ತ್ಯಾಗ,ಸತ್ಯ ಮತ್ತು ಅಹಿಂಸೆ‌ ಮಾರ್ಗದ ಬಾಪುಜೀ ಇಂದು ದೇಶಕ್ಕೆ ಮಾದರಿ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ: ಸತ್ಯ ಮತ್ತು ಅಹಿಂಸೆಯ ಮೂಲಕ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಶಾಸಕ ಟಿ.ರಘುಮುರ್ತಿ ಹೇಳಿದ್ದಾರೆ.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ನಿಜವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಮಹನೀಯರನ್ನು ಹೋರಾಟವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಲು ಹೋರಟಿದ್ದಾರೆ,
ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಈ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ ಸಹ ಸರ್ಕಾರದ ಯಾವುದೇ ಸವಲತ್ತುಗಳನ್ನು ತಮ್ಮ ಸ್ವಂತ ಜೀವನಕ್ಕೆ ಬಳಸಿಕೊಳ್ಳದೆ, ಅತ್ಯಂತ ಸರಳ ರೀತಿಯಲ್ಲಿ ಬದುಕಿ ತೋರಿಸಿದ ಸರಳ, ಸಜ್ಜನಿಕೆಯ ಪ್ರಾಮಾಣಿಕತೆ ಹೊಂದಿದ ಪರಿಶುದ್ಧ ರಾಜಕಾರಣಿಯಾಗಿದ್ದರು ಎಂದು ತಿಳಿಸಿದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತ್ಯಾಗ, ಸತ್ಯ ಮತ್ತು ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ನೆನೆಯುವ ಸುದೀನ ಈ ದಿನವಾಗಿದೆ

ಈ ದೇಶವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಲು ಇಡೀ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟು ಶ್ರಮಿಸಿದ ಮಹಾತ್ಮ ಗಾಂಧೀಜಿಯವರ ತ್ಯಾಗ-ಬಲಿದಾನಗಳು ಇಂದಿಗೂ ಅನುಕರಣೀಯ ಇಂತಹ ಮಹಾನ್ ವ್ಯಕ್ತಿಯ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಿದೆ ಎಂದರು.

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯರಾದ ರಾಘವೇಂದ್ರ, ಸುಮ, ಕವಿತ, ರಮೇಶ್‌ಗೌಡ, ಪ್ರಕಾಶ್, , ಬಿಇಒ ಕೆ.ಸ್.ಸುರೇಶ್, ವೃತ್ತನಿರೀಕ್ಷಕ ಉಮೇಶ್,
ಪಶು ಸಹಾಯಕ ನಿರ್ದೇಶಕ ಡಾ.ರೇವಣ್ಣ,ರೇಷ್ಮೇ ಇಲಾಖೆ ಅಧಿಕಾರಿ ಕೆಂಚೋಜಿರಾವ್, ಕಸಬರಾಸ್ವನಿರೀಕ್ಷ ಲಿಂಗೇಗೌಡ, ಇತರರಿದ್ದರು.

About The Author

Namma Challakere Local News
error: Content is protected !!