ಸಿಡಿಲಿಗೆ ಕುರಿಗಾಯಿ ಮೃತ್ಯು : ತಹಶೀಲ್ದಾರ್ ರರಿಂದ ಕುಟುಂಬಕ್ಕೆ ಸಾಂತ್ವನ
ಚಳ್ಳಕೆರೆ : ಗ್ರಾಮದ ಹೊರಹೊಲಯದ ಜಮೀನಿನಲ್ಲಿ ಕುರಿ ಮೇಯಿಸಲು ಹೋದಾಗ ಕುರಿಗಾಯಿ ಸಿಡಿಲು ಬಡಿದು ಸ್ಥಳದಲ್ಲೆ ಸಾವಿನಪ್ಪಿರುವ ಘಟನೆ ನಡೆದಿದೆ
ತಾಲೂಕಿನ ಮಲ್ಲೂರಹಟ್ಟಿ ಗ್ರಾಮದ ಕುರಿಗಾಯಿ ಮಹಂತೇಶ್ ಸುಮಾರು 48 ವರ್ಷ ಇಂದು ಸುಮಾರು 2 ಗಂಟೆ ಸಮಯದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ.
ಇನ್ನೂ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಳ್ಳಕೆರೆ ತಾಲೂಕಿನ ತಹಸೀಲ್ದಾರ್ ಎನ್.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ಶವವನ್ನು ನಾಯಕನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಪರೀಕ್ಷೆಯನ್ನು ಮಾಡಿಸಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು
ನಂತರ ಮಾಧ್ಯಮದೊಂದಿಗೆೆ ಮಾತನಾಡಿದ ಅವರು ಮಳೆಯ ತೀವ್ರತೆ ಜಾಸ್ತಿ ಇರುವುದರಿಂದ ಕುರಿ ಮೇಕೆ ಮತ್ತು ದನಗಳನ್ನು ಕಾಯುವಂತ ಯುವಕರು ಯಾವುದೇ ಕಾರಣಕ್ಕೂ ಮರಗಳು ವಿದ್ಯುತ್ ಟ್ರಾನ್ಸ್ಫಾರ್ಮರ್ ಬಾಕ್ಸ್, ವಿದ್ಯುತ್ ಕಂಬಗಳು ಮುಂತಾದವುಗಳ ಆಶ್ರಯವನ್ನು ಪಡೆಯ ಕೂಡದು ಆದಷ್ಟು ಇಂಥ ಪರಿಕರಗಳಿಂದ ದೂರ ಇರಬೇಕು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗ್ರತೆ ಮೂಡಿಸಬೇಕು,
ಎಲ್ಲಾ ಪಂಚಾಯತಿ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸುತ್ತೋಲೆ ನೀಡಿ ಕ್ರಮ ಕೊಳ್ಳಬೇಕೆಂದು ಮನವಿ ಮಾಡಿದರು
ಈದೇ ಸಂದರ್ಭದಲ್ಲಿ
ಯತ್ನಟ್ಟಿ ತಿಪ್ಪೇಸ್ವಾಮಿ, ಮಾದನಹಟ್ಟಿ ಬಸಣ್ಣ, ಮುದಿಯಪ್ಪ, ಮಲ್ಲೂರಟ್ಟಿ ಗೌಡ್ರ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯ ಬೋರಣ್ಣ, ನಾಗರಾಜು, ರಾಜೇಶ್ವನಿರೀಕ್ಷಕರದ ಚೇತನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು