ನೊಂದವರ ಪರ ಜನಪ್ರತಿನಿಧಿಗಳ ಅಧಿಕಾರ ಇರಲಿ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ನೊಂದವರ ಪರಧ್ವನಿ ಎತ್ತುವ ಮೂಲಕ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳನ್ನು ತಲುಪಿಸಿವ ನಿಟ್ಟಿನಲ್ಲಿ ಸಮಾಜದ ಮುಖ್ಯ ವಾಹಿನಿಗೆ ಚುನಾಯಿತ ಪ್ರತಿನಿಧಿಗಳು ಬರುವ ಮೂಲಕ ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡುವ ಅಗತ್ಯವಿದೆಯೆಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು


ಅವರು ಇಂದು ರಾಮಜೋಗಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಶಿಲ್ಪ ಇವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಳಿಸಿ, ಮಾತನಾಡಿದ ಅವರು ಡಾ.ಬಿಆರ್.ಅಂಬೇಡ್ಕರ್ ಅವರ ದೂರದರ್ಶಿತ್ವದಿಂದ ಇಂದು ಧಮನಿತರು ಮತ್ತು ಪರಿಶಿಷ್ಟರು ಮತ್ತು ಮಹಿಳೆಯರಿಗೆ ಅಧಿಕಾರ ನಡೆಸುವಂತಹ ಅವಕಾಶ ಬಂದೋದಗಿದೆ, ಈ ಅವಕಾಶಗಳನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಬದಲಾವಣೆ ತರುವ ನಿಟ್ಟಿನಲ್ಲಿ ಮುಂದಾಗ ಬೇಕೆಂದು ಸಲಹೆ ನೀಡಿದರು.


ನೂತನವಾಗಿ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡ ಶಿಲ್ಪ ಮಾಧ್ಯಮದೊಂದಿಗೆ ಮಾತನಾಡಿ, ಸಂವಿಧಾನ ಹಕ್ಕು ಬದ್ದವಾಗಿ ಆಯ್ಕೆ ಮಾಡಿದ ಎಲ್ಲಾರಿಗೂ ಧನ್ಯವಾದಗಳು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಹಕ್ಕು ಭಾದ್ಯತೆಗಳು ಇವೆ ಅದಕ್ಕೆ ತಕ್ಕನಾಗಿ ಸಮಾಜದ ಸ್ವಾಥ್ಯ ಕಾಪಾಡುವ ನಿಟ್ಟಿನಲ್ಲಿ ಸಮಾಜದ ಋಣ ನಮ್ಮ ಮೇಲೆ ಇದೆ ಇದನ್ನು ನಿಭಾವಹಿಸುವ ಮೂಲಕ ಅಧಿಕಾರನ್ನು ಸರಿಯಾದ ರೀತಿಯಲ್ಲಿ ನಿಭಾಹಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ತಿಪ್ಪೇಸ್ವಾಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!