ಊರ ಮಾರಮ್ಮ ದೇವಿಯ ಕಳಸ ಸ್ಥಾಪನೆ : ಮಾಜಿ ಶಾಸಕ ತಿಪ್ಪೇಸ್ವಾಮಿ
ಚಳ್ಳಕೆರೆ : ಊರ ಮಾರಮ್ಮ ದೇವಿಯು ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಪೂರೈಸಲಿ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.
ತಾಲೂಕಿನ ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಕಾವಲು ಬಸವೇಶ್ವರ ನಗರದ ನೂತನ ಊರ ಮಾರಮ್ಮ ದೇವಾಲಯದ ಕಳಸ ಸ್ಥಾಪನೆ ಹಾಗೂ ದೇವಾಲಯ ಉದ್ಘಾಟನೆ ಕಾರ್ಯಕ್ರಮವನ್ನು ಮಾಜಿ ಶಾಸಕ ತಿಪ್ಪೇಸ್ವಾಮಿ ನೆರವೇರಿಸಿ ಮಾತನಾಡಿದ್ದಾರೆ
ಬಹು ದಿನಗಳ ನಂತರ ಊರ ಮಾರಮ್ಮ ದೇವಿಯ ದೇವಾಲಯವು ಈ ಗ್ರಾಮದಲ್ಲಿ ಸ್ಥಾಪನೆ ಆಗಿರುವುದು ತುಂಬಾ ಸಂತೋಷದ ವಿಷಯ ತಾಯಿ ಊರ ಮಾರಮ್ಮ ದೇವಿಯು ಶಾಂತಿ ನೆಮ್ಮದಿ ಎನ್ನ ಭಕ್ತರಿಗೆ ಕರುಣಿಸಲಿ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ತಿಳಿಸಿದರು.
ಈ ವೇಳೆ ನೂತನ ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ಮಾತನಾಡಿ ಶ್ರೀ ಊರ ಮಾರಮ್ಮ ದೇವಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂತನ ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಣ್ಣ, ಬಂಗಾರಪ್ಪ, ಕರಿಬಸಪ್ಪ ಚೌಳಕೆರೆ, ಬೂಟ್ ತಿಪ್ಪೇಸ್ವಾಮಿ ,ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ಗ್ರಾಮಸ್ಥರಾದ ಸಣ್ಣ ಬೋರಯ್ಯ, ಕುಂಟು ಓಬಜ್ಜ, ಬಡಗಿ ತಿಪ್ಪೇಸ್ವಾಮಿ, ಅಂಗಡಿ ರಾಜಯ್ಯ, ಡೈಲಾಗ್ ತಿಪ್ಪೇಸ್ವಾಮಿ, ಗೌಚ್ಚಿಗಾರ್ ತಿಪ್ಪೇಸ್ವಾಮಿ, ಪೂಜಾರಿ ತಿಪ್ಪಯ್ಯ, ಕಾಮಯ್ಯ, ಕಾಮರಾಜ್ ,ಅಂಗಡಿ ನಾಗರಾಜ್, ದೇವುಡ್ಲು ಪಾಲಯ್ಯ, ಯಾರಯ್ಯ, ಕೊಡಿ ಮೀಸೆ ಓಬಯ್ಯ, ಹಮಾಲಿ ಬಸಯ್ಯ ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು,