ಚಳ್ಳಕೆರೆ : ಶ್ರಾವಣ ಮಾಸದ ಅಂಗವಾಗಿ ಶ್ರೀಕರೇಕಲ್ ಶ್ರೀಆಂಜನೇಯಸ್ವಾಮಿಗೆ ವಿಶೇಷ ಪೂಜೆ
ಚಳ್ಳಕೆರೆ : ಶ್ರಾವಣ ಮಾಸದ ನಾಲ್ಕನೇ ಶನಿವಾರದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿAದ ಭಕ್ತಾಧಿಗಳು ತಮ್ಮ ಭಕ್ತಿಯನ್ನು ಸಮರ್ಪಿಸಿದರು,
ಅಲಂಕಾರಗೊAಡ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು,
ಚಳ್ಳಕೆರೆ ನಗರದ ನಾಯಕನಹಟ್ಟಿ ರಸ್ತೆಯಲ್ಲಿರುವ ಶ್ರೀಕರೇಕಲ್ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ 4ನೇ ಶನಿವಾರ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮ ನಡೆಸಿದರು
ಇನ್ನೂ ಬನಶಂಕರಿ ದೇವರಿಗೂ ಕೂಡ ವಿಶೇಷ ಹೂವಿನ ಅಲಂಕಾರ ಮಾಡಿರುವುದು ಕಂಡು ಬಂದಿತು.
ಜೊತೆಗೆ ಶ್ರಾವಣ ಮಾಸದ ಅಂಗವಾಗಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕೂಡ ದೊಡ್ಡೆರಿ ಕನ್ನೆಶ್ವರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಮಠದ ಶ್ರೀಸತ್ ಉಪಾಸಿ ಮಲ್ಲಿಕಾರ್ಜುನ ಮಹಾ ಸ್ವಾಮಿಗಳ ಆರ್ಶೀವಾದ ಪಡೆದರು.