ಪಿಡಿಓ ಹಾಗೂ ಜನಪ್ರತಿನಿದಿಗಳಿಗೆ ದೂರದೃಷ್ಟಿ ಯೋಜನೆ ವರದಾನ : ಇಓ ಹೊನ್ನಯ್ಯ
ಚಳ್ಳಕೆರೆ : ಸರಕಾರದ ಯೋಜನೆಗಳು ಸಪಲ್ಯಗೊಳ್ಳಲು ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳ ಸಹಭಾಗಿತ್ವ ಪ್ರಮುಖವಾಗಿದೆ ಆದ್ದರಿಂದ ಪ್ರತೊಯೊಬ್ಬರು ಈ ತರಬೇತಿ ಕಾರ್ಯಗಾರದಲ್ಲಿ ತಪ್ಪದೆ ಭಾಗವಹಿಸಿ ತರಬೇತಿ ಪಡೆದುಕೊಳ್ಳಬೇಕು ಎಂದು ಇಓ ಹೊನ್ನಯ್ಯ ಹೇಳಿದ್ದಾರೆ.
ಅವರು ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ನಡೆಯುವ ಸರಕಾರದ ದೂರದೃಷ್ಟಿ ಯೋಜನೆ ತರಬೇತಿ ಕಾರ್ಯಗಾರ ಕುರಿತು ಮಾತನಾಡಿದ ಅವರು ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದ ಪಿಡಿಓ ಹಾಗೂ ಸದಸ್ಯರಿಗೆ ಮೂರು ದಿನದ ತರಬೇತಿ ನಡೆಯುತ್ತಿದೆ ಇಂತಹ ಪ್ರಮುಖವಾದ ಸರಕಾರದ ಯೋಜನೆಗಳ ತರಬೇತಿ ಕಾರ್ಯಗಾರದಲ್ಲಿ ಜನಪ್ರತಿನಿಧಿಗಳು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಸೆ.26ಸೋಮವಾರ ಜಾಜೂರು ಹಾಗು ಮೀರಸಾಬಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿಯಲ್ಲಿ ಪಿಡಿಓ ಓಬಣ್ಣ ಹಾಗೂ ಬಹು ಸಂಖ್ಯೆಯ ಸದಸ್ಯರು ಭಾಗವಹಿಸಿರುವುದು ಕಂಡು ಬಂದಿತು.
ತರಬೇತಿ ಕಾರ್ಯಗಾರದಲ್ಲಿ ರೀನಾ, ತರಬೇತಿ ಸುಗಮಗಾರ ಮಂಜುನಾಥ್ ಇತರರು ಪಾಲ್ಗೊಂಡಿದ್ದರು.
ಪೋಟೋ ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ನಡೆಯುವ ಸರಕಾರದ ದೂರದೃಷ್ಟಿ ಯೋಜನೆ ತರಬೇತಿ ಕಾರ್ಯಗಾರದಲ್ಲಿ ಜಾಜೂರು ಗ್ರಾಪಂ. ಹಾಗೂ ಮೀರಸಾಬಿಹಳ್ಳಿ ಗ್ರಾಪಂ.ಪಿಡಿಒ ಓಬಣ್ಣ ಸದಸ್ಯರು ಇತತರು ಇದ್ದರು