ವೇದಾವತಿ ನದಿ ಪಾತ್ರದ 28 ಕಿಲೋಮೀಟರ್ ಉದ್ದಕ್ಕೂ ಮುಂಜಾಗ್ರತೆ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಸಮೃದ್ಧವಾದ ಮಳೆಯಿಂದ ರೈತನಿಗೆ ಸಂತಸವಾದರೂ ಒಂದು ಕಡೆ ಈ ಮಳೆಯಿಂದ ಅತಿವೃಷ್ಟಿ ಸೃಷ್ಟಿಯಾಗಬಹುದು ಹವಾಮಾನ ವೈಪರಿತ್ಯವೇ ಹೀಗೆ ಕಳೆದ ಐವತ್ತು ವರ್ಷಗಳಿಂದ ಸೊರಗಿದ್ದ ಕೆರೆಗಳು ಕಟ್ಟೆಗಳು ಇಂದು ತುಂಬಿ ಧರಾಕರವಾಗಿ ಹರಿಯುತ್ತಿವೆ


ವೇದಾವತಿ ನದಿ ಯಾವ ಕ್ಷಣದಲ್ಲಾದರೂ ಕೂಡ ಕೋಡಿ ಬಿಳಬಹುದು ಇದರಿಂದ ನದಿ ಇಕ್ಕೆಲದ ಜನರಿಗೆ ಕಿರಿಕಿರಿಯಾಗಬಹುದು ಇಂತಹ ಮುಂದಿನ ಎಲ್ಲಾ ಸವಾಲುಗಳನ್ನು ಇಲ್ಲಿನ ಅಧಿಕಾರಿಗಳು ನಿಭಾಯಿಸಬೇಕು ಯಾವುದೇ ಕಾರಣಕ್ಕೂ ಜನರಿಗೆ ಮತ್ತು ಜನಜೀವನಕ್ಕೆ ತೊಂದರೆ ಆಗಬಾರದೆಂದು ವಿಧಾನ ಪರಿಷತ್ ಸದಸ್ಯ ನವೀನ್ ಹೇಳಿದರು


ಅವರು ತಾಲೂಕಿನ ಪಿ.ಮಹದೇವಪುರ ಗ್ರಾಮದಲ್ಲಿ ಎರಡು ಕೆರೆಗಳು ಕೊಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಮತ್ತು ಬಾಗಿನವನ್ನು ಮಹಿಳೆಯರಿಗೆ ನೀಡಿ ಮಾತನಾಡಿ ನಮ್ಮ ಹಿಂದೂ ಸಂಸ್ಕೃತಿ ವೈಶಿಷ್ಟವಾದದ್ದು ಈ ಸಂಸ್ಕೃತಿ ಮತ್ತು ಧಾರ್ಮಿಕ ನಿಲೆಗಟ್ಟು ದೇಶವನ್ನು ಶ್ರೀಮಂತ ಗೊಳಿಸಿದೆ ಇಂತಹ ಸತ್ಸ ಸಂಪ್ರದಾಯಗಳು ಸಮಾಜದಲ್ಲಿ ಮನೆ ಮಾಡಬೇಕು ಎಂದು ಹೇಳಿದರು


ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಮಳೆಯಿಂದ ಜನರಿಗೆ ಕಿರಿಕಿರಿಯಾದರು ಐವತ್ತು ವರ್ಷಗಳಿಂದ ತುಂಬದAತ ಕೆಲವು ಕೆರೆಗಳು ತುಂಬಿವೆ ರೈತನ ಮುಖದಲ್ಲಿ ಮಂದಹಾಸ ಬೀರಿದೆ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಬಗ್ಗೆ ಅಪಾರವಾದ ಕಾಳಜಿ ಇದೆ, ಯಾವುದೇ ಕಾರಣಕ್ಕೂ ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕೆಂಬ ಸೂಚನೆ ನೀಡಿದ್ದಾರೆ


ಅದರಂತೆ ಜಿಲ್ಲಾಧಿಕಾರಿಗಳು ಕೂಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಹೀಗಾಗಿ ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಚಳ್ಳಕೆರೆ ತಾಲೂಕಿನ 28 ಕಿಲೋಮೀಟರ್ ವ್ಯಾಪ್ತಿಯಲ್ಲಿ ವೇದಾವತಿ ನದಿ ಹರಿಯುತ್ತಿದ್ದು ವಿವಿ ಸಾಗರ ತುಂಬಿದಲ್ಲಿ ಈ ವೇದಾವತಿ ನದಿಯ ಹರಿವು ಹೆಚ್ಚಾಗಬಹುದು


ಆದರೆ ಭಯಭೀತರಾಗುವ ಅವಶ್ಯಕತೆ ಇಲ್ಲ ತಾಲೂಕು ಆಡಳಿತದಿಂದ ಸಮರ್ಥವಾಗಿ ಪ್ರಸ್ತುತಿಯನ್ನು ನಿಭಾಯಿಸಲಾಗುವುದು ಈ ನದಿ ಪಾತ್ರದಲ್ಲಿ ವೃದ್ಧರು ಮಹಿಳೆಯರು ಮತ್ತು ಮಕ್ಕಳನ್ನು ನೀರಿಗೆ ಇಳಿಸದಂತೆ ಜೋಪಾನವಾಗಿ ನೋಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು


ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಸೋಮಶೇಖರ್ ಮಂಡಿಮಠ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮದಾಸ್, ಎಸ್ಸಿ ಮೋರ್ಚಾ ಬಾಜಪ ಅಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ, ಭಾಜಪ ಮುಖಂಡರಾದ ಸೋಮಶೇಖರ್‌ರೆಡ್ಡಿ, ಪಿ ಮಹದೇವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು

Namma Challakere Local News
error: Content is protected !!