ಸರಕಾರದ ಸ್ವಾಮ್ಯದ ಸ್ವತ್ತು ಉಳಿಸಲು ಸಾರ್ವಜನಿಕರ ಆಸಕ್ತಿ ಮುಖ್ಯ
ಚಳ್ಳಕೆರೆ : ಪ್ರತಿಯೊಂದು ಗ್ರಾಮಗಳು ವಿವಾದಗಳಿಂದ ಮುಕ್ತವಾದಾಗ ಮಾತ್ರ ನ್ಯಾಯಾಲಯಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಹೊರೆ ಕಮ್ಮಿಯಾಗುತ್ತದೆ ಪ್ರತಿಯೊಂದು ಸಣ್ಣ ಪುಟ್ಟ ವಿವಾದಗಳಿಗೂ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳ ಮೊರೆ ಹೋಗುವುದನ್ನು ಸಾರ್ವಜನಿಕರು ಬಿಡಬೇಕು ಗ್ರಾಮ ಮಟ್ಟದಲ್ಲಿ ರಾಜಿ ಮುಖಾಂತರ ಕೆಲವೊಂದು ಸಿವಿಲ್ ಸ್ವರೂಪದ ವಿವಾದಗಳನ್ನು ಬಗೆಹರಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ
ಈಗಾಗಲೇ ರೈತರು ಬೆಳೆ ನಷ್ಟ ಮತ್ತು ಬೆಲೆ ಏರುಪೇರಿಂದ ಹೈರಣಾಗಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗೆ ಹೋದರೆ ವೃತ ಸಣ್ಣಪುಟ್ಟ ಖರ್ಚನ್ನು ಬರಿಸಬೇಕಾಗುತ್ತದೆ ಇದರಿಂದ ಇನ್ನೂ ಸಾರ್ವಜನಿಕರು ಹೊರೆ ಹೊರಬೇಕಾಗುತ್ತದೆ.
ಆದುದರಿಂದ ಪ್ರತಿಯೊಬ್ಬ ಸಾರ್ವಜನಿಕರು ಮಾನವೀಯತೆ ಮತ್ತು ಅಂತಃಕರಣದಿAದ ಸಣ್ಣ ಪುಟ್ಟ ವಿವಾದಗಳಿಗೆ ಗಂಭೀರ ಸ್ವರೂಪ ನೀಡದೆ ಗ್ರಾಮಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕೆಂದು ತಹಶೀಲ್ದಾರ್ ಎನ್.ರಘುಮೂರ್ತಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಅವರು ತಾಲೂಕಿನ ದೊಡ್ಡ ಚೆಲ್ಲೂರು, ಕೊನಿಗರಹಳ್ಳಿ, ದಾರಿ ವಿವಾದಕ್ಕೆ ಸಂಬAಧಿಸಿದAತೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸರ್ವೇ ರವರಿಂದ ನಕಾಶ ಕಂಡ ದಾರಿ ಅಳತೆ ಮಾಡಿಸಿ ನಕಾಶ ಕಂಡ ಒತ್ತುವರಿಯ ಸ್ವರೂಪವನ್ನು ಗ್ರಾಮಸ್ಥರಿಗೆ ತಿಳಿಸಿ ಸರ್ಕಾರಿ ಸ್ವಾಮ್ಯದ ಕಾಲುದಾರಿ ಹಳ್ಳ ಕರಾಬು ಮತ್ತ ರಾಜಕಾಲುವೆ ಮುಂತಾದ ಸ್ವತ್ತುಗಳು ಸಾರ್ವಜನಿಕರಿಗೆ ಅತಿ ಉಪಯುಕ್ತವಾದವು ಸಂರಕ್ಷಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಿದೆ ಎಂದರು.
ಅದರAತೆ ಅತಿಕ್ರಮಿಸಿಕೊಂಡAತ ಮೂರು ಸ್ವತ್ತುಗಳನ್ನು ಸರ್ಕಾರಕ್ಕೆ ಮುಕ್ತಗೊಳಿಸಿದರು
ಈ ಸಂದರ್ಭದಲ್ಲಿ ತಾಲೂಕು ಸರ್ವೇಯರ್ ಪ್ರಸನ್ನ ಕುಮಾರ್, ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು