ಮಗನನ್ನು ಕಳೆದುಕೊಂಡ ಕುಟುಂಬಕ್ಕೆ 4ಲಕ್ಷ ರೂ.ಚೆಕ್ ನೀಡಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಚಳ್ಳಕೆರೆ ಉಪ ವಿಭಾಗದ ಘಟಕ 2 ಶಾಖಾ ವ್ಯಾಪ್ತಿಯ ಬಾಲೇನಹಳ್ಳಿ ಗ್ರಾಮದ ಯುವಕ ಅಜ್ಜಯ್ಯ ಎಂಬುವವರು ಕುರಿ ಮೇಕೆಗಳ ಮೆವಿಗಾಗಿ ಮರದ ಸೊಪ್ಪನ್ನು ಕೀಳುವ ಸಂಧರ್ಭದಲ್ಲಿ ಪಕ್ಕದಲ್ಲೆ ಇರುವ ವಿದ್ಯುತ್ ತಂತಿಯನ್ನು ಗಮನಹರಿಸದ ಯುವಕ ವಿದ್ಯುತ್ ಸ್ಪರ್ಶ ತಗಲಿ ಸಾವಿನ್ನಿಪ್ಪಿರುವ ಘಟನೆ ಕಳೆದ ವರ್ಷ ನಡೆದಿತ್ತು.
ಕಡು ಬಡತನದಿಂದ ಜೀವನ ನಡೆಸುತ್ತಿರುವ ಈ ಕುಟುಂಬಕ್ಕೆ ಪರಿಹಾರ ನೀಡುವಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕೂಡ ಬೆಸ್ಕಾಂ ಇಲಾಕೆಗೆ ಸೂಚನೆ ನೀಡಿದ್ದರು
ಇದರನ್ವಯ ಇಂದು ಮೃತರಾದ ಅಜ್ಜಯ್ಯ ಕುಟುಂಬಕ್ಕೆ ಸುಮಾರು 4 ಲಕ್ಷದ ಪರಿಹಾರದ ಮೊತ್ತ ಸರಕಾರದಿಂದ ಬಿಡುಗಡೆಯಾಗಿತ್ತು ಇದನ್ನು ಇಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸುಮಾರು 4 ಲಕ್ಷ ಮೌಲ್ಯದ ಪರಿಹಾರದ ಚೆಕ್ನ್ನು ನೀಡಿ ಸಾಂತ್ವನ ಹೇಳಿದರು.