ಗಾಂಧಿ ಜಯಂತಿ ಪ್ರಯುಕ್ತ “ಪೌರಕಾರ್ಮಿಕರ ಪಾದ ತೊಳೆದ” ಬಿಜೆಪಿ ಮುಖಂಡರು
ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣದ ಪೌರಕಾರ್ಮಿಕರ ಪಾದ ತೊಳೆದು ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಗಾಂಧಿ ಜಯಂತಿ ಆಚರಣೆ ಮಾಡಿದ್ದಾರೆ.
ಹೌದು ನಿಜಕ್ಕೂ ಇದು ವಿಶೇಷವಾಗಿ ಕಂಡರು ಆಶ್ಚರ್ಯವಿಲ್ಲ, ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪಟ್ಟಣದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರನ್ನು ಗುರುತಿಸಿ ಅವರಿಗೆ ಪಾದ ಪೂಜೆ ಮಾಡುವ ಮೂಲಕ ಅವರನ್ನು ಸನ್ಮಾನಿಸುವುದು ಕಂಡು ಬಂದಿತು.
ಇನ್ನೂ ಬಿಜೆಪಿ ಮಂಡಲ ಎಸ್‌ಸಿ ಮೋರ್ಚಾ ಅಧ್ಯಕ್ಷ ಶಿವದತ್ತ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ 72ನೇ ವರ್ಷದ ಹುಟ್ಟುಹಬ್ಬದ ಹಾಗೂ 153ನೇ ಗಾಂಧೀಜಿ ಜಯಂತಿ ಅಂಗವಾಗಿ ಎಸ್ಸಿ ಮೋರ್ಚಾ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಪೌರಕಾರ್ಮಿಕರನ್ನು ಗೌರವಿಸಬೇಕು ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು ಈಡೀ ನಗರ ಸ್ವಚ್ಚವಾಗಿರಲು ಇವರು ಪ್ರಮುಖರು ಇಂತಹವರನ್ನು ಸದಾ ಗೌರವಿಸುವ ಮನೋಭಾವ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಎಂವೈಟಿ.ಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಹಿರೇಹಳ್ಳಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ, ಎತ್ತಿನಹಟ್ಟಿ ದೇವರಾಜ್, ಸಂಚಾಲಕ ಕೆಟಿ ಸ್ವಾಮಿ, ಕಚೇರಿ ಸಿಬ್ಬಂದಿ ತಿಪ್ಪೇಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಪಟ್ಟಣ ಪಂಚಾಯತಿ ಎಲ್ಲಾ ಪೌರಕಾರ್ಮಿಕರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!