ನಾಯಕನಹಟ್ಟಿ ಹಿರೆಕೆರೆಗೆ ಪೂರ್ಣಕುಂಭದೊAದಿಗೆ ಬಾಗಿನ ಅರ್ಪಿಸಿದ ಸಚಿವ ಶ್ರೀರಾಮುಲು
ಚಳ್ಳಕೆರೆ : ಸಣ್ಣಕೆರೆಗೆ ಕೂಡ ನೀರು ಹಾಯಿಸಲು ಸರಕಾರ ಚಿಂತನ ನಡೆಸುತ್ತಿದೆ, ಕ್ಷೇತ್ರದ ಸುಮಾರು 78ಕೆರೆಗಳ ಭರ್ತಿಗೆ ಸರಕಾರ ಕಾಯಕಲ್ಪ ಯೋಜನೆ ರೂಪಿಸುತ್ತಿದೆ, ಸುಮಾರು 618ಕೋಟಿಗಳ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಯೋಜನೆ ಸಿದ್ದವಾಗಿದೆ ಎಂದು ಸಾರಿಗೆ ಸಚಿವರು ಹಾಗೂ ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ತಾಲೂಕಿನ ನಾಯಕನಹಟ್ಟಿ ಹಿರೆಕೆರೆಯಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಡೀ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ತಕ್ಷಣ ಈಡೀ ರಾಜ್ಯ ಹಸಿರಾಗುತ್ತದೆ, ಅದರಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸುಮಾರು ಕೆರೆಗಳು ತುಂಬಿ ರೈತರಿಗೆ ವರದಾನವಾಗಿದೆ,
ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಬರಡಾಗುತ್ತದೆ :
ಕಾಂಗ್ರೇಸ್ ಸರಕಾರ ಇರುವಾಗ ಕ್ಷೇತ್ರದಲ್ಲಿ ಬರಡು, ಬೆಂಗಾಡು ಭೂಮಿ ಸಿಳಿಹೊಗುವಷ್ಟು ಭೂಮಿ ಬರಡಾಗುತಿದೆ, ಆದರೆ ನಮ್ಮ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿAದ ಈಡೀ ಕ್ಷೇತ್ರದಲ್ಲಿ ಸಮೃದ್ದಿ ಮಳೆ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇನ್ನೂ ಕಳೆದ 75 ವರ್ಷಗಳ ಕಾಂಗ್ರೇಸ್ ಪಕ್ಷದ ಸಾಧನೆ ಶೂನ್ಯ, ಅವರ ಆಡಳಿತ ಇರುವಾಗಲೆಲ್ಲ ರಾಜ್ಯದಲ್ಲಿ ಬರೀ ಬರಗಾಲ, ಮಳೆಯಿಲ್ಲದೆ ರೈತರ ಗೋಳಾಟ ಈಗೇ ಆಡಳಿತ ನಡೆಸಿದ್ದಾರೆ, ಆದರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗಲೆಲ್ಲ ಈಡೀ ರಾಜ್ಯದಲ್ಲಿ ಸಮೃದ್ದಿ ಮಳೆ ಬೆಳೆಯಾಗಿ ರೈತ ಕುಲ ಹಸನಾಗುತ್ತಿದೆ ಎಂದು ಕಾಂಗ್ರೇಶ್ ಪಕ್ಷಕ್ಕೆ ಟಾಂಗ್ ನೀಡಿದರು.
ಇನ್ನೂ ಕೇವಲ ಎರಡು ತಿಂಗಳೊಳಗೆ ತುಂಗಾಭದ್ರಾ ಹಿನ್ನಿರು ಯೋಜನೆ, ಜೊತೆಗೆ ಅಪ್ಪರಭದ್ರಾ ಯೋಜನೆ ಕಾಮಗಾರಿ ಮುಗಿದು ಕುಡಿಯುವ ನೀರು ನಮ್ಮ ಭಾಗದ ರೈತರಿಗೆ ಸಿಗುತ್ತದೆ.
ಸರಕಾರದಿಂದ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಕೆ ತಹಶೀಲ್ದಾರ್, ಪಟ್ಟಣ ಪಂಚಾಯಿತ್ ವತಿಯಿಂದ ಆಯೋಜನೆ ಮಾಡಲಾಗಿತ್ತು.
ಕ್ಷೇತ್ರಕ್ಕೆ ಶಾಸಕರ ಅನುದಾನ :
ಕ್ಷೇತ್ರದ ಜನರ ಹಿತ ದೃಷ್ಠಿಯಿಂದ ಸುಮಾರು 2ಸಾವಿರ ಕೋಟಿ ಅನುದಾನ ತಂದಿದ್ದೆನೆ ಜನರ ಕಾಯಕ ನಿಷ್ಟೆ ಮೆರೆವ ನನಗೆ ಮತ್ತೊಮ್ಮೆ ಅವಕಾಶ ನೀಡಿದರೆ ನಿಮ್ಮ ಸೇವೆ ಮಾಡಲು ಸಿದ್ದನಿದ್ದೆನೆ ಎಂದು ಮತ್ತೆ ತನ್ನ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಈಡೀ ಕ್ಷೇತ್ರದ ಜನರಲ್ಲಿ ಸಂಭ್ರಮ ಮನೆ ಮಾಡಿದೆ, ಈ ಭಾಗದ ರೈತರ ಜೀವನಾಡಿಯಾದ ದೊಡ್ಡಕೆರೆ ತುಂಬಿ ಈಡೀ ರೈತ ಕುಲಕ್ಕೆ ವರದಾನವಾಗಿದೆ ಕಳೆದ 12 ವರ್ಷಗಳ ನಂತರ ಕೆರೆ ತುಂಬಿರುವುದು ಸಂತಸ ತಂದಿದೆ ಎಂದರು.
ಎತ್ತಿನಹಟ್ಟಿ ಗೌಡ್ರು ಮಾತನಾಡಿ, ಕಳೆದ ಹಲವಾರು ವರ್ಷಗಳ ರೈತರ ಕಷ್ಟಗಳಿಗೆ ಕರುಣಿಸಿದ ವರುಣರಾಯನ ಕೃಪೆಯಿಂದ 12 ವರ್ಷಗಳ ತರುವಾಯ ಹಿರೆಕೆರೆ ತುಂಬಿರುವುದು ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ, ಇನ್ನೂ ಸಣ್ಣಕೆರೆಗೆ ನೀರು ಬಾರದೆ ಇರುವುದು ವಿಷಾಧನೀಯ ಆದ್ದರಿಂದ ದೊಡ್ಡಕೆರೆ ತುಂಬಿ ವ್ಯರ್ತವಾಗಿ ಹರಿಯುವ ನೀರು ಆಂದ್ರಕ್ಕೆ ಹೊಗುತ್ತಿದೆ ಆದ್ದರಿಂದ ದೊಡ್ಡಕೆರೆ ನೀರು ಭರ್ತಿಯಾಗಿ ವ್ಯರ್ಥವಾಗಿ ಹರಿಯುವ ನೀರಿಗೆ ಸಣ್ಣಕೆರೆಗೆ ಬಿಡಲು ಒಂದು ಕಿಲೋ ಮೀಟರ್ ಉದ್ದದ ಪೈಪ್ ಲೈನ್ ಮಾಡಿ ಸಣ್ಣಕೆರೆಗೆ ಭರ್ತಿ ಮಾಡಲು ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಈದೇ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾ ಅಧ್ಯಕ್ಷ ಮುರುಳಿ, ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಚಳ್ಳಕೆರೆ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮೊಳಕಾಲ್ಮೂರು ಮಂಡಲ ಅಧ್ಯಕ್ಷ ಡಾ.ಮಂಜುನಾಥ್, ಎಂ.ವೈಟಿ ಸ್ವಾಮಿ, ಎತ್ತಿನ ಹಟ್ಟಿಗೌಡ್ರು, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ.ರಾಮರೆಡ್ಡಿ, ತಹಶೀಲ್ದಾರ್ ಎನ್.ರಘುಮೂರ್ತಿ, ಪೌರಾಯುಕ್ತೆ ಲೀಲಾವತಿ, ಮೋಹನ್, ಮಂಜುನಾಥ್, ಪರ‍್ಲಮುತ್ತಪ್ಪ, ಅಶ್ವತ್‌ನಾಯಕ, ಪಾಪೇಶ್‌ನಾಯಕ, ಹನುಮಂತರಾಯಪ್ಪ, ಚಳ್ಳಕೆರೆ ಮಂಡಲ ಕಾರ್ಯದರ್ಶಿ ಕೃಷ್ಣೆಗೌಡ, ಗಂಗಾಧರ್, ಪಟ್ಟಣ ಪಂಚಾಯಿತ್ ದೇವರಾಜ್, ವಿನೂತ, ಮಹಾಂತೇಶ್, ಪರÀಮೇಶ್, ಪ್ರಕಾಶ , ಮಲ್ಲೆಶ್, ಇತರರು ಪಾಲ್ಗೊಂಡಿದ್ದರು.
1.ಪೋಟೋ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಿರೆಕೆರೆಯಲ್ಲಿ ಸಚಿವ ಬಿ.ಶ್ರೀರಾಮುಲು ಬಾಗಿನ ಅರ್ಪಣೆ ಮಾಡಿದರು.
2.ಪೋಟೋ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಿರೆಕೆರೆಯಲ್ಲಿ ಸಚಿವ ಬಿ.ಶ್ರೀರಾಮುಲು ಬಾಗಿನ ಅರ್ಪಣೆ ಆಗಮಿಸಿದ ಸಂಧರ್ಭದಲ್ಲಿ ಬಾಳೆಕಾಯಿ ರಾಮದಾಸ್ ಬೃಹತ್ ಹೂವಿನ ಮಾಲೆಯನ್ನು ಕ್ರೇನ್ ಮೂಲಕ ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ಅರ್ಪಿಸಿದರು.
3.ಪೋಟೋ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಿರೆಕೆರೆಯಲ್ಲಿ ಸಚಿವ ಬಿ.ಶ್ರೀರಾಮುಲು ಬಾಗಿನ ಅರ್ಪಣೆ ಆಗಮಿಸಿದ ಸಂಧರ್ಭದಲ್ಲಿ ಪೂರ್ಣ ಕುಂಭ ಮೇಳ, ಹಾಗೂ ವಾಧ್ಯ ವೃಂದ