರೈತ ಸಂಘದಿAದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ರೈತರ ಪ್ರಮುಖ ಬೇಡಿಕೆಗಳಾದ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗಿಕರಣ, ಹಾಗೂ ಬೆಳೆ ಪರಿಹಾರ ವಿಳಂಭ ಈಗೇ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ನೀಡಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಪಿ.ಭೂತಯ್ಯ, ತಾಲೂಕು ಮಟ್ಟದಲ್ಲಿ ರೈತರ ಸಮಸ್ಯೆಗಳು ಉಲ್ಭಣವಾಗದಂತೆ ರೈತರ ಬೆಳೆ ಪರಿಹಾರ ನೀಡಿ, ಕೇಂದ್ರ ಹಾಗೂ ರಾಜ್ಯ ಸರಕಾರ ವಿದ್ಯುತ್ ಸರಬರಾಜು ಖಾಸಗಿಕರಣ ಮಾಡಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ, ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಉಪವಾಸವನ್ನು ಸತ್ಯಗ್ರಹ ಕೈಗೊಳ್ಳಬೇಕಾಗುತ್ತದೆ ಆದ್ದರಿಂದ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರÀ ಕೈ ಬಿಡಬೇಕೆಂದು ಮನವಿ ಮಾಡಿದರು
ಇನ್ನು ಮನವಿ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ ತಾಲೂಕಿನಲ್ಲಿ ತಾಲೂಕು ಆಡಳಿತ ರೈತರಿಗೆ ಸಂಬAಧಿಸಿದ ಪೌತಿ ಖಾತೆ, ಪೋಡಿ, ದಾರಿ ವಿವಾದ ಹಾಗೂ ರೈತರಿಗೆ ಸಂಬAಧಿಸಿದ ಪರಿಹಾರ ಇನ್ನು ಹತ್ತು ಹಲವು ಕಾರ್ಯಗಳನ್ನು ಪರಿಪೂರ್ಣವಾಗಿ ರೈತರ ಮನೆ ಬಾಗಿಲಿಗೆ, ಸಮಸ್ಯೆ ಮುಕ್ತ ಗ್ರಾಮದ ಪರಿಕಲ್ಪನೆಯ ಮೂಲಕ ಭೇಟಿ ನೀಡಿ ಈಗಾಗಲೇ ಶೇಕಡ 78 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದೆ ಮುಂದೆಯು ಉಳಿದ ಗ್ರಾಮಗಳ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ದೃಢಸಂಕಲ್ಪವನ್ನು ಮಾಡಿದೆ ರೈತರು ಕಚೇರಿಗಳಿಗೆ ಅಲಿಯದೆ ತಮ್ಮ ಸಮಸ್ಯೆಗಳನ್ನು ತಾವು ಇದ್ದಲ್ಲಿಯೇ ಸಮಸ್ಯೆಗಲಿಗೆ ಪರಿಹಾರ ಕೈಗೊಳ್ಳಬೇಕಾಗಿ ತಾಲೂಕು ಆಡಳಿತ ಮಹತ್ವದ ನಿರ್ಧಾರವನ್ನು ಕೈಗೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದರು.
ರೈತರ ಪ್ರತಿಯೊಂದು ಕಷ್ಟಗಳಿಗೆ ಸ್ಪಂದಿಸುವAತೆ ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ಪರಿಹಾರ ಅಂದರೆ 47675 ಹೆಕ್ಟೇರ್ ಶೇಂಗಾ 6374 ಎಕ್ಟರ್ ಈರುಳ್ಳಿ ಬೆಳೆಗೆ ಪರಿಹಾರ ನೀಡಿದ್ದೇವೆ ಇದರಿಂದ ಯಾವುದೇ ದೂರು ಬಂದಿಲ್ಲ ಬೆಳೆ ವಿಮೆ ಸಂಪೂರ್ಣವಾಗಿ ನೀಡಿದ್ದೇವೆ
25-30 ವರ್ಷಗಳಿಂದ ಬಗೆಹರಿಸದ ಇದ್ದ ದಾರಿ ವಿವಾದಗಳನ್ನು ಬಗೆಹರಿಸಲಾಗಿದೆ ಮುಂದೆಯೂ ಕೂಡ ಇದೆ ತಾಲೂಕು ಆಡಳಿತ ರೈತರ ಜೊತೆಯಲ್ಲಿದ್ದು ಸ್ಪಂದಿಸಲಿದೆ ಜಿಲ್ಲಾಧಿಕಾರಿಗಳು ಮತ್ತು ಸಚಿವ ಬಿ.ಶ್ರೀರಾಮುಲು ಮತ್ತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಹಕಾರದಿಂದ ರೈತರಿಗೆ ಇನ್ನಷ್ಟು ಜನಸ್ನೇಹಿ ಕಾರ್ಯಗಳನ್ನು ಮಾಡಲಿದೆ ಎಂದರು.