ಪೂರಕ ಪೌಷ್ಟಿಕ ಆಹಾರ ಮಗುವಿನ ಬೆಳವಣಿಗೆಗೆ ಕಾರಣ : ಗ್ರಾಪಂ. ಅಧ್ಯಕ್ಷೆ ಎಂಬಿ. ಬೋರಮ್ಮ
ನಾಯಕನಹಟ್ಟಿ :: ಗರ್ಭಿಣಿ ತಾಯಂದಿರು ಹೆಚ್ಚು ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಬೋರಮ್ಮ ಹೇಳಿದ್ದಾರೆ.
ಅವರು ಹೋಬಳಿಯ ನಲಗೇತನಹಟ್ಟಿ ಶಿಶು ಅಭಿವೃದ್ಧಿ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ವತಿಯಿಂದ ಅಂಗನವಾಡಿ ಸಿ, ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಭಿಯಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ.
ತಾಯಂದಿರು ತಮ್ಮ ಮಕ್ಕಳಿಗೆ ಮನೆಯಲ್ಲಿ ಆಹಾರವನ್ನು ತಯಾರಿಸಿ ಮಗುವಿಗೆ ಉಣಿಸಿ ಎಂದು ಗ್ರಾಪಂ. ಅಧ್ಯಕ್ಷೆ ಎಂಬಿ.ಬೋರಮ್ಮ ತಿಳಿಸಿದ್ದಾರೆ.
ಈ ವೇಳೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಸಿಬಿ.ಉಮೇಶ ಮಾತನಾಡಿ ಹಲವಾರು ವಿಷಪೂರಿತ ಪದಾರ್ಥಗಳ ಆಹಾರ ಸೇವಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಸಿಬಿ.ಉಮೇಶ್ ತಿಳಿಸಿದ್ದಾರೆ
ನಂತರ ಅಂಗನವಾಡಿ ಶಿಕ್ಷಕಿಯರಾದ ಈಎಸ್.ರಮ್ಯಾ ಸಿಬಿ ಚಂದ್ರಮತಿ ಪೌಷ್ಟಿಕ ಆಹಾರ ಮಹತ್ವ ಅದರಿಂದಾಗುವ ಅನುಕೂಲಗಳು ದೇಹದ ಬೆಳವಣಿಗೆ ಸೇರಿದಂತೆ ಸಭೆಯಲ್ಲಿ ತಾಯಂದಿರಿಗೆ ಸಲಹೆ ನೀಡಿದರು.
ಇನ್ನೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳಿಂದ ಪೋಷಣ ಅಭಿಯಾನದ ಬಗ್ಗೆ ಜಾಗೃತಿ ಜಾತ ಮಾಡಲಾಯಿತು
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿ ರೇಖಾ ,ಅಂಗನವಾಡಿ ಶಿಕ್ಷಕಿರಾದ ಬಿ ಬೋರಮ್ಮ, ಶುಭ, ಲತಾ ವಿಮಲಾಕ್ಷಿ, ಸಹಾಯಕಿರಾದ ಬಿಓ.ಕಲಾವತಿ, ಅನುಷಾ, ಸೇರಿದಂತೆ ತಾಯಿಂದಿರು ಉಪಸ್ಥಿತರಿದ್ದರು