ಚಳ್ಳಕೆರೆ : ತುಂಬಿ ಹರಿಯುವ ವೇದಾವತಿ ನದಿಯಲ್ಲಿ ಆಕಸ್ಮಿಕವಾಗಿ ವಯೋವೃದ್ದೆ ಬಿದ್ದು ಸಾಲಿನಲ್ಲಿರುವ ಘಟನೆ ತಾಲೂಕಿನ ಜನತೆಯಲ್ಲಿ ಬೆಚ್ಚಿಬಿಳಿಸಿದೆ.
ತಾಲೂಕಿನ ಹಾಲಗೊಂಡನಹಳ್ಳಿ ಗ್ರಾಮದ ಹನುಮಕ್ಕ 62 ವರ್ಷ ಇವರು ವೇದಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ
ಮಾಹಿತಿ ತಿಳಿದ ತಕ್ಷಣವೇ ದಾವಿಸಿದ ಚಳ್ಳಕೆರೆ ತಹಶಿಲ್ದಾರ ಎನ್ ರಘುಮೂರ್ತಿ, ಪೊಲೀಸ್ ಉಪನಿರೀಕ್ಷಕರಾದ ಸ್ವಾತಿ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ.
ತದನಂತರ ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ವೇದಾವತಿ ನದಿ ತುಂಬಿ ಹರಿಯುತ್ತಿದ್ದು ಈ ನದಿ ಪಾತ್ರದಲ್ಲಿರುವಂತಹ ಜನರು ಜಾಗರೂಕತೆಯಿಂದ ಇರಬೇಕು
ತಮ್ಮ ದಿನನಿತ್ಯದ ಬದುಕಿಗೆ ಪ್ರತಿಯೊಂದು ಬಳಸುವಂತಹ ಸಂದರ್ಭದಲ್ಲಿ ಮಕ್ಕಳು ಮತ್ತು ವಯೋವೃದ್ಧರನ್ನು ನದಿಗೆ ಇಳಿಸಬಾರದು
ನದಿಯಲ್ಲಿರುವ ಪ್ರವಾಹ ಕಡಿಮೆಯಾಗುವವರೆಗೆ ಈ ನದಿಯನ್ನು ಆಶ್ರಯಿಸುವಂತ ಕೆಲಸ ಕಾರ್ಯಗಳನ್ನು ಕೈ ಬಿಡಬೇಕು
ಗ್ರಾಮದಲ್ಲಿರುವ ಯುವಕರು ಮತ್ತು ವಿದ್ಯಾರ್ಥಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗುಜ್ಜಾರಪ್ಪ, ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು