ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಮುಗ್ದ ಮಕ್ಕಳ ಮನಸ್ಸಿನಲ್ಲಿ ಅಗಾಧವಾದ ಶಕ್ತಿ ಅಡಗಿರುತ್ತದೆ ಅಂತಹ ಶಕ್ತಿಯನ್ನು ಹೊರ ತೆಗೆಯುವ ಕಾರ್ಯ ಈ ಪ್ರತಿಭಾ ಕಾರಂಜಿ ಮೂಲಕ ಹಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ನಗರದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ 2022-23ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ಮಾನಸಿಕ ಬೌಧ್ದಿಕ ಮಟ್ಟ ವಿಕಸನಗೊಳ್ಳುವುದು ಈ ಪ್ರತಿಭಾ ಕಾರಂಜಿಯಿAದ ಮಾತ್ರ ಇಂತಹ ವೇದಿಕೆಯಲ್ಲಿ ತಾಲೂಕು ಮಟ್ಟದ ಮಕ್ಕಳು ಭಾಗವಹಿಸಿ ತಮ್ಮ ಕಲೆಯನ್ನು ಅಭಿವ್ಯಕ್ತ ಪಡಿಸುವುದು ಸಂತಸ ತಂದಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಮಕ್ಕಳಿಗೆ ಪೂರಕ ವಾತವರಣ ಕಲ್ಪಿಸಿದರೆ ಅವರ ಬೌದ್ಧಿಕ ಮಟ್ಟ ಬೆಳೆಯಲು ಸಹಕಾರಿಯಾಗುತ್ತದೆ, ಪಠ್ಯ ಪೂರಕ ಚಟುವಟಿಕೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಕಲಿತ ಕಲಿಕಾ ಸಾಮಾಗ್ರಿಗಳಲ್ಲಿ ವರ್ಷದ ಕೊನೆಯ ಹಂತದಲ್ಲಿ ಪಠ್ಯೆತರ ಚಟುವಟಿಕೆಗಳಲ್ಲಿ ಭಾವಗಿಸುವುದು ಅವರ ಅಭಿವ್ಯಕ್ತ ಗೊಳಿಸುವುದು ಬೌದ್ಧಿಕ ಮಟ್ಟ ಹಿಮ್ಮಡಿಗೊಳ್ಳುತ್ತದೆ ಎಂದರು.
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಮಂಜುಳ ಆರ್ ಪ್ರಸನ್ಕುಮಾರ್, ಸದಸ್ಯೆ ಕವಿತಾ, ಸುಮಾ ಭರಮಣ್ಣ, ಸುಜಾತ, ದೈಹಿಕ ಪರೀವಿಕ್ಷಣ ಶ್ರೀನಿವಾಸ್, ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ, ಗಿರೀಶ್ಬಾಬು, ರವೀಶ್ ಬಾಬು, ಈರಸ್ವಾಮಿ, ಇತಿತರರು ಪಾಲ್ಗೊಂಡಿದ್ದರು.