ಶಾಂತಿ ಮತ್ತು ಸಮೃದ್ಧಿ ಸಂಕೇತ ಗಣೇಶೋತ್ಸವ : ಭಗತ್ ಸಿಂಗ್ ಹಿತರಕ್ಷಣಾ ಸಮಗ್ರಾಭಿವೃದ್ದಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ
ಚಳ್ಳಕೆರೆ : ಗಣೇಶನ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಶಾಂತಿ ಮತ್ತು ಸಮೃದ್ಧಿ ನೀಡಲಿ ಎಂದು ಭಗತ್ ಸಿಂಗ್ ಹಿತರಕ್ಷಣಾ ಸಮಗ್ರಾಭಿವೃದ್ದಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಾ ಹೇಳಿದ್ದಾರೆ.
ಅವರು ನಗರದ ಅಂಬೇಡ್ಕರ್ ನಗರದಲ್ಲಿ ಭಗತ್ ಸಿಂಗ್ ಹಿತರಕ್ಷಣಾ ಸಮಗ್ರಾಭಿವೃದ್ದಿ ಸಮಿತಿ ವತಿಯಿಂದ ಪ್ರಥಮ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅಪ್ಪು ಗಣೇಶ ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಅವರು ಗಣೇಶ ಪ್ರತಿಷ್ಠಾನೆಯಿಂದ ಭಕ್ತ ಭಾವನೆಗಳು ಸಾರ್ವನಿಕರಲ್ಲಿ ಮಡುಗಟ್ಟಿ ಶಾಂತಿ ಸಂಕೇತ ನೆಲೆಯುರತ್ತದೆ ಆದ್ದರಿಂದ ಜನರಲ್ಲಿ ಇರುವ ಕೋಮು ಸಮರಸ್ಯವನ್ನು ಹೋಗಲಾಡಿಸಲು ಗಣೇಶ ಉತ್ಸವ ಸಹಕಾರಿಯಾಗುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಆಚರಿಸಲು ಕಟಿ ಬದ್ದರಾಗಿದೆವೆ ಎಂದರು.
ಈದೇ ಸಂಧರ್ಭದಲ್ಲಿ ಗೌರವ ಅಧ್ಯಕ ಶ್ರೀನಿವಾಸ್, ಉಪಾಧ್ಯಕ್ಷ ಶಾರು, ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ದನಂಜಯ್, ಸಹ ಕಾರ್ಯದರ್ಶಿ ಪುಡ್ನಂಜ್, ಖಾಜಾಂಚಿ ಚಂದ್ರಪ್ಪ, ಕಾನೂನು ಸಲಹೆಗಾರ ಬೋರಣ್ಣ, ನಿದೇರ್ಶಕ ಮಂಜುನಾಥ್, ರಸೂಲಾ, ಸದ್ದಾಮ್, ರಾಕಿ, ನಾಗರಾಜ್, ಹನುಮಂತ್, ಕಿಚ್ಚಾ, ಪಾಲಣ್ಣ, ಸೋನಾ, ಇತರರು ಪಾಲ್ಗೋಂಡಿದ್ದರು.