ಸವರ್ಣಿಯರಿಂದ ದೌರ್ಜನ್ಯ..! ಸಂತ್ರಸ್ಥರಿಗೆ ನ್ಯಾಯ ಸಿಗದೆ ಸಮಾಜ ಕಲ್ಯಾಣ ಇಲಾಖೆ ಮುಂದೆ ಪ್ರತಿಭಟನೆ
ಚಳ್ಳಕೆರೆ : ಸವರ್ಣಿಯರಿಂದ ನಿರಂತವಾಗಿ ದೌರ್ಜನ್ಯ, ದಬ್ಬಾಳಿಕೆಗೆ ಒಳಪಟ್ಟು ಊರು ಬಿಟ್ಟು ಸಾಮಾಜಿಕ ಬಹಿಷ್ಕಾರಕ್ಕೆ ಹೊಳಗಾದ ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಇಂದು ತಾಲೂಕು ಸಮಾಜ ಕಲ್ಯಾಣ ಇಲಾಲೆ ಬಾಗಿಲಿಗೆ ಅಡ್ಡವಾಗಿ ಪ್ರತಿಭಟನೆ ಮಾಡಿದ ದೃಶ್ಯ ಕಂಡು ಬಂದಿತು.
ಹೌದು ನಿಜಕ್ಕೂ ಶೌಚನೀಯ ಕಳೆದ ಹಲವು ವರ್ಷಗಳ ಹಿಂದೆ ಚಳ್ಳಕೆರೆ ತಾಲೂಕಿನ ದೊಡ್ಡ ಬೀರನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಹಲವು ಪರಿಶಿಷ್ಟ ಜಾತಿಯ ಕುಟುಂಬಗಳು ದೌರ್ಜನ್ಯದಿಂದ ಅನ್ಯಯಕ್ಕೆ ಹೊಳಗಾಗಿದ್ದರು.
ಸುಮಾರು ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಅಧಿಕಾರಿಗಳು ಮೀನಾ ಮೇಷ ಮಾಡುತ್ತಿರುವುದು ಕಂಡು ಬಂದಿದೆ ಎಂದು ಸಂತ್ರಸ್ಥರು ಆರೋಪ ಮಾಡಿ ಘೋಷಣೆಗಳನ್ನು ಕೂಗುವುದು ಕಂಡು ಬಂದಿತು.
ಇAದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡಿದ ಪ್ರತಿಭಟನಕಾರರು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಗ್ರಾಮಕ್ಕೆ ಬೇಟಿನೀಡಿ ಸಂತ್ರÀಸ್ಥರ ಮೂಲಭೂತ ಅಗತ್ಯ ಸೌಲಭ್ಯಗಳನ್ನು ಹೊದಗಿಸಿ ಕೊಡುತ್ತೆವೆ ಎನ್ನುವ ಭರವಸೆಗಳು ಇದುವರೆಗೂ ಈಡೇರಿಲ್ಲ,
ಸಂತ್ರಸ್ಥರ ಬೇಡಿಕೆಗಳಲ್ಲಿ 120 ಜನ ನೀವೇಶನ ರಹಿತರನ್ನು ಪರಿಗಣಿಸಿ, ಇವರಿಗೆ ಮಂಜೂರಾಗಿದ್ದ 2 ಎಕರೆ ಜಮೀನಿನಲ್ಲಿ ಸುಮಾರು 40 ನೀವೇಶನಗಳ ನಕ್ಷೆ ತಯಾರಿಸಿ ಹಂಚಿಕೆ ಮಾಡಲು ,
ಈ ಹಿಂದೆ ಸರ್ಕಾರದ ಆದೇಶ ನೀಡಿತ್ತು, ಆದರೆ ಫಲಾನುಭವಿಗಳಿಗೆ ನಿವೇಶನ ಕೊಡಲು ಬರುವುದಿಲ್ಲ ಎನ್ನುವ ಕುಂಟು ನೇಪ ಹೇಳಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ, ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿಡಿ.ರಾಜಗಿರಿ ದೂರಿದ್ದಾರೆ.
ದಲಿತರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಪ್ರತ್ಯೇಕವಾಗಿ ಕಾಲೋನಿ ರೂಪಿಸಬೇಕು, ಇನ್ನೂ 70 ನೀವೇಶನ ರಹಿತರಿಗೆ ಹೆಚ್ಚುವರಿ ನೀವೇಶನಕ್ಕಾಗಿ 3 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು, ಈ ಹಿಂದೆ ಮಂಜೂರಾಗಿರುವ 52 ನಿವೇಶನ ರಹಿತರ ಪಟ್ಟಿಯಂತೆ ಎಲ್ಲಾರಿಗೂ ಹಕ್ಕುಪತ್ರ ಕೊಡಬೇಕೆಂದು ಮನವಿ ನೀಡಿದ್ದಾರೆ.
ಈ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಯಾದ ಮಂಜುನಾಥ್, ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಾಕ್ಷ ಎನ್.ಪ್ರಕಾಶ್, ಮುಖಂಡ ಶ್ರೀನಿವಾಸ್, ನಾಗರಾಜ್, ಕೊನಿಗರಹಳ್ಳಿ ಬಾಬು, ದೊಡ್ಡಬೀರನಹಳ್ಳಿ ನಾಗರಾಜ್, ತಿಪ್ಪೆಸ್ವಾಮಿ, ಗೌರಮ್ಮ, ಕವಿತಮ್ಮ, ಲಲಿತಮ್ಮ, ಲಕ್ಷö್ಮಮ್ಮ, ಜಯಮ್ಮ, ಪ್ರಾಹ್ಲಾದ, ಹನುಮಂತರಾಯ, ಕುಮಾರಸ್ವಾಮಿ, ಪ್ರಕಾಶ್, ಇತರರು ಪಾಲ್ಗೊಡಿದ್ದರು.