ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಉದ್ಘಾಟನೆ
ಚಳ್ಳಕೆರೆ : ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮಂತ್ರಿಗಳ ಆಶಯದಂತೆ ಶೇಕಡ 100ರಷ್ಟು ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಕಂದಾಯ ಇಲಾಖೆ ಮಾಡುತ್ತಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.


ನಾಯಕನಹಟ್ಟಿ ಸಮೀಪದ ನಲಗೇತನಹಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆಯ ಕಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಮ್ಮತವಾದ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಸರಕಾದ ಅಧೀನ ಅಧಿಕಾರಿಗಳು ಶಿರಸವಹಿಸಿ ಕಾರ್ಯ ಮಾಡಬೇಕು, ಗ್ರಾಮೀಣ ಪ್ರದೇಶದಿಂದ ಸಮಸ್ಯೆಗಳನ್ನು ಹೊತ್ತು ತಂದ ಹಲವು ಸಾರ್ವಜನಿಕರಿಗೆ ಸ್ಥಳದಲ್ಲೆ ಪರಿಹಾರ ನೀಡುವಂತ ಮಹತ್ವದ ಕಾರ್ಯ ಮಾಡಬೇಕು ಎಂದರು.
ಈ ವೇಳೆ ಊರಿನ ಮುಖಂಡರಾದ ಪೂರ್ಣ ಓಬಯ್ಯ ಮಾತನಾಡಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಗಳನ್ನು ಉಪ್ಪಾರಹಟ್ಟಿ ಗ್ರಾಮಠಾಣೆಯನ್ನಾಗಿ ಮಾಡಿ ನಮ್ಮ ಗ್ರಾಮ ಪಂಚಾಯತಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ತಹಶೀಲ್ದಾರ್ ಎನ್.ರಘುಮೂರ್ತಿಯವರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.


ಈದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂಬಿ.ಬೋರಮ್ಮ, ಉಪಾಧ್ಯಕ್ಷೆ ಎಲ್‌ಬಿ.ಬೊಮ್ಮಲಿಂಗೇಶ್, ಸದಸ್ಯರಾದ ಈಗಲೂ ಬೋರಯ್ಯ ಪಿಎಂ.ಮುತ್ತಯ್ಯ, ಗೌಡ್ರು ಬೋರೆಯ್ಯ, ಪಿಎನ್.ಮುತ್ತಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿಬೋರೇಶ, ದೊಡ್ಡಬೋರಮ್ಮ, ಸಣ್ಣ ಬೋರಮ್ಮ ಎಸ್.ಜಿ ಸಣ್ಣಬೋರಯ್ಯ, ಪುಷ್ಪಲತಾ, ಜಿಬಿ.ಮುತ್ತಯ್ಯ, ಬೋರಮ್ಮ, ಬಿಎನ್.ನಿಂಗರಾಜ್, ಜೆ.ಮಲ್ಲಿಕಾರ್ಜುನ್, ಪಿಟಿ.ಉಮಾದೇವಿ, ಬೊಮ್ಮಯ್ಯ, ದ್ರಾಕ್ಷಾಯಿಣಿ ಚಿದಾನಂದ, ಬಂಗಾರಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎನ್‌ಬಿ.ವೀರನಾಯಕ, ಕಂದಾಯ ಇಲಾಖೆಯ ನಾಯಕನಹಟ್ಟಿ ನಾಡಕಚೇರಿಯ ಉಪತಾಶಿಲ್ದಾರಾದ ಎಂ.ಸುಧಾ, ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ನಲಗೇತನಹಟ್ಟಿಗ್ರಾಮ ಲೆಕ್ಕಾಧಿಕಾರಿ ಹರೀಶ್, ಬೆಸ್ಕಾಂ ಶಾಖಾದಿಕಾರಿ ಎನ್‌ಬಿ.ಬೋರಣ್ಣ, ಪಶು ವೈದಾಧಿಕಾರಿ ರೇವಣ್ಣ, ಅರಣ್ಯ ವಲಯ ಅಧಿಕಾರಿ ಬಾಬು, ತಾಲೂಕು ಕೃಷಿ ಅಧಿಕಾರಿ ಅಶೋಕ್,

ಕಾರ್ಮಿಕ ಇಲಾಖೆಯ ಅಧಿಕಾರಿ ಕುಸುಮ, ತಾಲೂಕು ಆರೋಗ್ಯ ಅಧಿಕಾರಿ ಕಾಶಿ, ಆರೋಗ್ಯ ಕ್ಷೇತ್ರಶಿಕ್ಷಣ ಅಧಿಕಾರಿ ಎಸ್‌ಪಿ.ತಿಪ್ಪೇಸ್ವಾಮಿ, ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಮಹಮ್ಮದ್ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಸತೀಶ್, ಗೌಡಗೆರೆ ಗ್ರಾಮ ಪಂಚಾಯತಿ ಲೆಕ್ಕಾಧಿಕಾರಿ ಜಗದೀಶ್, ಶರಣಬಸಪ್ಪ, ಉಮಾ, ಪುಷ್ಪಲತಾ, ನಾಡಕಛೇರಿಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸಮಸ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಗ್ರಾಮಸ್ಥರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು


ಈದೇ ಸಂಧರ್ಭದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳಿಗೆ ಸಂಬAದಿಸಿದ ಸುಮಾರು ಅರ್ಜಿಗಳು ಸ್ವೀಕೃತ ಗೊಂಡವು ಕಾಲಮಾನಕ್ಕೆ ತಕ್ಕಂತೆ ಅರ್ಜಿ ವಿಲೆ ಮಾಡಲಾಗುವುದು ಎಂದು ತಹಶೀಲ್ದಾರ ಎನ್.ರಘುಮೂರ್ತಿ ಭವರಸೆ ನೀಡಿದ್ದಾರೆ.

Namma Challakere Local News
error: Content is protected !!