ಸಚಿವ ಶ್ರೀರಾಮುಲು ರೈತ ಜಮೀನುಗಳಿಗೆ ಬೇಟಿ ನೀಡಿಲ್ಲ : ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿಬಿ.ಮುದಿಯಪ್ಪ ಆರೋಪ

ಚಳ್ಳಕೆರೆ : ಕಳೆದ ಒಂದು ತಿಂಗಳಿನಿAದ ಸತತ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿವೆ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿಬಿ.ಮುದಿಯಪ್ಪ ಸರಕಾರ ಪರಿಹಾರ ನೀಡುವಲ್ಲಿ ಮೀನಾಮೇಶ ಮಾಡುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ನಾಯಹಕನಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿಯ ಸುತ್ತ ಮುತ್ತಲಿನ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ಹೇಳಿ ಮಾತನಾಡಿದ್ದಾರೆ. ರೈತ ಸಾಲ ಮಾಡಿ ರೂ.2000 ಅದರಂತೆ ಒಂದು ಕೆಜಿ ಈರುಳ್ಳಿ ಬೀಜವನ್ನು ತಮ್ಮ ಜಮೀನುಗಳಿಗೆ ಹಾಕಿದ್ದಾರೆ ಒಟ್ಟಾರೆ ಒಬ್ಬ ರೈತ ಒಂದು ಎಕರೆಗೆ ರೂ. 1 ಲಕ್ಷದಂತೆ ವೆಚ್ಚವನ್ನು ಮಾಡಿದ್ದಾನೆ
ಆದರೆ ಸರ್ಕಾರ ಯಾವುದೇ ಪರಿಹಾರವನ್ನು ಇದುವರೆಗೂ ರೈತರಿಗೆ ನೀಡಿಲ್ಲ. ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರು ಸಾರಿಗೆ ಸಚಿವರಾದಂತಹ ಬಿ.ಶ್ರೀರಾಮುಲು ರವರು ಇದುವರೆಗೂ ಯಾವುದೇ ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ ರೈತರಿಗೆ ಧೈರ್ಯ ಹೇಳುವ ಕಾಳಜಿ ಅವರಿಗಿಲ್ಲ.
ಸಚಿವ ಬಿ.ಶ್ರೀರಾಮುಲುರವರಲ್ಲಿ ಒಂದು ಮನವಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಬಹಳ ಹಿಂದುಳಿದ ಪ್ರದೇಶ ಈ ಭಾಗದ ರೈತರು ಹಾರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರದೇಶವಾಗಿದೆ

ಸಚಿವ ಬಿ ಶ್ರೀರಾಮುಲು ರವರು ಆದಷ್ಟು ಬೇಗ ನಮ್ಮ ಹೋಬಳಿ ರೈತರಿಗೆ ಪರಿಹಾರವನ್ನು ಕೊಡಿಸಬೇಕು ರೈತರ ಕಷ್ಟಗಳಿಗೆ ಸ್ಪಂದಿಸುವAತಹ ಕೆಲಸವನ್ನು ಸಚಿವರು ಮಾಡಬೇಕು ಸರ್ಕಾರ ಮಾಡದಿದ್ದ ಪಕ್ಷದಲ್ಲಿ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Namma Challakere Local News
error: Content is protected !!