ಅಧಿಕಾರಿಗಳ ನಿಲ್ಯಕ್ಷಯ : ಜಾನುವಾರುಗಳ ಕುಡಿಯುವ ನೀರಿಗೆ ಗರ
ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ಕಟ್ಟಿಸಿದ ತೊಟ್ಟಿಗಳು ಇಂದು ಕಸದ ತೊಟ್ಟಿಗಳಾಗಿ ಪರಿಣಾಮಿಸಿದ್ದಾವೆ
ಹೌದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೊಳಗೆ ಪ್ರತಿ ಗ್ರಾಪಂಯಲ್ಲಿ ನಿರ್ಮಿಸಿದ ತೊಟ್ಟಿಗಳು ನೀರಿಲ್ಲದೆ ಇಂದು ಒಣಗಿವೆ,
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬುಡಕಟ್ಟು ಸಂಸ್ಕೃತಿ ಎಸ್ಟಿ ಸಮುದಾಯ ಹಟ್ಟಿಗಳನ್ನು ಹೊಂದಿರುವ ಪೆತ್ತಮ್ಮರಹಟ್ಟಿ, ವರವಿನೋರಹಟ್ಟಿ, ಬಂಗಾರದೇವರಹಟ್ಟಿ, ಗ್ರಾಪಂ ಗ್ರಾಮಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಇಲ್ಲಿನ ಜನರು ಕೃಷಿ ಚಟುವಟಿಕೆ ಜತೆಗೆ ಪಶು, ಕುರಿ ಸಂಗೋಪನೆ ಮುಖ್ಯ ಕಸುಬಾಗಿದ್ದು ದೇವರ ಎತ್ತುಗಳು ಹಾಗೂ ಕುರಿ ಜಾನುವಾರ ಸಂಖ್ಯೆ ಹೆಚ್ಚಾಗಿದ್ದು ಇಲ್ಲಿನ ಜನರು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಜಾನುವಾರುಗಳು ಕುಡಿಯಲು ನೀರು ಸಿಗದೆ ದೂರದ ತೋಟಗಳಿಗೆ ಹೋಗುವ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇನ್ನೂ ಎಚ್ಚೆತ್ತುಕೊಳ್ಳಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಮೌನ ವಹಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರತಿ ಹಟ್ಟಿಗಳ ಬಳಿ ಜಾನುವಾರುಗಳಿಗಾಗಿ ಗ್ರಾಪಂ ವತಿಯಿಂದ ಸಾರ್ವಜನಿಕ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ನಿರ್ಮಿಸಿರುವ ಜಾನುವಾರುಗಳು ಕುಡಿಯುವ ನೀರಿಗಾಗಿ ಸೀಮೆಂಟ್ ತೊಟ್ಟಿಗಳನ್ನು ನಿರ್ಮಿಸಿದ್ದು ನೀರಿನ ಕೊರತೆ ಇಲ್ಲದಿದ್ದರು ಸಹ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷತೆಯಿಂದ ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಟ್ಟಿಗಳು ಖಾಲಿಯಾಗಿದ್ದು. ದನಕರುಗಳಿಗೆ ಕುಡಿಯುವ ನೀರಿನ ಭಾಗ್ಯ ಕಂಡಿಲ್ಲ.
ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದರೂ ಸಹ ದನಕರುಗಳಿಗಾಗಿ ಕಟ್ಟಿರುವ ಕುಡಿಯುವ ನೀರಿನ ತೊಟ್ಟಿಗಳು ದನಕರುಗಳ ಪಾಲಿಗೆ ಮರೀಚಿಕೆಯಾಗಿವೆ.
ಈಗಲಾದರೂ ಸಂಬAಧ ಪಟ್ಟ ಅಧಿಕಾರಿಗಳು ನನ್ನಿವಾಳ ಸೇರಿದಂತೆ ತಾಲೂಕಿನ ಬತೇಕ ಗ್ರಾಪಂ ವ್ಯಾಪ್ತಿಯಲ್ಲಿ ಜಾನುವರುಗಳು ಕುಡಿಯುವ ನೀರಿನ ತೊಟ್ಟಿಗಳ ದುರಸ್ಥಿ ಹಾಗೂ ನೀರನ್ನು ತುಂಬಿಸಿ ದನಕರುಗಳ ನೀರಿನ ದಾಹ ತೀರಿಸಲು ಮುಂದಾಗುವರೇ ಕಾದು ನೋಡ ಬೇಕಿದೆ.
ಪೋಟೋ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಪೆತ್ತಮ್ಮರಹಟ್ಟಿ ಸೇರಿದಂತೆ ವಿವಿಧ ಹಟ್ಟಿಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಿರ್ಮಿಸಿರುವ ತೊಟ್ಟಿಗಳು ನೀರಿಲ್ಲದೆ ಖಾಲಿ ಖಾಲಿ ನಿರ್ವಹಣೆ ಇಲ್ಲದೆ ಗಿಡಗೆಂಟೆಗಳು ಬೆಳೆದು ಬಿರುಕು ಬಿಟ್ಟಿರುವುದು.