ವಿಶ್ವ ಹಿಂದೂ ಮಹಾ ಗಣಪತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು : ತಹಶೀಲ್ದಾರ್ ಎನ್ ರಘುಮೂರ್ತಿ
ಚಳ್ಳಕೆರೆ : ಶಾಂತಿ ಸುವ್ಯವಸ್ಥೆ ಹೆಸರಾದ ನಾಡಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾಪಾಡುವಲ್ಲಿ ಯುವಕರು ಮುಂದಾಗಬೇಕು, ಸಮಾಜದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ವಿಶ್ವ ಹಿಂದೂ ಮಹಾ ಗಣಪತಿಯ ಹಬ್ಬವನ್ನು ಅಣ್ಣ ತಮ್ಮಂದಿರAತೆ ಭಕ್ತಿ ಪೂರಕವಾಗಿ ಆಚರಿಸಬೇಕು ಎಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ತಾಲೂಕಿನ ನಾಯಕನಹಟ್ಟಿ ಪಟ್ಟಣದ ಪಾದಗಟ್ಟಿಯ ಆವರಣದಲ್ಲಿ ವಿಶ್ವ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನ ಸ್ಥಳದಲ್ಲಿ ಭಗವಾನ್ ಧ್ವಜಾರೋಹಣ ಹಾಗೂ ಗೋಮಾತೆ ಪೂಜೆ ನೆರವೇರಿಸಿ ಮಾತನಾಡಿದ ಅವರು ನಮ್ಮ ದೇಶ ಸನಾತನ ಸಂಸ್ಕೃತಿ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನಿಂತಿದೆ ನಮ್ಮ ದೇಶದ ಧಾರ್ಮಿಕತೆ ಮೂಲಕ ವಿಶ್ವ ಹಿಂದೂ ಮಹಾಗಣಪತಿಯ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಬೇಕು.
ಕೆಲವು ದೇಶಗಳಲ್ಲಿ ಮುಸ್ಲಿಮರು ಸಹ ಗಣೇಶ ಹಬ್ಬವನ್ನು ಆಚರಿಸುತ್ತಾರೆ, ಇದು ಪುಣ್ಯಕ್ಷೇತ್ರವಾದ್ದರಿಂದ ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶ್ರದ್ಧಾಭಕ್ತಿಯಿಂದ ವಿಶ್ವ ಹಿಂದೂ ಮಹಾ ಗಣಪತಿಯ ಹಬ್ಬವನ್ನು ಆಚರಣೆ ಮಾಡಬೇಕು, ನಾನು ಸಹ ಶ್ರೀ ಗಣೇಶನ ಪರಮಭಕ್ತನಾಗಿದ್ದೇನೆ ನಾನು ವಿಶ್ವ ಹಿಂದೂ ಮಹಾ ಗಣಪತಿಯ ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ಅದೃಷ್ಟ ನನಗೆ ಈ ಬಾರಿ ಕಲ್ಪಿಸಿದೆ ಎಂದು ತಿಳಿಸಿದರು.
ಈ ವೇಳೆ ನೂತನ ಪಟ್ಟಣ ಪಂಚಾಯಿತಿ ಸದಸ್ಯ ಎನ್ ಮಹಾಂತಣ್ಣ ಹಾಗೂ ಎಂವೈಟಿ.ಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ ಶಿವಣ್ಣ, ಮಂಡಲ ಎಸ್ಟಿ ಮೋರ್ಚಾ ಅಧ್ಯಕ್ಷ ಸಿ ಬಿ ಮೋಹನ್, ಬಂಗಾರಪ್ಪ, ವೇಣು, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.ಬಸಣ್ಣ, ಮೇಘ ಹೋಟೆಲ್ ಮಾಲೀಕರಾದ ಬಸವರಾಜ್, ಡಿಹೆಚ್.ಪರಮೇಶ್ವರಪ್ಪ ಓಬಯ್ಯನಹಟ್ಟಿ, ಚೌಡಣ್ಣ ನಾಯಕನಹಟ್ಟಿ, ರೈತ ಮೋರ್ಚಾ ಮಂಡಲ ಅಧ್ಯಕ್ಷ ಎಚ್ ಬಿ ಬಾಲರಾಜ್, ಗಿಡ್ಡಾಪುರ ಬೋರಯ್ಯ, ಕುದಾಪುರ ಪಾಲಯ್ಯ, ವಿಷ್ಣು, ಕುದಾಪುರ ಕೃಷ್ಣಾ ಗೌಡ್ರು, ನಿರಂಜನ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.