ಚಳ್ಳಕೆರೆ : ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ನೀರಿನ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ
ಬಯಲು ಸೀಮೆ ಜನತೆಗೆ ಜೀವನಾಡಿಯದ ಚಳ್ಳಕೆರೆ ತಾಲೂಕಿನ ರಾಣಿಕೆರೆ, ಸಾವಿರಾರು ರೈತರ ಜಮೀನಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಗೆ ನೀರು ಹರಿಯುವ ಮಾರ್ಗದ ಕಾಲುವೆ ಒಡೆದು ನೀರು ವ್ಯರ್ಥವಾಗುತ್ತದೆ.
ತಾಲೂಕಿನ ನಾರಾಯಣಪುರ ಹಾಗೂ ಮೆಟ್ಟಿಲುಗೆರೆ ರಸ್ತೆ ಮೂಲಕ ಹರಿದು ಬರುವ ನೀರು ಬೆಳೆಗೆರೆ ಗ್ರಾಮದ ಮೂಲಕ ರಾಣಿಕೆರೆಗೆ ಹರಿಯುತ್ತವೆ,
ಇನ್ನೂ ಲಕ್ಷಾಂತರ ನೀರು ಹರಿದು ವೆಸ್ಟ್ ಹಾಗುವ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯು ಇತ್ತ ಸುಳಿದಿಲ್ಲ.
ರಾಣಿಕೆರೆ ಒಂದು ಬಾರಿ ತುಂಬಿದರೆ ಈ ಭಾಗದ ಸಾವಿರಾರು ರೈತರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿಗೆ ಉತ್ತೆಜನ ನೀಡುತ್ತದೆ.
ಈಗೇ ಇಂತಹ ಅಮೂಲ್ಯವಾದ ನೀರನ್ನು ಸಂಗ್ರಹಿಸುವ ರಾಣಿಕೆರೆ ಕಾಲುವೆ ಒಡೆದು ನೀರು ವ್ಯರ್ಥ ಹಾಗುತ್ತಿರುವುದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ರಾಣಿಕೆರೆ ತುಂಬಿ ಕೊಡಿ ಬೀಳಲು ಕೇವಲ ನಾಲ್ಕು ಅಡಿ ಬಾಕಿ ಇದೆಯಂತೆ ಸ್ಥಳೀಯರ ಅಭಿಪ್ರಾಯದಂತೆ ವೇದಾವತಿ ನೀರು ಹಾಗು ಮಳೆಯ ನೀರು ಕೆರೆಕಟ್ಟೆಗಳು ತುಂಬಿ ರಾಣಿಕೆರೆಗೆ ನೀರು ಹರಿದು ಬಂದಿದ್ದಾರೆ,
ಈ ಒತ್ತಿಗೆ ರಾಣಿಕೆರೆ ಭವಿಷ್ಯದಲ್ಲಿ ಕೋಡಿ ಬಿಳುತ್ತಿದ್ದರು ಅಚ್ಚರಿಯಿಲ್ಲ.
ಇನ್ನೂ ಸ್ಥಳೀಯ ಸಾರ್ವಜನಿಕರು ನೀರಾವರಿ ಇಲಾಕೆ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ..
ಮಳೆಗಾಲ ಪ್ರಾರಂಭದಲ್ಲಿ ಇಂತಹ ಜಲಮೂಲಗಳನ್ನು ಸಂರಕ್ಷಣೆ ಮಾಡುವ ಹೊಣೆ ಹೊತ್ತ ಇಲಾಖೆ ಜಾಣ ಕುರುಡುತನಕ್ಕೆ ರೈತರು ಬಲಿಪಶು ಹಾಗುತ್ತಿದ್ದಾರೆ.
ಬಯಲು ಸೀಮೆಗೆ ನೀರು ಎಂಬುದು ಅಮೂಲ್ಯವಾದ ಜೀವ ಜಲ ಅಂತಹ ಜಲವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ನಮದಾಗಿದೆ
ಆದರೆ ಇಂತಹ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಮ್ಮ ರಾಣಿಕೆರೆಗೆ ಹರಿದು ಬರುವ ನೀರು ಮಧ್ಯೆದಲ್ಲಿ ವ್ಯರ್ಥವಾದರೆ ಹೇಗೆ..
ಇನ್ನೂ ಗಟ್ಟಿಮುಟ್ಟಾದ ಈ ಕಾಲುವೆಗೆ ಯಾವುದೇ ಅಪಾಯ ಇಲಿಲ್ಲ ಆದರೆ ಕಾಲುವೆ ಒಡೆದು ನೀರು ವ್ಯರ್ಥವಾಗಿರುವುದರ ಹಿಂದಿನ ಉದ್ದೇಶ ಏನಿದೆ ಎಂಬುದು ಮನಗಾಣಬೇಕಿದೆ.
ಯಾರೋ ಕಿಡಿಗೇಡಿಗಳು ಈ ಕಾಲುಗೆ ಜೆಸಿಬಿಯಿಂದ ಹಾಳು ಮಾಡಿರುವ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.