ಹೋರಾಟಕ್ಕೂ ಸೈ..ರಂಗಭೂಮಿಗೂ ಸೈ.. : ಕೆ.ಪಿ.ಭೂತಯ್ಯ
ಚಳ್ಳಕೆರೆ : ಮನುಷ್ಯನ ಜೀವನದಲ್ಲಿ ವಿಭಿನ್ನವಾದ ಕೆಲಸಗಳನ್ನು ನಾವು ಕಾಣಬಹುದು ಅದರಂತೆ ಹುಟ್ಟಿನಿಂದ ಜೀವನದ ಕೊನೆಯತನಕÀ ಹಲವಾರು ವಿಧಗಳಲ್ಲಿ ನಾವು ಜೀವನದ ವಿಭಿನ್ನತೆಗಳನ್ನು ಕಾಣುತ್ತೆವೆ
ಅಂತಹ ಜೀವನವನ್ನು ವೈಧ್ಯಮಯ ಮಾಡಿಕೊಂಡ ಅಪ್ಪಟ ಹಳ್ಳಿಯಲ್ಲಿ ಜನಿಸಿದರು ಸಾಧನೆಯ ಶಿಖರ ಏರಿದ ಸಾಧಕರ ಪಟ್ಟಿಯಲ್ಲಿ ಇವರಾಗಿದ್ದಾರೆ.
ಕರ್ನಾಟಕ ಬಯಲಾಟ ಆಕಾಡೆಮಿಯ 2021ರ ಪ್ರಶಸ್ತಿಗೆ ರೈತ ಹೋರಟಗಾರ, ಹಾಗೂ ಕಲಾವಿದನಾದ ಕೆ.ಪಿ.ಭೂತಯ್ಯ ಆಯ್ಕೆಯಾಗಿದ್ದಾರೆ.
ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ಪಾಲಯ್ಯ ಗಂಗಮ್ಮ ದಂಪತಿ ಮಗನಾಗಿ ಜನಿಸಿದ ಭೂತಯ್ಯ 5ನೇ ತರಗತಿ ವರೆಗೆ ಮಾತ್ರ ವ್ಯಾಸಂಗ ಮಾಡಿದ್ದಾರೆ
ಮನೆಯಲ್ಲಿ ಬಡತನ ವಿದ್ದರು ಕೃಷಿಯಲ್ಲಿ ಯಶಸ್ಸು ಕಂಡ ರೈತರಲ್ಲಿ ಇವರು ಒಬ್ಬರು, ಹಿರಿಯಾರದ ಗಾದ್ರಯ್ಯ, ಸಿಂಕ್ರಿ ಪಾಲಯ್ಯರವರ ಗರಡಿಯಲ್ಲಿ ಬೆಳೆದ ಇವರು ರಂಗಭೂಮಿಗೆ ತಮ್ಮ 16 ನೇ ವಯಸ್ಸಿನಲ್ಲಿ ಪಾದರ್ಪಣೆ ಮಾಡುತ್ತಾರೆ
ತಾಲೂಕಿನ ಹೆಸರಾಂತ ನಾಟಕ ನಿದೇರ್ಶಕ ಗುರುಸಿದ್ದಪ್ಪ ಮತ್ತು ಪಿ.ತಿಪ್ಪೆಸ್ವಾಮಿ ಅವರ ನಿದೇರ್ಶನದ ಅನೇಕ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ಸ್ತಿçà ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮ 16ನೇ ವಯಸ್ಸಿನಲ್ಲಿ ವತ್ಸಲಾ, ಸುಮಂಗಲಾ, ದ್ರೌಪದಿ ,ಪುಂಡರೀಕ ದೇವತಿ, ಒನಕೆ ಓಬವ್ವನ ಮಂಡೋದರಿ ಪಾತ್ರ ಸೇರಿ ವಿವಿಧ ಪಾತ್ರಗಳಲ್ಲಿ ಮಿಂಚಿದ್ದರು
ಗ್ರಾಮಸ್ಥರು ಒತ್ತಾಯದ ಮೇರೆಗೆ 2020ರಲ್ಲಿ 75ನೇ ವಯಸ್ಸಿನಲ್ಲಿ ಬಣ್ಣಹಚ್ಚಿ ದ್ರೌಪದಿ ಪಾತ್ರದಲ್ಲಿ ಅಭಿನಯಸಿದ್ದರು ಈ ನಾಟಕ ಪ್ರದರ್ಶನ ವೀಕ್ಷಣೆಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ ಕೆ.ನಂದಿನಿದೇವಿ, ಎಸ್‌ಪಿ ಜಿ.ರಾದಿಕಾ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಭಿಮಾಸೇನೆ, ಬಯಲಾಟ ನಾಟಕಾ ಅಕಾಡೆಮಿ ಸದಸ್ಯ ಎನ್.ಎಸ್.ರಾಜು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಇಲ್ಲಿ ಸ್ಮರಿಸಬಹುದಾಗಿದೆ.
ಪೋಟೋ ಚಳ್ಳಕೆರೆ ತಾಲೂಕಿನ ಕಾಲುವೆಳ್ಳಿ ಗ್ರಾಮದ ಕೆಪಿ.ಭೂತಯ್ಯ ಪ್ರಶಸ್ತಿಗೆ ಬಾಜನರಾಗಿವುದು