ಸರಕಾರದ ಭೂಮಿ ಅಕ್ರಮ..! ಸೋಲಾರ್ ಕಂಪನಿಗೆ ಖಡಕ್ ವಾರ್ನಿಂಗ್ : ತಹಶೀಲ್ದಾರ ಎನ್.ರಘುಮೂರ್ತಿ
ಚಳ್ಳಕೆರೆ : ಬಯಲು ಸೀಮೆಗೆ ಸೋಲಾರ್ ಕಂಪನಿಗಳ ಆಗಮನದಿಂದ ಹಿಂದೂಳಿದ ತಾಲೂಕು ಸಂಪೂರ್ಣವಾಗಿ ಬರಡಾಗಿದೆ.
ಹೌದು ನಿಜಕ್ಕೂ ಶೌಚನೀಯ ಇಂತಹ ಪರಸ್ಥಿತಿ ಕೂಡ ಈಡೀ ರಾಜ್ಯದಲ್ಲಿ ಎಲ್ಲಿಯೂ ಕೂಡ ಬಾರದಿರಲಿ ಈಡೀ ತಾಲೂಕು ಆವರಿಸಿದ ಸೋಲಾರ್ ಪ್ಲಾಟ್‌ಗಳಿಂದ ಹೊಣ ಹವೆ ಉಗುಳುವ ಪರಸ್ಥಿತಿ ನಿರ್ಮಾಣವಾಗಿದೆ.


ಸೋಲಾರ್ ಕಂಪನಿಗಳ ಮಾಲೀಕರ ಹಣದ ಆಸೆಗೆ ಬಲಿಯಾದ ತಾಲೂಕಿನ ಜನತೆ, ಈಡೀ ಭೂಮಿಯನ್ನು ಮಾರಾಟ ಮಾಡುತಿದ್ದಾರೆ ಇನ್ನೂ ಸಾಲದು ಎಂಬAತೆ ಅಕ್ರಮವಾಗಿ ಸರಕಾರದ ಹಳ್ಳ, ಕೊಳ್ಳ ಹಾಗೂ ದಾರಿಗಳನ್ನು ಈಗೇ ಸರಕಾರದ ಸ್ವಾಮ್ಯದ ಸತ್ತುಗಳನ್ನು ಕೂಡ ಆಕ್ರಮಿಸಿಕೊಂಡಿರುವುದು ವಿಷಧಾನೀಯ. ಕೆಲವು ಕಡೆಗಳಲ್ಲಿ ಪ್ರತಿಭಟನೆ ಮೂಲಕ ಸರಕಾದ ಗೋಮಾಳ, ಹಳ್ಳಗಳು, ದಾರಿಗಳನ್ನು ಸಾರ್ವಜನಿಕರು ಹೋರಾಟದ ಮೂಲಕ ಬಿಡಿಸಿದರೆ, ಮತ್ತೆ ಕೆಲವು ಕಡೆಗಳಲ್ಲಿ ತಹಶೀಲ್ದಾರ ಎನ್.ರಘುಮೂರ್ತೀ ಇಚ್ಚಾ ಶಕ್ತಿಯ ಮೂಲಕ ಸರ್ವೆ ಅಧಿಕಾರಿಗಳ ಸಹಾಯದಿಂದ ಅಕ್ರಮ ಎಂದು ಕಂಡು ಬಂದು ತಕ್ಷಣೆವೇ ತೆರವು ಕಾರ್ಯಚಾರಣೆ ಮಾಡಿರುವುದು ಶಾಘ್ಲನೀಯ.


ಅದರಂತೆ ಕಳೆದ ಮೂರು ತಿಂಗಳ ಹಿಂದೆ ತಾಲೂಕು ಕಛೇರಿಗೆ ಮನವಿ ನೀಡಿದ ಸಾರ್ವಜನಿಕರ ಮನವಿ ಮೇರೆಗೆ ಇಂದು ತಾಲೂಕಿನ ತಳಕು ಹೋಬಳಿಯ ಬಂಡೆತಿಮ್ಮಾಲಾಪುರ ಗ್ರಾಮದ ಸರ್ವೆ ನಂ 45 ಹಾಗೂ 46 ಸುಜಾತ ಸೋಲಾರ್ ಕಂಪನಿಯವರು ಸುಮಾರು 18ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ,


ಸರಕಾರದ ಸ್ವಾಮ್ಯದ ಸಾರ್ವಜನಿಕರ ದಾರಿಗಳು, ಹಳ್ಳಗಳು, ಈಗೇ ಅಂತರ್ಜಲ ವೃದ್ದಿಗೆ ಬೇಕಾದ ಚಿಕ್ಕ ಚಿಕ್ಕ ಹಳ್ಳಗಳನ್ನು ಕಂಪನಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದ ತಕ್ಷಣೆವೇ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಒತ್ತುವರಿ ಕಾರ್ಯಕ್ಕೆ ಕೈ ಹಾಕಿದ್ದಾರೆ.


ಸಾರ್ವಜನಿಕರ ಪ್ರತಿಭಟನೆ :
ಕಂಪನಿ ಸುತ್ತಾ ಕಂಪೌAಡ್ ನಿರ್ಮಿಸಿಕೊಂಡು ಸಾರ್ವಜನಿಕರ ದಾರಿ ಹಾಗೂ ಹಳ್ಳವನ್ನು ಅಕ್ರಮವಾಗಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಇಂದು ನೂರಾರು ಮಹಿಳೆಯರು ಪ್ರತಿಭಟನೆ ನಿರತರಾಗಿದ್ದರು, ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಗ್ರಾಮದ ಮಹಿಳೆಯರು ಉರಿ ಬಿಸಿನಿನಲ್ಲಿ ಪ್ರತಿಭಟನೆ ಸರಿಯಲ್ಲ, ಗೌರಸಮುದ್ರ ಜಾತ್ರೆ ಇಂತಹ ಸಮಯದಲ್ಲಿ ದೇವಿಯ ಆರಾಧನೆಯ ಮೂಲಕ ಉಪವಾಸ ಮಾಡುತ್ತಿದ್ದೀರಾ, ಆದರೆ ಇತಂಹ ಸಮಯದಲ್ಲಿ ಪ್ರತಿಭಟನೆ ಮಾಡುವುದು ಸಮಂಜಸವಲ್ಲ ಎಂದು ಮನಹೊಲಿಸಲು ಪ್ರಯತ್ನಿಸಿದ್ದಾರೆ,

ಖಡಕ್ ಎಚ್ಚರಿಕೆ :
ಸರಕಾರದ ಹಳ್ಳ ಹಾಗೂ ಸರಕಾರ ದಾರಿ, ಕಾಲುವೆ ಈಗೇ ಯಾವುದಾರರು ಅಕ್ರಮ ಎಸಗಿದ್ದರು ಕೂಡಲೇ ಅವರುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಮುಕ್ತ ಸೇವೆಗೆ ಅನುಕೂಲ ಮಾಡಿಕೊಡಲಾಗುವುದು ಇಲ್ಲವಾದರೆ ಈ ಕೂಡಲೇ ಕಾನೂನು ಶಿಸ್ತು ಕ್ರಮ ವಹಿಸಲಾಗುವುದು ಎಂದು ಕಂಪನಿ ಮಾಲೀಕರಿಗೆ ಖಡಕ್ ಎಚ್ಚರಿಕೆ ನಿಡಲಾಗಿದೆ.

About The Author

Namma Challakere Local News
error: Content is protected !!