ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಅರಸು ಒಬ್ಬರು ಕೇವಲ ರಾಜಾಕರಣೀಯಾಗದೆ, ಸಮಾಜಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಭಿವೃಧ್ದಿಗಾಗಿ ಶ್ರಮಿಸಿದ ದಿಮಂತ ವ್ಯಕ್ತಿ ಹಿಂದೂಳಿದ ವರ್ಗಗಳ ಹರಿಕಾರನಾದ ಡಿ.ವದೇವರಾಜ ಅರಸು ಒಬ್ಬರು ಮಾತ್ರ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಸಂಕೀರ್ಣ ಆವರಣದಲ್ಲಿ ಡಿ.ದೇವರಾಜ್ ಅರಸು ರವರ107ನೇ ಜನ್ಮ ದಿನಾಚರಣೆ ಪ್ರಯುಕ್ತ ಭಾವ ಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಸಮಾರಂಭವನ್ನು ಇಂದು ನಮಗೆಲ್ಲ ಸಂತಸ ತಂದಿದೆ, ಇವರು ತಮ್ಮ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿ ಗೊಳಿಸುವುದರ ಮೂಲಕ ಬಡ ಜನರ ಬಾಳಿಗೆ ದಾರಿ ದೀಪವಾಗಿದ್ದಾರೆ. ರಾಜಾಕೀಯಕ್ಕೆ ಪ್ರವೇಶ ಮಾಡಿದ ಇವರು ಸುಮಾರು 28 ವರ್ಷಗಳ ಕಾಲ ಉತ್ತಮ ಶಾಸಕರಾಗಿ ಮತ್ತು 8ವರ್ಷಗಳ ಕಾಲ ಎರಡು ಬಾರಿ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿ ಈಡೀ ರಾಷ್ಟç ಒಪ್ಪುವತಂಹ ಯೋಜನೆಗಳನ್ನು ಜಾರಿಗೆ ತಂದರು ಎಂದರು.
ಅರಸುರವರ ಕಾಲದಲ್ಲಿ ಇದ್ದ ರಾಜಾಕೀಯ ಬೇರೆ ಪ್ರಸ್ತುತ ಇರುವ ಇಂದಿನ ರಾಜಾಕೀಯ ಬೇರೆ ಈಗೀನ ರಾಜಾಕೀಯ ಕಲುಷಿತ ಗೊಂಡಿದೆ, ಮೈದಾನದಲ್ಲಿ ಆಟ ಹಾಡುವ ಕ್ರೀಕೆಟ್ ತರ ರಾಜಾಕೀಯದ ದಿಕ್ಕು ಬದಲಾಯಿಸುತ್ತಿದೆ, ಶಿಕ್ಷಣ ಕಲಿತ ನೀವುಗಳು ಕೇವಲ ನಿಮ್ಮ ಶಿಕ್ಷಣದಿಂದ ಮಾತ್ರ ಮುಂದೆ ಬರಲು ಸಾಧ್ಯ ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಅರಸು ರವರು ಕೇವಲ ಒಂದೇ ಜಾತಿ, ಮತ, ಪಂಥ, ಧರ್ಮಕ್ಕೆ ಸೀಮೆತವಾದ ವ್ಯಕ್ತಿಯಲ್ಲ ಅವರು ಎಲ್ಲಾ ಹಿಂದುಳಿದ ಬಡ ಜನರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸುವ ಮೂಲಕ ಇಂದು ಅಗ್ರಮಾನ್ಯರಾಗಿದ್ದಾರೆ. ಆದ್ದರಿಂದ ನಿಮ್ಮ ವಿದ್ಯಾರ್ಥಿ ಜೀವನ ಹಸನಾಗಬೇಕು ನಿಮ್ಮ ಪ್ರತಿಯೊಬ್ಬರಲ್ಲೂ ಅರಸು ಮನೆ ಮಾಡಿರಬೇಕು ಎಂದರು.
ಸಮಾರAಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂರ್ಧಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್ಸುರೇಶ್, ಬಿಸಿಎಂ.ವಿಸ್ತಾರಣಾಧಿಕಾರಿ ಜಗನ್ನಾಥ್, ಪೌರಾಯುಕ್ತ ಸಿ.ಚಂದ್ರಪ್ಪ, ತಾಪಂ.ಸಹಾಯಕ ನಿದೇರ್ಶಕ ಸಂತೋಶ್ ಕುಮಾರ್, ನಾಮ ನಿದೇರ್ಶನ ಸದಸ್ಯ ಜಗದಾಂಭ, ಕೆ.ಟಿ.ನಿಜಲಿಂಗಪ್ಪ, ಗ್ರಾಪಂ.ಸದಸ್ಯ ಮಂಜುನಾಥ್, ಉಪನ್ಯಾಸಕ ಬಿ.ನಾಗರಾಜ್, ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಜೆ.ಅಶೋಕ್, ಅರಣ್ಯ ಅಧಿಕಾರಿ ಬಾಬು, ಅಬಕಾರಿ ಇಲಾಕೆ ತಿಪ್ಪಯ್ಯ, ದಿವಾಕರ್, ರೇಷ್ಮಾ ಇಲಾಖೆ ಅಧಿಕಾರಿ ಕೆಂಚಾಜಿರಾವೋ, ಸಿಡಿಪಿಓ ಕೃಷ್ಣಾಪ್ಪ, ಇತತರು ಇದ್ದರು.