ಭಾರತ್ ಜೋಡೋ ಯಾತ್ರೆ ಸ್ಥಳ ಪರೀಶಿಲನೆಗೆ ಎಐಸಿಸಿಯ ಕಾರ್ಯದರ್ಶಿ ಮಯೂರ್ ಕುಮಾರ್ ಜೈನ್ ಬೇಟಿ
ಚಳ್ಳಕೆರೆ : ಈಡೀ ದೇಶದಲ್ಲಿ ಆಡಳಿತ ನಡೆಸುವ ಸರಕಾರಗಳ ವೈಪಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ, ಜನ ವಿರೋಧಿ ಸರಕಾರನ್ನು ಕಿತ್ತೆಸೆಯಲು ಈ ಭಾರತ್ ಜೋಡೋ ಯಾತ್ರೆ ಕೈಗೊಳ್ಳಲಾಗಿದೆ ಎಂದು ಎಐಸಿಸಿಯ ಕಾರ್ಯದರ್ಶಿ ಮಯೂರ್ ಕುಮಾರ್ ಜೈನ್ ಹೇಳಿದ್ದಾರೆ.
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಭಾರತ್ ಜೋಡೋ ಯಾತ್ರೆ ಸೆಪ್ಟಂಬರ್ 30 ರಂದು ಕರ್ನಾಟಕ ಪ್ರವೇಶಸಲಿದೆ ಆದ್ದರಿಂದ ಪ್ರತಿಯೊಬ್ಬರು ಕಟಿಬದ್ದಾರಿ ಪಾದಯಾತ್ರೆ ಯಶ್ವಿಸಿಗೊಳಿಸಬೇಕು ಎಂದರು.
ಅಕ್ಟೋಬರ್ 14ರಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮೂಲಕ ಆಗಮಿಸುವ ಪಾದಯಾತ್ರೆಗೆ ಶಾಸಕ ಟಿ.ರಘುಮೂರ್ತಿ ರವರ ನೇತೃತ್ವದಲ್ಲಿ ಚಳ್ಳಕೆರೆ ಶಾಸಕರ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಅಕ್ಟೋಬರ್ 12ನೇ ತಾರೀಖು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿಗೆ ಪ್ರವೇಶಿಸಲಿದ್ದು ಈ ಐತಿಹಾಸಿಕ ಯಾತ್ರೆಯನ್ನು ಅಭೂತ ಪೂರ್ವಕವಾಗಿ ಯಶಸ್ವಿಯಾಗಿಸಲು ಚಳ್ಳಕೆರೆ ತಾಲೂಕಿನ ಪಕ್ಷದ ಮುಖಂಡರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಪಾದಯಾತ್ರೆಯನ್ನು ಯಶಸ್ವಿಯಾಗಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು
ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವುದರ ಮೂಲಕ ಕ್ಷೇತ್ರದ ಸಮಗ್ರ ಚರ್ಚೆ ನಡೆಸಿದರು.

ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ ಮತ್ತು ಕಿರಣ್ ಶಂಕರ್ ರವರು ಆತ್ಮೀಯ ವಾಗಿ ಬರಮಾಡಿಕೊಂಡರು.
ಈ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಬಿ.ಎನ್ ಚಂದ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಹಸಗೊಡು ಜೈ ಸಿಂಹ, ಮಾಜಿ ಸಚಿವರಾದ ಶಿವಮೂರ್ತಿ ನಾಯ್ಕ್, ಭಾರತ ಜೋಡೋ ಯಾತ್ರೆಯ ಸಂಯೋಜಕರಾದ ರಾಘವೇಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜಪೀರ್, ಜಿಲ್ಲಾ ಕಾಂಗ್ರೆಸ್ ಪಧಾಧಿಕಾರಿಗಳು ಪಕ್ಷದ ಮುಖಂಡರರು, ವಿವಿಧ ಘಟಕಗಳ ಜಿಲ್ಲಾಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾನಂದಿನಿಗೌಡ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾಬಾಯಿ, ಪರಶುರಾಂಪುರ ಬ್ಲಾಕ್ ಮಹಿಳಾ ಅಧ್ಯಕ್ಷೆ ಅನಿತಾ ವೆಂಕಟೇಶ್ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರುಗಳು, ಪುರಸಭ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!