ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರಲ್ಲಿ ಸಂತಸ

ನಾಯಕನಹಟ್ಟಿ:: ಇತ್ತೀಚಿಗೆ ತೊರೆಕೋಲಮ್ಮನಹಳ್ಳಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯರಾದ ಜಿ ಓ ಬಸವರಾಜ್ ಹೇಳಿದ್ದಾರೆ.

ಸಮೀಪದ ಅಬ್ಬೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ ಆಗಸ್ಟ್ 10 ಮತ್ತು 11 ದಿನಾಂಕ ಎಂದು ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಖೋ ಖೋ ಕ್ರೀಡೆಯಲ್ಲಿ ಬಾಲಕಿಯರು ಪ್ರಥಮ ಸ್ಥಾನವನ್ನು ಗಳಿಸಿದ್ದು ನಮ್ಮ ಶಾಲೆಯ ಹಿರಿಮೆಯನ್ನು ಗಳಿಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ನಂತರ ಶಿಕ್ಷಕಿ ಟಿ ಎಸ್ ರೂಪಶ್ರೀ ಮಾತನಾಡಿ ನಮ್ಮ ಶಾಲೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಖೋ ಖೋ ವಾಲಿಬಾಲ್ ಬ್ಯಾಡ್ಮಿಂಟನ್ ಬಾಲಕರ ವಿಭಾಗದಲ್ಲಿ ಖೋ ಖೋ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ 3000 ಮೀಟರ್ ಓಟ100 ಮೀಟರ್ ಓಟ ಕ್ರೀಡೆಗಳಲ್ಲಿ ಭಾಗವಹಿಸಿ ಬಾಲಕ ಬಾಲಕಿಯರು ಹೆಚ್ಚಿನ ಪ್ರಶಸ್ತಿಯನ್ನು ಗಳಿಸಿ ಶಾಲೆಗೆ ತಂದುಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರರ ಎಸ್ ಪಿ ಪಾಪಣ್ಣ, ಬಿ ಆರ್ ಅನಿತಾ, ವೈ ಬಿ ಶಶಿಕುಮಾರ್, ಟಿ ಹುಲಿಕುಂಟೆಪ್ಪ, ನಾಗರಾಜ್,ಇ ರಾಜಣ್ಣ ಸೇರಿದಂತೆ ಇದ್ದರು

About The Author

Namma Challakere Local News
error: Content is protected !!