ಕಾರ್ಯಕರ್ತರನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸರಿ.! ಇಲ್ಲ ಸಚಿವರ, ಸಿಎಂ.ಸಭೆಗಳಲ್ಲಿ ಪ್ರತಿಭಟನೆ : ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಕೆಂಡಾ ಮಂಡಲ
ಚಳ್ಳಕೆರೆ : ಕಾಶ್ಮೀರದಿಂದ ಕುನ್ಯಾಕುಮಾರಿವರೆಗೆ ಸೆಪ್ಟೆಂಬರ್ ೭ ರಿಂದ ಭಾರತ್ ಜೋಡೋ ಕಾರ್ಯಕ್ರಮ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಗೆ ರಾಜ್ಯದಲ್ಲಿ ಸುಮಾರು ೫೧೦ಕಿಲೋ. ಮೀಟರ್ ಪಾದಯಾತ್ರೆಗೆ ಗುಂಡ್ಲು ಪೇಟೆಯಿಂದ ರಾಯಾಚೂರು ಮೂಲಕ ತೆಲಂಗಾಣವನ್ನು ಪ್ರವೇಶ ಮಾಡಲಿದೆ,
ಪಾದಯಾತ್ರೆ ವೇಳೆ ಊಟ, ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ವೀಕ್ಷಣೆ ನಡೆಸಲು ಚಳ್ಳಕೆರೆ ನಗರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಆತ್ಮಿಯವಾಗಿ ನೆಹರು ವೃತ್ತದಲ್ಲಿ ಹೂವು ಮಾಲೆ ಹಾಕಿ ಸ್ವಾಗತ ಕೋರಿದರು
ನಂತರ ನೆರೆದಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶೀಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಕರ್ತರತ್ತ ಕೈ ಬಿಸಿ ಶಾಸಕರ ಭವನದಲ್ಲಿ ಶ್ರೀಕೃಷ್ಣಾ ಜನ್ಮಷ್ಠಾಮಿ ಪ್ರಯುಕ್ತ ಶಾಸಕರ ಭವನದಲ್ಲಿ ಆಯೊಜಿಸಿದ್ದ ಜನ್ಮಷ್ಠಾಮಿ ಕಾರ್ಯಕ್ರದಲ್ಲಿ ಶ್ರೀ ಕೃಷ್ಣಾನಿಗೆ ಪುರ್ಷ್ಪಾಚನೆ ಮಾಡುವ ಮೂಲಕ ಶುಭಾ ಕೋರಿದರು,
ನಂತರ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸಾಧನೆಗಳು ಒಳಗೊಂಡ ವಿಶೇಷ ಸಂಚಿಕೆಯ ಪತ್ರಿಕೆಯನ್ನು ಕೈಯಲಿಡಿದು ಶಾಸಕರತ್ತಾ ಕ್ಷೇತ್ರದ ಅಭಿವೃದ್ದಿ ವಿಚಾರ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಕೆಲ ಕಾಲ ಚರ್ಚಿಸಿದರು,
ನಂತರ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು ಅವರು
ಕಾಶ್ಮೀರದಿಂದ ಕುನ್ಯಾಕುಮಾರಿವರೆಗೆ ಸೆಪ್ಟೆಂಬರ್ ೭ ರಿಂದ ಭಾರತ್ ಜೋಡೋ ಕಾರ್ಯಕ್ರಮ ರಾಹುಲ್‌ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಹಂಚಿಕೊAಡಿದ್ದಾರೆ,
ರಾಜ್ಯದಲ್ಲಿ ಸುಮಾರು ೫೧೦ಕಿಲೋ. ಮೀಟರ್ ಪಾದಯಾತ್ರೆ ನಡೆಯಲಿದೆ, ಗುಂಡ್ಲು ಪೇಟೆಯಿಂದ ರಾಯಾಚೂರು ಮೂಲಕ ತೆಲಂಗಾಣವನ್ನು ಪ್ರವೇಶ ಮಾಡಲಿದೆ, ಪಾದಯಾತ್ರೆ ವೇಳೆ ಊಟ, ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ವೀಕ್ಷಣೆ ನಡೆಸಲಾಗುತ್ತದೆ.
ಬಿಜೆಪಿ ಕಾರ್ಯಕರ್ತರೇ ಕಾರಿಗೆ ಮೊಟ್ಟೆ ಹೊಡೆದಿದ್ದಾರೆ ಎಂದು ಧೈರ್ಯವಾಗಿ ಹೇಳಲಿ ಅದು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ ಎನ್ನುವುದು ಏಡಿ ತನ ಬಿಜೆಪಿಗರು ಸುಳ್ಳಿನಲ್ಲಿ ಮಲಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಆಡಳಿತ ಪಕ್ಷದ ವಿರುದ್ಧ ಚಾಟಿ ಬೀಸಿದ್ದಾರೆ.
ಚಳ್ಳಕರೆ ನಗರಕ್ಕೆ ಬೇಟಿ ನೀಡಿದ ಸಂಭರ್ಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸಂವಿಧಾನದ ಹಕ್ಕಿನಲ್ಲಿ ಪ್ರಜಾಪ್ರಭುತ್ವ ಶಾಸಕಾಂಗ ಸ್ಥಾನ ನೀಡಿ ವಿರೋಧ ಪಕ್ಷದ ಸ್ಥಾನ ನೀಡಿದೆ ಅಂತಹ ಸ್ಥಾನದಲ್ಲಿ ನೆರೆ, ಪ್ರಕೃತಿ ಸಂಧರ್ಭದಲ್ಲಿ ಸರಕಾರದ ಕಣ್ಣು ತೆರೆಯಲು ಬೇಟಿ ನೀಡಿದ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಈದೇ ಸಂಧರ್ಭದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕ ಡಿ.ಸುಧಾಕರ್, ಮೊಳಕಾಲ್ಮುರು ವಿಧಾನ ಸಭಾಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ, ಡಾ.ಬಿ.ಯೋಗೀಶ್ ಬಾಬು, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ, ಜಿಪಂ.ಮಾಜಿ ಅಧ್ಯಕ್ಷ ರವಿಕುಮಾರ್, ನಗರಸಭೆ ಅದ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ನಗರಸಭೆ ಸದಸ್ಯ ರಮೇಶ್ ಗೌಡ, ಮಲ್ಲಿಕಾರ್ಜುನಾ, ರಾಘವೇಂದ್ರ, ಕೆ.ವೀರಭದ್ರಯ್ಯ, ಮಹಿಳಾ ಕಾರ್ಯಕರ್ತೆ ಗೀತಾಬಾಯಿ, ಭಾಗ್ಯಮ್ಮ, ಉಷಾ, ಇತರರು ಪಾಲ್ಗೊಂಡಿದ್ದರು.