ಮಣಿಪಾಲ ಆರೋಗ್ಯ ಕಾರ್ಡ್ 2022ರ ನೋಂದಣಿಗೆ ಚಾಲನೆ : ಮೋಹನ್‌ಶೆಟ್ಟಿ
ಚಳ್ಳಕೆರೆ: ಬಡ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಕಳೆದ 20 ವರ್ಷಗಳಿಂದ ಜಾರಿಗೆ ತಂದ ಮಣಿಪಾಲ್ ಆರೋಗ್ಯ ಕಾರ್ಡ್ನಿಂದ ಲಕ್ಷಾಂತರ ಬಡ ಕುಟುಂಬಗಳು ಇದರ ಉಪಯೋಗ ಪಡೆದುಕೊಂಡಿವೆ ಎಂದು ಕಸ್ತೂರ ಬಾ ಆಸ್ಪತ್ರೆಯ ಮಣಿಪಾಲದ ವ್ಯವಸ್ಥಾಪಕ ಮೋಹನ್‌ಶೆಟ್ಟಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಣಿಪಾಲ ಆರೋಗ್ಯ ಕಾರ್ಡ್ 2022ರ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು. ಬಡ ಕುಟುಂಬಗಳು ದುಬಾರಿ ಚಿಕಿತ್ಸೆಗಳು ಪಡೆಯಬೇಕಾದ ಪರಿಸ್ಥಿತಿಯಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಬಹಳ ಪ್ರಯೋಜನಕ್ಕೆ ಬರುವುದು.
ತಜ್ಞ ಅಥವಾ ಸೂಪರ್ ಸ್ಟೆಷಲಿಸ್ಟ್ ವೈದ್ಯ ಸಮಾಲೋಚನೆಗೆ ಶೇ.50ರಷ್ಟು ರಿಯಾಯಿತಿ ದೊರೆಯುವುದು. ಲ್ಯಾಬ್‌ಗಳಲ್ಲಿ ಶೇ.30ರಷ್ಟು, ಸಾಮಾನ್ಯ ವಾರ್ಡಿನ ಒಳರೋಗಿಯಾಗಿದ್ದಲ್ಲಿ ಶೇ.25ರಷ್ಟು, ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್ಗಳಲ್ಲಿ ಶೇ.10ರಷ್ಟು, ಸಿಟಿ, ಎಂಆರ್‌ಐ, ಅಲ್ಟಾçಸೌಂಡ್ ಶೇ.20ರಷ್ಟು, ಔಷಧಗಳಿಗೆ ಶೇ.12ರಷ್ಟು ಹೀಗೆ ಎಲ್ಲವುದರಲ್ಲೂ ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದರು.
ಈ ವರ್ಷ ಒಂದು ಮತ್ತು ಎರಡು ವರ್ಷದ ಮಣಿಪಾಲ ಆರೋಗ್ಯ ಕಾರ್ಡ್ಗಳನ್ನು ಜಾರಿಗೊಳಿಸಿದ್ದೇವೆ. ಒಂದು ವರ್ಷಕ್ಕೆ ಒಬ್ಬರಿಗೆ 300 ರೂ. ಕುಟುಂಬಕ್ಕೆ 600 ರೂ. ಪೋಷಕರು, ಅತ್ತೆಮಾವ ಸೇರಿದರೆ 750 ರೂ. ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ರೂ. ಕುಟುಂಬಕ್ಕೆ 800ರೂ. ಪೋಷಕರು, ಅತ್ತೆ ಮಾವ ಸೇರಿದರೆ 950 ರೂ. ಆಗುವುದು ಇಷ್ಟು ಕಡಿಮೆ ದರದಲ್ಲಿ ಆರೋಗ್ಯ ಕಾರ್ಡ್ ಮಣಿಪಾಲದಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಹಾಯಕ ವ್ಯವಸ್ಥಾಪಕ ಕೃಷ್ಣಪ್ರಸಾದ್ ಮಾತನಾಡಿ,
ಕರ್ನಾಟಕವಲ್ಲದೆ ಗೋವಾ, ಮಹಾರಾಷ್ಟçದಲ್ಲಿ ವಾಸವಾಗಿರುವ ಕನ್ನಡಿಗರು ಮಣಿಪಾಲ ಆರೋಗ್ಯ ಕಾರ್ಡ್ ಪಡೆದು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಬಡ ಕುಟುಂಬಗಳಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುವುದು ಎಂದು ತಿಳಿಸಿದರು.
ಕಸ್ತೂರ ಬಾ ಆಸ್ಪತ್ರೆಯ ಮಣಿಪಾಲದ ಮುಖ್ಯ ವ್ಯವಸ್ಥಾಪಕ ಸಚಿನ್ ಕಾರಂತ್, ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನಿಲ್‌ನಾಯ್ಕ್, ಮಣಿಪಾಲ ಆರೋಗ್ಯಕಾರ್ಡ್ ಮುಖ್ಯ ಸಂಯೋಜಕ ಕೆ.ಬಿ.ಕೆಂಚನಗೌಡ, ಮನೋಜ್‌ಕುಮಾರ್ ಇದ್ದರು.