ಸರ್ವಧರ್ಮ ಸಮಾನತೆಗೆ ಈದ್ ಮಿಲಾದ್ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಇಂದಿನ ಆಧುನಿಕ ಜಗತ್ತಿನಲ್ಲಿ ಜಾತಿ ಧರ್ಮಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತಿದ್ದು ಅದರಂತೆ ತಮ್ಮ ತಮ್ಮ ಜಾತಿಗಳಲ್ಲಿ ಧರ್ಮಗುರುಗಳ ಮಾರ್ಗದರ್ಶನ ಪುಡೆಯುವುದರ ಮುಖ್ಯೆನಾ ಸರ್ವಧರ್ಮ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಗಾಂಧಿನಗರದ ಮದೀನ ಮಸೀದ ಬಳಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆಯ ಅಂಗವಾಗಿ ಮುಸ್ಲಿಂರಿAದ ಆಯೋಜಿಸಿದ್ದ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಜಾತಿಗಲ್ಲಿ ತಮ್ಮ ಧರ್ಮ ಗುರುಗಳು ಅವಶ್ಯವಾಗಿರುತ್ತದೆ, ಅವರ ಮಾರ್ಗಧರ್ಶನ ಸಮಾಜಕ್ಕೆ ಅವಶ್ಯಕ, ಅದರಂತೆ ಸಮಾಜದ ಉಳಿತಿಗಾಗಿ ಮೊಹಮ್ಮದ್ ಮೈಗಂಬರ್ ಮತ್ತು ಅಕ್ಕಮಹಾದೇವಿ, ಬಸವಣ್ಣ ಇತರರು ನೀಡಿರುವ ಸಂದೇಶಗಳು ಒಂದೇ ಆಗಿವೆ ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಮನುಷ್ಯ ಧರ್ಮ ಮುಖ್ಯವಾಗಬೇಕೆಂದು ಇಡೀ ವಿಶ್ವಕುಲಕ್ಕೆ ಮೊಹಮ್ಮದ್ ಮೈಗಂಬರ್ ಉತ್ತಮವಾದ ಸಂದೇಶವನ್ನು ಸಾರಿದ್ದರೆ, ಇಂತಹ ಮಹಾತ್ಮರ ಹಬ್ಬಗಳನ್ನು ಸರ್ವ ಜಾತಿಗಳು ಸೇರಿ ಮಾಡುವುದದಿಂದ ಸರ್ವರಲ್ಲೂ ಸಮಾನತೆ ಕಾಣಬಹುದು ಎಂದರು.
ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಮಾತನಾಡಿ, ಮನುಷ್ಯ ಯಾವ ಜಾತಿಯಲ್ಲಿ ಹುಟ್ಟಿದರು ಅವನ ರಕ್ತಮಾತ್ರ ಒಂದೇ ಆಗಿರುತ್ತದೆ. ಅದರಂತೆ ಯಾವುದೇ ಕುಲ ಮತ, ಪಂತದಲ್ಲಿ ಜನಿಸಿದರು ಮನುಷ್ಯ ಕುಲ ಒಂದೇ ಅವನ ರಕ್ತ ಒಂದೇ, ಮಹಮ್ಮದ್ ಪೈಗಂಬರ್ ಕೂಡ ಇದನ್ನೆ ಪ್ರಪಂಚ್ಕಕೆ ಸಾರಿದ್ದಾನೆ ಎಂದು ತಿಳಿಸಿದರು.
ಕೆಟಿ.ಕುಮಾರಸ್ವಾಮಿ ಮಾತನಾಡಿದರು, ಈ ಸಂಧರ್ಭದಲ್ಲಿ ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ವಿ.ವೈ ಪ್ರಮೋದ್, ಕೆ.ವೀರಭದ್ರಯ್ಯ, ರಮೇಶ್, ಪ್ರಕಾಶ್, ರಾಘವೇಂದ್ರ, ಸುಮಾ, ಸುಜಾತಾ, ಜೈ ತುನ್‌ಬಿ, ಜೆಡಿಎಸ್ ತಾಲುಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಆಮ್‌ಆದ್ಮಿ ಪಕ್ಷದ ಅಧ್ಯಕ್ಷ ಪಾಪಣ್ಣ, ಕೆ.ಟಿ.ಕುಮಾರಸ್ವಾಮಿ, ಜಿಪಂ.ಮಾಜಿ ಅಧ್ಯಕ್ಷ ರವಿಕುಮಾರ್, ಸದಸ್ಯ ಪ್ರಕಾಶ್‌ಮೂರ್ತಿ, ಮುಖಂಡ ಕೃಷ್ಣಮೂರ್ತಿ, ಸುರೇಶ್, ಪಾಲಯ್ಯ, ಮುಜೀಬ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎಂ.ಸಯ್ಯದ್ ನಬಿ, ಸುರಕ್ಷಾ ಪಾಲಿಕ್ಲಿನಿಕ್ ಮಾಲೀಕ ಪರೀದ್ ಖಾನ್, ಕಲಿಮುಲ್ಲಾ, ಖಾದ್ರಿ ಬಾಬಾ, ಅನ್ವರ್ ಮಾಸ್ಟರ್, ಕಲಾಮಿ ಮಾಸ್ಟರ್, ಎಸ್‌ಬಿ.ಜುಬೇರ್, ದಾದಪೀರ್, ಮುತುವಲ್ಲಿ, ಎಸ್.ಮುಜೀಬುಲ್ಲಾ, ಹೆಚ್.ಎಸ್.ಸೈಯದ್, ದಾವುದ್ ಮೋಲಾದ್, ಹೆಚ್.ಎಂ.ಎಸ್.ಶಕೀರ್, ಇಮ್ರಾನ್, ನಾಸೀರ್, ಎಸ್.ಎಂಬಿ. ಖಾದ್ರಿ, ಖಂಬ್ರೋಜ್ , ಜಿಲಾನ್,
ಫೋಟೊ: ಚಳ್ಳಕೆರೆ ನಗರದ ಮದೀನ ಮಸೀದ್‌ಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ಮೆರಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.