ನಾನು ರಾಜಾಕರಣ ಮೂಲದಿಂದ ಬಂದವನಲ್ಲ ನಾನು ಬಿಸಿನೆಸ್ ಮ್ಯಾನ್ : ಯುವ ಕಾಂಗ್ರೆಸ್ ರಾಜ್ಯಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್
ಚಳ್ಳಕೆರೆ : ನಾನು ರಾಜಾಕರಣ ಮೂಲದಿಂದ ಬಂದವನಲ್ಲ ನಾನು ಬಿಸಿನೆಸ್ ಮ್ಯಾನ್ ಇಂದು ನಮ್ಮ ದೇಶ ಯಾವ ಕಡೆಗೆ ಸಾಗುತಿದೆ ಎಂಬುದು ಯುವ ಜನತೆ ಗ್ರಹಿಸಬೇಕಿದೆ ಎಂದು ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್ ಹೇಳಿದ್ದಾರೆ.
ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಕುರಿತಾದ ಮುಖಾ ಮುಖಿ ಸಂವಾದ ಕಾರ್ಯಕ್ರದಲ್ಲಿ ಮಾತನಾಡಿದರು. ಇಂದು ನಮ್ಮ ದೇಶದಲ್ಲಿ ಜಾತಿ ತಾರತಮ್ಯ ತಾಂಡವಾಡುತ್ತಿದೆ. ಧರ್ಮ ಜಾತಿ, ಜಾತಿಗಳ ಮಧ್ಯೆ ಕಿತ್ತಾಟ ನಡೆಯುತ್ತಿದೆ ಯುವ ಜನತೆಗೆ ಉದ್ಯೋಗ ಇಲ್ಲ ಆದ್ದರಿಂದ ಯುವಕರು ಮುಂದೆ ಬರಬೇಕು ಮುಂದೊAದು ದಿನ ಒಳ್ಳೆಯ ದಿನಗಳು ಬರುತ್ತಾವೆ ಕಾಯಬೇಕು ಎಂದು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
ಇನ್ನೂ ವಿದ್ಯಾರ್ಥಿನಿಯೊಬ್ಬರು ದೇಶದಲ್ಲಿ ಜಾತಿ ತಾರತಮ್ಯಕ್ಕೆ ಪರೀಕ್ಷೆ ಶುಲ್ಕವೇ ಸಾಕ್ಷಿ ಒಂದು ಜಾತಿಗೆ ಕಡಿಮೆ ಹಾಗು ಇತರೆ ಜಾತಿಗೆ ಜಾಸ್ತಿ, ಹಾಗೂ ಉದ್ಯೋಗದಲ್ಲಿ ಕೂಡ ಜಾತಿ ಆಧಾರಿತ ಮಾನದಂಡದ ಮೂಲಕ ನೌಕರಿ ನೀಡುವ ಪರಿಪಾಟ ಕೈ ಬಿಡಬೇಕು ಎಲ್ಲಾರಿಗೂ ಸಮಾನತೆ ಕಾಣಬೇಕು ಎಂದು ನೇರ ನುಡಿಯಲ್ಲಿ ಮಾತನಾಡಿದರು.
ವಿದ್ಯಾರ್ಥಿ ನರೇಶಾ ಮಾತನಾಡಿ, ಈ ದೇಶದ ಬೆನ್ನುಲುಬು ರೈತ, ಆದರೆ ಇಂದು ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ. ಆದರೆ ಖಾಸಗಿ ಪ್ರಾಡಕ್ಟ್ ಮಾಲೀಕ ತಾವೇ ಸ್ವತಃ ಬೆಲೆ ನಿಗಧಿ ಮಾಡಿ ಮಾರಾಟ ಮಾಡುತ್ತಾನೆ ಇದರಿಂದ ರೈತ ಮುಂದೊAದು ದಿನ ಮೂಲೆ ಗುಂಪಾಗುತ್ತಾನೆ ಎಂದು ವಿದ್ಯಾರ್ಥಿ ನುಡಿದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಿಎಂ.ಶಿವಕುಮಾರ್‌ಸ್ವಾಮಿ, ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ, ಚೋಳರುಪ್ರಕಾಶ, ಯುವಕಾಂಗ್ರೆಸ್ ಪದಾಧಿಕಾರಿಗಳಾದ ಸಿಬಿ.ಶಿವರಾಜ, ಎಚ್‌ವಿಶ್ವ, ಕಿರಣ, ಅಲ್ಪ ಸಂಖ್ಯಾತರ ಪರೀದ್‌ಖಾನ್, ಗುಜ್ಜಾರಪ್ಪ, ವೀರೇಶ ಬಾನುವೀರೇಶ, ಯಲಗಟ್ಟೆ ಗೊಲ್ಲರಟ್ಟಿ, ದೊಡ್ಡರಿ ತಿಪ್ಪೇಸ್ವಾಮಿ. ದೇವರ ಮರಿಕುಂಟೆ ನರಸಿಂಹ, ಓಬಳೇಶ, ಸೂರನಹಳ್ಳಿ ಮಾಂತೇಶ, ಮಂಜ, ಪ್ರಕಾಶ, ಚನ್ನವೀರ, ಗೋಪನಹಳ್ಳಿ ಮಾಂತೇಶ, ಗೊರಳಕಟ್ಟೆ, ಮಂಜುನಾಥ, ದರ್ಶನ, ಇನ್ನು ಮುಂತಾದವರು ಭಾಗವಹಿಸಿದ್ದರು ಭಾಗವಹಿಸಿದ್ದರು
ಪೋಟೋ ಚಳ್ಳಕೆರೆ ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಕುರಿತಾದ ಮುಖಾ ಮುಖಿ ಸಂವಾದ ಕಾರ್ಯಕ್ರದಲ್ಲಿ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್ ಮಾತನಾಡಿದರು.