ರಾಹುಲ್ ಕಾಲ್ನಡಿಗೆ ಬಿಜೆಪಿಗೆ ನಡುಕ
ಭ್ರಷ್ಟ ಭಾಜಪ ವಿರುದ್ಧ ಎಲ್ಲೆಡೆ ಆಕ್ರೋಶ
ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿಕೆ
ಭರಮಸಾಗರದಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆ

ಚಿತ್ರದುರ್ಗ, ಸೆ. 26: ದೇಶದ ಏಕತೆಗಾಗಿ ರಾಷ್ಟç ನಾಯಕ ರಾಹುಲ್ ಗಾಂಧಿ
ಆರAಭಿಸಿರುವ ಭಾರತ್ ಜೋಡೋ ಯಾತ್ರೆ ಬಿಜೆಪಿ ನಾಯಕರಲ್ಲಿ ನಡುಕು
ಉಂಟು ಮಾಡಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.
ಭರಮಸಾಗರದಲ್ಲಿ ಆಯೋಜಿಸಿದ್ದ ಯಾತ್ರೆಯ ಪೂರ್ವಭಾವಿ ಸಭೆ ಉದ್ಘಾಟಿಸಿ
ಮಾತನಾಡಿದ ಅವರು,
ಯಾತ್ರೆಗೆ ವ್ಯಕ್ತವಾಗುತ್ತಿರುವ ಜನಬೆಂಬಲದಿAದ ವಿಚಲಿತರಾಗಿರುವ ಬಿಜೆಪಿ
ನಾಯಕರು, ಇಲ್ಲ-ಸಲ್ಲದ ಸುಳ್ಳು ಸುದ್ದಿ ಹರಡಿಸಲು ಯತ್ನಿಸಿ
ವಿಫಲರಾಗುತ್ರಿದ್ದಾರೆ.ವರ್ಷಕ್ಕೆ ಎರಟು ಕೋಟಿ ಉದ್ಯೋಗ, ಪ್ರತಿ ವ್ಯಕ್ತಿ ಬ್ಯಾಂಕ್
ಖಾತೆಗೆ ಹದಿನೈದು ಲಕ್ಷ ಹೀಗೆ ಹೀಗೆ ಸಾಲು ಸಾಲು ಭರವಸೆ ನೀಡಿ ಅಧಿಕಾರಕ್ಕೆ
ಬಂದ ಬಿಜೆಪಿ ಇದ್ದ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಬೆಲೆ ಏರಿಕೆ ಮೂಲಕ
ಜನರ ಹಣಕ್ಕೆ ಕನ್ನ ಹಾಕಿದೆ ಎಂದು ದೂರಿದರು.
ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳದಿಂದ ಬಿಜೆಪಿ
ಆಡಳಿತದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.
ಅAದು ಬ್ರಿಟೀಷರ ವಿರುದ್ಧ ಗಾಂಧೀಜಿ ಸೇರಿ ಅನೇಕ ಮಹನೀಯರು ದಂಡಿ
ಯಾತ್ರೆ, ಉಪ್ಪಿನ ಸತ್ಯಾಗ್ರಹ ಹೀಗೆ ವಿವಿಧ ರೀತಿ ಹೋರಾಟ ನಡೆಸಿದ್ದರು. ಇಂದು
ಬಿಜೆಪಿ ದುರಾಡಳಿತ, ಧರ್ಮ, ಜಾತಿ ಮಧ್ಯೆ ವಿಷ ಬೀಜ ಬಿತ್ತುವ ವಿರುದ್ಧ ರಾಹುಲ್
ಗಾಂಧಿ ಅತ್ಯಂತ ದೊಡ್ಡ ಚಳವಳಿ ಹಮ್ಮಿಕೊಂಡಿದ್ದು, ದೂರ ಹಾಗೂ
ಅವಧಿಯಲ್ಲಿ ದಾಖಲೆ ಆಗುತ್ತಿದೆ ಎಂದು ಹೇಳಿದರು.
ಸಾವಿರಾರು ಕಿಮೀ ಪಾದಯಾತ್ರೆ ಮಾರ್ಗ ಮಧ್ಯದಲ್ಲಿ ರಾಹುಲ್ ಗಾಂಧಿ ಅವರು
ಸ್ಥಳೀಯ, ಪ್ರಾದೇಶಿಕ ಸಮಸ್ಯೆಗಳ ಅಧ್ಯಯನ ಜೊತೆಗೆ ಜನರ ನೋವು
ಆಲಿಸುತ್ತಿದ್ದಾರೆ. ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಈ ಯಾತ್ರೆ ಭಾರತ
ಜನರನ್ನು ಒಗ್ಗೂಡಿಸುವ ಪ್ರಮುಖ ಉದ್ದೇಶ ಹೊಂದಿದ್ದು, ಪಕ್ಷಾತೀತ
ಚಳವಳಿಯಾಗಿ ರೂಪುಗೊಂಡಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಲವತ್ತೆöÊದು
ವರ್ಷದ ರಾಜಕೀಯ ಜೀವನದಲ್ಕಿ ಸೋಲು-ಗೆಲುವು ಕಂಡಿರುವ ನಾನು ಸದಾ
ಜನರೊಂದಿಗೆ ಇದ್ದೇನೆ. ಕಳೆದ ಬಾರಿ ಸಚಿವನಾಗಿ ಮಾಡಿದ್ದ ಕೆಲಸಗಳನ್ನು
ಉದ್ಘಾಟನೆ ಮಾಡಲು ಕೂಡ ಈಗಿನವರಿಗೆ ಸಮಯ ಇಲ್ಲದಂತೆ ಎಂದರು.
ನನ್ನ ಅವಧಿಯಲ್ಲಿ ಒಂದು ಜಾತಿ ಗಲಭೆಗಳು ಆಗದಂತೆ ಎಚ್ಚರವಹಿಸಿದ್ದೇ,
ಆದರೆ ಈಗ ಜಾತಿ ಸಂಘರ್ಷ ಹೆಚ್ಚಾಗಿದೆ. ಜನ ನನ್ನ ಅವಧಿಯ ಆಡಳಿತ ನೆನಪು
ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೆ ಸಾಕ್ಷಿ. ಬರೀ
ಸುಳ್ಳುಗಳ ಮೂಲಕ ಜನರನ್ನು ನಿರಂತರ ವಂಚಿಸಲು ಸಾಧ್ಯವೆಂಬುದು ಬಿಜೆಪಿ
ನಾಯಕರು ಅರಿತುಕೊಳ್ಳಬೇಕು. ನಮ್ಮ ಸರ್ಕಾರವನ್ನು ಆಧಾರರಹಿತವಾಗಿ

ದಸ್ ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದ ಭಾಷಣಕಾರನ ಪಕ್ಷ ನಲವತ್ತು ಪರ್ಸೆಂಟ್
ಪಡೆಯುತ್ತಿರುವುದನ್ನು ಗುತ್ತಿಗೆದಾರರೇ ಬಹಿರಂಗವಾಗಿ ಹೇಳುತ್ತಿದ್ದಾರೆ.
ಅವರ ವಿರುದ್ಧ ಕ್ರಮ ಕೈಗೊಳ್ಳಲು ತಾಕತ್ ಇಲ್ಲದ ಬಿಜೆಪಿ ಸರ್ಕಾರ,
ಭ್ರಷ್ಟಚಾರದ ವಿರುದ್ಧ ಆಂದೋಲನ ಆರಂಭಿಸಿರುವ ಕಾಂಗ್ರೆಸ್
ಕಾರ್ಯಕರ್ತರ ಬಂಧನಕ್ಕೆ ಮುಂದಾಗಿರುವುದು ಹೇಡಿತನ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಯಾತ್ರೆ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಅವರೊಂದಿಗೆ ಹೆಜ್ಜೆ
ಹಾಕಲು ಹೊಳಲ್ಕೆರೆ ಕ್ಷೇತ್ರದ ಸಾವಿರಾರು ಕಾರ್ಯಕರ್ತರು
ಉತ್ಸಹಕರಾಗಿದ್ದಾರೆ. ಇಲ್ಲಿಂದ ಹೆಚ್ಚು ಜನರು ಯಾತ್ರೆಯಲ್ಲಿ ಪಾಲ್ಗೊಂಡು
ಇತಿಹಾಸ ನಿರ್ಮಿಸಲಿದ್ದಾರೆ ಎಂದರು.
ಕ್ಷೇತ್ರದ ಉಸ್ತುವಾರಿ, ಕೆಪಿಸಿಸಿ ಕಾರ್ಯದರ್ಶಿ ಡಾ.ಸಾಸಲು ಸತೀಶ್ ಮಾತನಾಡಿ,
ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಅದರಲ್ಲೂ
ಹೊಳಲ್ಕೆರೆ ಕ್ಷೇತ್ರದಲ್ಲಿ ಆಂಜನೇಯ ಅವರು ಸಚಿವರಾಗಿ ಮಾಡಿರುವ ಅಭಿವೃದ್ಧಿ
ಕಾರ್ಯಗಳು ದಾಖಲೆ ಆಗಿದೆ. ಈ ಕಾರಣಕ್ಕೆ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಪಕ್ಷ
ಬಲಿಷ್ಠವಾಗಿದೆ ಎಂದರು.
ಕ್ಷೇತ್ರದಲ್ಲಿನ ಪಕ್ಷ ಸಂಘಟನೆ ಶೈಲಿ, ಕಾರ್ಯಕರ್ತರ ಉತ್ಸಾಹ ರಾಜ್ಯಕ್ಕೆ
ಮಾದರಿ ಆಗಿದೆ. ಈ ಬಾರಿ ಕ್ಷೇತ್ರದಲ್ಲಿ ಆಂಜನೇಯ ಅವರು ದಾಖಲೆ ಮತಗಳ
ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತ.ಕ್ಷೇತ್ರದ 39 ಗ್ರಾಮ
ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತು ಮೂವತ್ತು ಗ್ರಾಮ
ಪಂಚಾಯತಿ ಯಲ್ಲಿ ಅಧಿಕಾರ ನಡೆಸುತ್ತಿರುವುದು ಪಕ್ಷದ ಬಲಿಷ್ಠತೆಗೆ ಸಾಕ್ಷಿ
ಎಂದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ.ತಾಜಪೀರ್ ಮಾತನಾಡಿ, ರಾಹುಲ್ ಗಾಂಧಿ ಯಾತ್ರೆ
ಮಾರ್ಗ ಸೇರಿದಂತೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಸಂವಾದ, ಸಭೆ, ಚರ್ಚೆ
ನಡೆಸುವ ಸ್ಥಳಗಳ ಕುರಿತು ಈಗಾಗಲೇ ನಿಗದಿ ಮಾಡಲಾಗಿದೆ. ಯಾತ್ರೆಯಲ್ಲಿ
ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕೆಪಿಸಿಸಿ ಸದಸ್ಯ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ಆಂಜನೇಯ
ಅವರು ಕ್ಷೇತ್ರಕ್ಕೆ ತಂದಿರುವ ಯೋಜನೆಗಳಿಗೆ ಈಗಿನ ಆಡಳಿತ
ಅಡ್ಡಿಪಡಿಸುತ್ತಿದ್ದು, ಜನರಿಗೆ ಸಮಸ್ಯೆ ಮಾಡುತ್ತಿದೆ ಎಂದು ದೂರಿದರು.
ಈ ಬಾರಿ ಕ್ಷೇತ್ರದಲ್ಲಿ ಆಂಜನೇಯ ಅವರ ಗೆಲುವು ಖಚಿತವಾಗಿದ್ದು,
ಕಾರ್ಯಕರ್ತರು ಹೆಚ್ಚು ಸಂಘಟಿತರಾಗಬೇಕು. ಬಿಜೆಪಿಯ ಸುಳ್ಳಿನ ವಿರುದ್ಧ
ಜನರಲ್ಲಿ ಜಾಗೃತಿ ಮೂಡಿಸಿ, ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೊಂಡ
ಯೋಜನೆಗಳನ್ನು ಮನದಟ್ಟು ಮಾಡಬೇಕು ಎಂದು ತಿಳಿಸಿದರು.
90 ವರ್ಷದ ವೃದ್ದೆ, ಚಿಕ್ಕೆಮ್ಮಿಗನೂರು ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಮ್ಮ,
ಕೆಪಿಸಿಸಿ ನೂತನ ಸದಸ್ಯ ಎಸ್.ಎಂ.ಎಲ್.ತಿಪ್ಪೇಸ್ವಾಮಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಆರ್.ಕೃಷ್ಣಮೂರ್ತಿ,
ತಾಳಿಕಟ್ಟೆ ಗಂಗಾಧರ್, ಲೋಹಿತ್ ಕುಮಾರ್, ಬಿ.ಪಿ.ಪ್ರಕಾಶಮೂರ್ತಿ,
ನರಸಿಂಹರಾಜು. ನಗರಾಭಿವೃದ್ದಿ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಮುಖಂಡರಾದ
ಎಚ್.ಡಿ.ರAಗಯ್ಯ, ಕಾಟಿಹಳ್ಳಿ ಶಿವಕುಮಾರ್, ನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಬೇವಿನಹಳ್ಳಿ
ಬಸವರಾಜ ನಾಯ್ಕ, ರಂಗಸ್ವಾಮಿ, ಮುಬಾರಕ್, ನರಂಜನ್, ದುರುಗೇಶ್ ಪೂಜಾರ್
ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಕ್ಷದ ವಿವಿಧ ಘಟಕದ ಹಾಗೂ ಗ್ರಾಪಂ

ಅಧ್ಯಕ್ಷರು, ಸದಸ್ಯರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು
ಪಾಲ್ಗೊಂಡಿದ್ದರು.
ಫೋಟೋ ಇದೆ

About The Author

Namma Challakere Local News
error: Content is protected !!