ಆಧುನಿಕ ಬದುಕಿನ ಬರಾಟೆಯಲ್ಲಿ ಮನುಷ್ಯನ ಜೀವನ ನಶಿಸಿಹೋಗುತ್ತದೆ : ಪ್ರಾಂಶುಪಾಲ ನರಸಿಂಹಮೂರ್ತಿ
ಚಳ್ಳಕೆರೆ : ಇಂದಿನ ಆಧುನಿಕ ಬದುಕಿನ ಬರಾಟೆಯಲ್ಲಿ ಮನುಷ್ಯನ ಜೀವನ ನಶಿಸಿಹೋಗುತ್ತದೆ ಕೇವಲ ಉದ್ಯೋಗಕ್ಕಾಗಿ ಓದುವ ಹವ್ಯಾಸ ಇಂದಿನ ದಿನಮಾನಗಳಲ್ಲಿ ಕಾಣಬಹುದಾಗಿದೆ ಎಂದು ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹಮೂರ್ತಿ ಹೇಳಿದ್ದಾರೆ.
ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಾನ ವಿಭಾಗದಿಂದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಲ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಈಗಿನ ಆಧುನಿಕ ವಿದ್ಯಮಾನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ತೀರ ಕಡಿಮೆಯಾಗುತ್ತದೆ ಆದರೆ ಜೀವನ ಸುಗಮಗೊಳ್ಳಲು ಶಿಕ್ಷಣ ಅನಿವಾರ್ಯ ಎಂಬುದು ಮನಗಾಣಬೇಕಿದೆ ಎಂದರು.


ಕಾಲೇಜಿನ ಉಪನ್ಯಾಸಕ ವೀರಣ್ಣ ಮಾತನಾಡಿ, ಪರೀಕ್ಷಾ ದೃಷ್ಟಿಯಿಂದ ಮಾತ್ರ ಓದುವ ಹವ್ಯಾಸ ಮಾಡಿಕೊಳ್ಳಿಬೇಡಿ ನಿರಂತರವಾಗಿ ಓದುವ ಹವ್ಯಾಸ ಮಾಡಿಕೊಳ್ಳಿ, ಇಂದಿನ ಸರಕಾರಗಳು ವ್ಯಾಸಂಗಕ್ಕೆ ಮುಕ್ತ ಅವಕಾಶ ನೀಡಬೇಕು, ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡುವ ಮೂಲಕ ಸರಕಾರ ಉದ್ಯೋಗಧಾರಿತ ತರಬೇತಿಗಳನ್ನು ನಿಡಬೇಕು ಎಂದರು.
ನಿವೃತ್ತ ಸಹ ಪ್ರಾಧ್ಯಾಪಕ ನಾಗರಾಜ್ ಮಾತನಾಡಿ, ಜಾಗತೀಕರಣ ಆಧುನಿಕಕರಣ, ಹಾಗೂ ಖಾಸಗೀಕರಣ ಈಡೀ ಜಗತ್ತಿನಲ್ಲಿ ತಲ್ಲಣಗೊಳಿಸಿದೆ, ಇಂದಿನ ಪರಿಸ್ಥಿತಿಯಲ್ಲಿ ಸರಕಾರಿ ನೌಕರಿ ಎಂಬುದು ಕನಸಿನ ಮಾತಾಗಿದೆ ಆದ್ದರಿಂದ ವೃತ್ತಿಪರವಾದ ಕೌಶಲ್ಯ ತರಬೇತಿ ಪಡಿಯುವುದು ಅನಿವಾರ್ಯ, ಮುಂದೆ ಗುರಿ ವಿರಬೇಕು, ಹಿಂದೆ ಗುರುವಿರಬೇಕು, ಆದಾಗ ಮಾತ್ರ ವಿದ್ಯಾರ್ಥಿಗಳ ಜೀವನ ಅಸನಾಗುತ್ತದೆ ಎಂದರು.


ಪ್ರಾಧ್ಯಾಪಕ ಡಾ.ಸುರೇಶ್, ಉಪನ್ಯಾಸಕ ರಘುನಾಥ್, ರವಿಕುಮಾರ್, ಡಾ.ದೇವಪ್ಪ ಮಾತನಾಡಿದರು.

ಈದೇ ಸಂಧರ್ಭದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ವಿಜಯ್‌ಕುಮಾರ್, ರಮೇಶ್, ರಮೇಶ್ ಬಾಬು, ತಿಪ್ಪೇಸ್ವಾಮಿ,, ಚೈತ್ರಾ, ಪ್ರೇಮಾ, ಮಾಳಮ್ಮ, ಸಹರಬಾನು, ರಾಕೇಶ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!