ಚಳ್ಳಕೆರೆ ಶಾಸಕರ ಭವನದಲ್ಲಿ ಬಾಪುಜೀ ನಮನ : ಭಾವ ಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿಯಿಂದ ಪುಷ್ಪ ನಮನ
ಚಳ್ಳಕೆರೆ : ಪ್ರಪಂಚದಲ್ಲಿ ಮಾದರಿಯಾಗಿ ಯಾರಾದರೂ ಉಳಿದರೆ ಅದು ಗಾಂಧಿಜೀ ಒಬ್ಬರೇ ಮಾತ್ರ ಅಂತಹ ಮಹಾನ್ ಚೇತನರು ಸದಾರಣ ಜೀವನ ಪದ್ಧತಿಯ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ
ಜಯಂತಿ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಪರ್ಚಾನೆ ಅರ್ಪಿಸಿ ನಂತರ ಮಾತನಾಡಿದರು
ಇನ್ನೂ ಕಾಂಗ್ರೇಸ್ ಮುಖಂಡ ಸೈಯದ್ ಮಾತನಾಡಿ, ಗಾಂಧಿ ಜಯಂತಿ ಇಂದು ಆಚರಿಸುತ್ತಿರುವುದು ಇಂದು ನಮಗೆಲ್ಲ ಸಂತಸ ತಂದಿದೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ನೇತಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿ ಗೊಳಿಸಿಬೇಕು ಎಂದು ಕರೆ ನೀಡಿದರು.
ಜಿಪಂ.ಮಾಜಿ ಸದಸ್ಯ ಪ್ರಕಾಶ ಮೂರ್ತಿ,
ನಗರಸಭೆ ಸದಸ್ಯೆ ಕವಿತಾ, ಮಾತನಾಡಿದರು
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಸದಸ್ಯೆ ಸುಮಾ, ಜೈತುಂನ್ ಬಿ, ಕವಿತಾ, ರಮೇಶ್ ಗೌಡ, ರಾಘವೇಂದ್ರ, ಕೆ.ವೀರಭದ್ರಪ್ಪ, ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತಿಪ್ಪೆಸ್ವಾಮಿ, ಪರುಶುರಾಂಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಿರಣ್ ಶಂಕರ್, ಆರ್ .ಪ್ರಸನ್ನ ಕುಮಾರ್, ಕೃಷ್ಣ ಮೂರ್ತಿ, ದ್ಯಾವರನಹಳ್ಳಿ ತಿಪ್ಪೆಸ್ವಾಮಿ, ಮಾಜಿ ಜಿಪಂ.ಸದಸ್ಯ ಪ್ರಕಾಶ ಮೂರ್ತಿ, ಭೂತಲಿಂಗಪ್ಪ, ಗೀತಬಾಯಿ, ಸರಸ್ವತಿ, ಟಿ.ವಿಜಯ್ ಕುಮಾರ್, ಇತರರು ಇದ್ದರು.