ಕಾಲುವೆಹಳ್ಳಿ ದಾರಿ ಸಮಸ್ಯೆಗೆ ತಿಲಾಜಂಲಿ ಹಾಡಿದ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಗ್ರಾಮಗಳು ರಾಮರಾಜ್ಯವಾಗಲು ಗ್ರಾಮದ ಸಾರ್ವಜನಿಕರು ಸರ್ವತೋಮುಖ ಅಭಿವೃದ್ದಿಯಲ್ಲಿ ಮುನ್ನೆಡೆಯಬೇಕು ಆದ್ದರಿಂದ ಗ್ರಾಮದಲ್ಲಿ ಯಾವುದೇ ಕಲಹ ಮಾಡಿಕೊಳ್ಳದೆ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.


ಅವರು ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಜಾಲ್ವಾಂತ ಸಮಸ್ಯೆಯಾಗಿರುವ ದಾರಿ ಸಮಸ್ಯೆಗೆ ಮುಕ್ತಿ ನೀಡಿ ಸಮಸ್ಯೆ ತಿಳಿಗೊಳಿಸಿ ಸಾರ್ವಜನಿಕರನ್ನು ಕುರಿತು ಮಾತನಾಡಿದ ಅವರು ಗ್ರಾಮದ ಸರ್ವೆ ನಂಬರ್ 195ರಲ್ಲಿ ದಾರಿ ವಿವಾದಕ್ಕೆ ಸಂಬAಧಿಸಿದAತೆ ರೈತರಿಗೆ ಮತ್ತು ಸಾರ್ವಜನಿಕರಿಗೆ ನಮ್ಮ ಜಮೀನಿನಲ್ಲಿ ಓಡಾಡುವ ದಾರಿ ಕುರಿತಂತೆ ಭಾವನಾತ್ಮಕವಾದ ಸಂಬAಧವಿದೆ ಕೆಲವೊಂದು ಸರ್ವೇ ನಂಬರ್‌ಗಳಲ್ಲಿ ನಕಾಶೆ ಕಂಡ ದಾರಿ ಇದೆ, ಕೆಲವೊಂದು ಸರ್ವೆ ನಂಬರ್‌ಗಳಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದಂತಹ ಕರಾಬು ಜಮೀನಿರುತ್ತದೆ ರೈತನಿಗೆ ಅರಿವಿಲ್ಲದೆ ಇಂತಹ ಸರ್ಕಾರಿ ಬಾಬತ್ತಿನ ಜಮೀನುಗಳು ನನ್ನ ಇಡುವÀಳಿ ಜಮೀನಿನಲ್ಲಿ ಸೇರಿಕೊಂಡಿರುತ್ತವೆ ಇದರ ಅರಿವನ್ನು ಸಾರ್ವಜನಿಕರಿಗೆ ಕಂದಾಯ ಇಲಾಖೆ ಸಿಬ್ಬಂದಿಗಳು ಮೂಡಿಸಬೇಕಿದೆ


ಬಾಕ್ಸ್ ಮಾಡಿ :
ಮನುಷ್ಯನಿಗೆ ಜೀವನ ಶಾಶ್ವತವಲ್ಲ ಆದರೆ ಇನ್ನೊಬ್ಬರಿಗೆ ಹಿಂಸೆ ಮತ್ತು ಕಿರುಕುಳ ನೀಡಿ ಬದುಕುವುದು ತರವಲ್ಲದ ಕ್ರಮವಾಗಿದೆ ಸಮಾಜದಲ್ಲಿ ಅದೆಷ್ಟೋ ಮಹಾನೀಯರು ಶಾಲೆಗಳಿಗೆ ಆಸ್ಪತ್ರೆಗಳಿಗೆ ದೇವಸ್ಥಾನಗಳಿಗೆ ತಮ್ಮ ಇಡುವಳಿ ಜಮೀನನ್ನು ನೀಡಿ ಸಾರ್ಥಕತೆ ಮೆರೆದಿದ್ದಾರೆ ಇವರೆಲ್ಲರೂ ಕೂಡ ಸಮಾಜಕ್ಕೆ ಮಾದರಿಯಾಗಿದ್ದಾರೆ
ಅದೇ ರೀತಿ ನೀವುಗಳು ಕೂಡ ಅನನ್ಯತೆಯಿಂದ ಎಂಟು ಅಡಿ ಜಾಗದಲ್ಲಿ ಓಡಾಡಲು ಯಾರು ತಂಟೆ ಮಾಡೋಕೂಡದು ಸಾಮರಸ್ಯದಿಂದ ಬದುಕಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾಲುವೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪಾಲಯ್ಯ, ಸದಸ್ಯ ಗಾದ್ರಿಪಾಲಯ್ಯ, ತಾಲೂಕ್ ಸರ್ವೆರ್ ಪ್ರಸನ್ನ ಕುಮಾರ್, ರಾಜಸ್ಥ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಸಿರಾಜ್ ಉಪಸ್ಥಿತರಿದ್ದರು

ಪೋಟೋ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ದಾರಿ ಸಮಸ್ಯೆ ಬಗೆಹರಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ

About The Author

Namma Challakere Local News
error: Content is protected !!