ಹಳೆ ಹೊಯ್ಸಳ ಬ್ಯಾಂಕ್ ಕಟ್ಟಡ ಮರುವಶಕ್ಕೆ : ನಗರಸಭೆ ಸದಸ್ಯರ ಜಟಾಪಟಿ, ವಾಕ್ ಸಮರ
ಚಳ್ಳಕೆರೆ : ಇಂದು ನಡೆದ ನಗರಸಭೆಯ ಸಾಮಾನ್ಯಸಭೆ ಸುಮಾರು ಎರಡು ಗಂಟೆಗಳ ಕಾಲ ಕೇವಲ ಒಂದೇ ವಿಷಯದ ಮೂಲಕ ಸದಸ್ಯರು ಜಾಟಪಟಿ ಕಿತ್ತಾಟ ನಡೆಯಿತು
ನಗರದ ಹೃದಯ ಭಾಗದಲ್ಲಿ ಇರುವ ಹಳೆ ಪುರಸಭೆ ಕಟ್ಟಡ (ಹೊಯ್ಸಳ ಬ್ಯಾಂಕ್) ಬಾರೀ ವಿವಾದಕ್ಕೆ ಸಿಲುಕಿ ಈಡೀ ಸಭೆಯ ಸಮಯವನ್ನು ತನ್ನದಾಗಿಸಿಕೊಂಡು ಕ್ಷಣ ಕಾಲ ಸಭೆಯಲ್ಲಿ ಏರು ಧ್ವನಿಮೂಲಕ ಸದಸ್ಯರ ಮಧ್ಯೆ ಮಾತಿನ ಚಕಮುಕಿ ನಡೆದು ನಂತರ ತಟಸ್ಥ ರೀತಿಗೆ ಬಂದರು.


ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಕ್ಕ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ನಗರಸಭೆಗೆ ಸೇರಿದ ಕಟ್ಟಡ ಹೊಯ್ಸಳ ಬ್ಯಾಂಕ್‌ಗೆ ನೀಡಿರುವ ಲೀಜ್‌ನ ಅವಧಿ 2014ಕ್ಕೆ ಮುಗಿದಿದ್ದು. ಕಟ್ಟಡವನ್ನು ನಗರಸಭೆ ವಶಕ್ಕೆ ಪಡೆಯಬೇಕು ಎಂದು ನಗರಸಭೆ ಸದಸ್ಯರಾದ ವಿರೋಧ ಪಕ್ಷದ ಸದಸ್ಯರಾದ ಶ್ರೀನಿವಾಸ್, ಜಯಣ್ಣ, ಶಿವಕುಮಾರ್ ಪ್ರಮೋದ್, ವಿಶುಕುಮಾರ್, ವೀರೇಶ್, ಮನೋಜ್, ಪಾಲನೇತ್ರನಾಯಕ, ಇಂದ್ರೇಶ್ ಸಭೆಯಲ್ಲಿ ಒತ್ತಾಯ ಮಾಡಿದರು.
ಆಡಳಿತ ಪಕ್ಷದ ಸದಸ್ಯರಾದ ವಿರಭದ್ರಪ್ಪ, ಮಲ್ಲಿಕಾರ್ಜುನ, ಪ್ರಕಾಶ್, ವಿರೋಧಪಕ್ಷದ ಸದಸ್ಯರ ನಡುವೆ ಮಾತಿನ ವಾಕ್ ಸಮರ ನಡೆದು ಹೊಯ್ಸಳ ಬ್ಯಾಂಕ್ ಕಟ್ಟಡ ವಿಷಯನ್ನು ಮುಂದಿನ ಸಭೆಗೆ ತರುವಂತೆ ಆಡಳಿತ ಪಕ್ಷದ ಸದಸ್ಯರು ಸಭೆ ಗಮನಸೆಳೆದರು.
ಇನ್ನೂ ಕಳೆದ 2014ರಲ್ಲಿ ಮರು ವಶಕ್ಕೆ ಪಡೆಯದ ಅಧಿಕಾರಿಗಳು ಈಗ ಕಾಲವಕಾಶ ಕೊಡಿ ಮೊದಲು ನೋಟಿಸ್ ನೀಡಿ ನಂತರ ಕಟ್ಟಡ ವಶಕ್ಕೆ ಪಡೆದುಕೊಳ್ಳಿ ಎಂದು ಸದಸ್ಯ ವೈ.ಪ್ರಕಾಶ್ ಮರು ಉತ್ತರ ನೀಡಿದರು.
ಇದಕ್ಕೆ ವಿರೋದ ಪಕ್ಷದ ವಿ.ವೈ.ಪ್ರಮೋದ್, ಶ್ರೀನಿವಾಸ್, ಹಾಗೂ ಜಯಣ್ಣ ನಗರಸಭೆಗೆ ಸೇರಿದ ಆಸ್ತಿಯ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಈಗ ನಗಸಭೆ ಕಚೇರಿ ಬಯಲು ರಂಗಮAದಿರಲ್ಲಿ ಆಡಳಿತ ನಡೆಸುತ್ತಿದ್ದು ಹೊಯ್ಸಳಬ್ಯಾಂಕ್ ಬಿಡಿಸಿಕೊಂಡು ಕಚೇರಿಯನ್ನು ಸ್ಥಳಾಂತರಿಸುವAತೆ ಅಧಿಕಾರಿಗಳ ಗಮನ ಸೆಳೆದರು.
ನಂತರ ಸದಸ್ಯ ರಾಘವೇಂದ್ರ ಸಭೆಯ ಗಮನಹರಿಸಿ ಕಳೆದ ಸಭೆಯಲ್ಲಿ ಚಿತ್ರದುರ್ಗ ರಸ್ತೆಯ ಕುರುಬರ ಹಾಸ್ಟೆಲ್ ಸಮೀಪ ಕನಕ ವೃತ್ತ ನಿರ್ಮಿಸುವಂತೆ ಮನವಿ ಕೋರಲಾಗಿದೆ ಆದ್ದರಿಂದ ಈ ಭಾರಿಯೂ ಕೂಡ ವಿಷಯ ಪ್ರಸ್ತಾಪಿಸಲಾಗಿದೆ ಎಂದು ಸಭೆಗೆ ತಂದರು ಸರ್ವ ಸದಸ್ಯರು ಸರ್ವನುಮತದೊಂದಿಗೆ ಒಪ್ಪಿಗೆ ಸೂಚಿಸದರು.
ವಿರೋಧ ಪಕ್ಷದ ಸದಸ್ಯರಾದ ವಿಶ್‌ಕುಮಾರ್, ಪ್ರಮೋದ್, ಶ್ರೀನಿವಾಸ್, ಸಭೆಯಲ್ಲಿ ನಗರಸಭೆ ಮಂಜುರಾತಿಯಾದ ಒಳ ಚರಂಡಿ ಕಾಮಗಾರಿಯನ್ನು ಮಂಜುರಾತಿ ಮಾಡುವಂತೆ ಸರ್ವ ಸದಸ್ಯರು ಸಂಸದ, ಶಾಸಕ ಹಾಗೂ ಸರಕಾರಗಮನ ಸೆಳೆಯಲಾಗಿದೆ ಎಂದು ಸಭೆಗೆ ತಂದರು.
ನಗರದ ಉದ್ಯಾನವನಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಯವರಿಗೆ ಅಭಿವೃದ್ಧಿ ಪಡಿಸಲು, ಜೆಸಿಬಿ ಯಂತ್ರ, ಜಲಮಂಡಳಿ, ಕೊಳಚೆ, ನೀರು ಶುದ್ದಿಕರಿಸಲು, ಹಾಗೂ ನಗರದ ವಿವಿಧ ಯೋಜನೆಯಡಿಯಲ್ಲಿ ಕಾಮಗಾರಿಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಯಿತು.
ಈ ಸಭೆಯಲ್ಲಿ ಅಧ್ಯಕ್ಷೆಸುಮಕ್ಕ, ಉಪಾಧ್ಯಕ್ಷೆ ಮಂಜುಳ, ನಗರಸಭೆ ಸದಸ್ಯರಾದ ಕವಿತಾ, ಸುಜಾತ, ರಾಘವೇಂದ್ರ, ಜಯಲಕ್ಷ್ಮಿ, ಪಾಲಮ್ಮ, ಕವಿತಾ, ಪೌರಾಯುಕ್ತ ಚಂದ್ರಪ್ಪ, ಸೇರಿದಂತೆ ಇತರ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಪೋಟೋ 1.ಚಳ್ಳಕೆರೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಾತಿನ ಚಕಮುಕಿ
2.ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಸುಮಕ್ಕ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
3.ಚಳ್ಳಕೆರೆ ನಗರಸಭೆ ಸದಸ್ಯರ ಪರ -ವಿರೋಧ ಮಧ್ಯೆ ಮಾತಿನ ವಾಕ್ ಸಮರ

Namma Challakere Local News
error: Content is protected !!