ನವರಾತ್ರಿ ಉತ್ಸವಕ್ಕೆ ತನ್ನದೆ ಆದ ಶಕ್ತಿ ಇದೆ : ಜೆಡಿಎಸ್ ಅಭ್ಯರ್ಥಿ ಎಂ.ರವೀಶ್
ಚಳ್ಳಕೆರೆ : ನಾಡಿನಾದ್ಯಾಂತ ಸಡಗರ ಸಂಭ್ರಮದಿAದ ಆಚರಿಸುವ ನಾಡ ಹಬ್ಬದ ದಸರಾ ಅಂಗವಾಗಿ ಒಂಬ್ಬತ್ತು ದಿನಗಳ ನವರಾತ್ರಿ ತರುವಾಯ ಜರುಗುವ ಉತ್ಸವ ಬನ್ನಿ ಪೂಜೆಗೆ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರೀ ಕಾಟಲಿಂಗೇಶ್ವರಸ್ವಾಮಿ ಅಂಬಿನೋತ್ಸವ ಅದ್ದೂರಿಯಾಗಿ ಜರುಗಿತು.
ಚಳ್ಳಕೆರೆ ತಾಲೂಕಿನ ಕಾಪರಹಳ್ಳಿ ಗ್ರಾಮದ ಶ್ರೀ ಕಾಟಂಲಿಗೇಶ್ವರ ಅಂಬಿನೋತ್ಸವದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಭಾಗವಹಿಸಿ ಮಾತನಾಡಿದ ಅವರು ಧಾರ್ಮಿಕ ಸಂಪ್ರದಾಯಗಳು ನಮ್ಮ ಪೂರ್ವಿಕರಿಂದ ಬಂದಿರುವುದು ನಮ್ಮ ಆರಾಧ್ಯ ದೈವಗಳ ಬಗ್ಗೆ ನಮ್ಮ ನಂಬಿಕೆ ಹಾಗೂ ಭಕ್ತಿ ಪೂರ್ವಕ ಪ್ರಣಾಮಗಳು, ಈ ಭಾಗದಲ್ಲಿ ಮಳೆ ಬೆಳೆ ಹಾಗೂ ಸಮೃದ್ದಿಗಾಗಿ ದೇವರ ಕೃಪೆಗೆ ಪ್ರತಿಯೊಬ್ಬರು ಬದ್ದರಾಗಬೇಕು ಎಂದರು.
ಈದೇ ಸಂಧರ್ಭದಲ್ಲಿ ಪಿ.ತಿಪ್ಪೇಸ್ವಾಮಿ, ನಗರಸಭಾ ಸದಸ್ಯ ವಿ.ವೈ.ಪ್ರಮೋದ್ ಹಾಗೂ ಬುಡ್ನಹಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ಸೋಮಶೇಖರ್, ಮಾಜಿ ನಗರಸಭಾ ಸದಸ್ಯ ತಿಪ್ಪೇಸ್ವಾಮಿ, (ಗಾಡಿ ಸಂಘದ ಅಧ್ಯಕ್ಷ)ಹೆಗ್ಗೆರೆ ಆನಂದಪ್ಪ, ಎಸ್.ಶ್ರೀಧರಚಾರ್, ಹಾಗೂ ಕಾಪರಹಳ್ಳಿಯ ಗ್ರಾಮಸ್ಥರ ಜೊತೆಗೆ ಭಾಗವಹಿಸಿದೆವು…

About The Author

Namma Challakere Local News
error: Content is protected !!