ಗಾಂಧಿ ಜಯಂತಿ ದಿನದಂದು ಸಾರ್ವಜನಿಕರ ಆರೋಗ್ಯ ತಪಾಸಣೆ ಶ್ಲಾಘನೀಯ ಕಾರ್ಯ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ, ಜಿಲ್ಲಾ ಸಮುದಾಯ ಆರೋಗ್ಯಧಿಕಾರಿಗಳ ಸಂಘ, ಹಾಗೂ ತಾಲೂಕು ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಮ್ಮಿಕೊಳ್ಳುವ ಮೂಲಕ ಈ ಭಾರಿ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಿದರು.
ಇನ್ನೂ ಈ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಗಾಂಧಿ ತತ್ವದ ಮಾರ್ಗದಲ್ಲಿ ನಾವೇಲ್ಲಾರೂ ನಡೆಯದಿದ್ದರು ಅವರ ಚಿಂತನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನೋಡಿಕೊಳ್ಳಬೇಕು, ಇಂದು ಅವರ ಜಯಂತಿಗೆ ಅರ್ಥ ಸಿಗಲು ಸಮುದಾಯ ಆರೋಗ್ಯ ಅಧಿಕಾರಿಗಳು ಉಚಿತ ಆರೋಗ್ಯ ತಪಾಸಣೆ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಈದೇ ಸಂಧರ್ಭದಲ್ಲಿ ಸಮುದಾಯ ಆರೋಗ್ಯ ಸಂಘದ ರಾಜ್ಯ ಸಂಘಟನಾ ಪ್ರತಿನಿಧಿ ಎಂ.ಎಸ್.ರಾಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮAಜುನಾಥ್, ತಾಲೂಕು ಸಂಘಟನಾ ಅಧ್ಯಕ್ಷ ಕೆ.ಕರಿಯಣ್ಣ, ತಾಲೂಕು ಸಂಘಟನಾ ಕಾರ್ಯದರ್ಶಿ ಶಿಲ್ಪ ಇತರರು ಪಾಲ್ಗೊಂಡಿದ್ದರು.