filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಚಳ್ಳಕೆರೆ : ನಗರದ ಗಾಂಧಿನಗರದಲ್ಲಿರುವ ನಗರಸಭೆ ಕಲ್ಯಾಣ ಮಂಟಪದಲ್ಲಿ ಡೇ-ನ ಯೋಜನೆಯ ಉಪಘಟಕದಡಿ ಗುರುತಿಸಲ್ಪಟ್ಟ
ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಆಹಾರ ಉತ್ಪಾದನೆ ಮಾಡುವ ಎಲ್ಲಾ ಉತ್ಪಾದಕರು, ಬೇಕರಿ ಮಾಲೀಕರು,
ಹೊಟೇಲ್ ಮಾಲೀಕರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ಹಾಗೂ ಮಹಿಳಾ ಒಕ್ಕೂಟದ
ಸದಸ್ಯರುಗಳಿಗೆ ನಗರಸಭೆ ಚಳ್ಳಕೆರೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಮೈಸೂರು ಇವರುಗಳ
ಸಹಯೋಗದೊಂದಿಗೆ “ಆಹಾರ ಉತ್ಪಾದನೆ, ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಒಂದು ದಿನದ ತರಬೇತಿ
ಕಾರ್ಯಾಗಾರವನ್ನು ಜರುಗಿತು.

ಪೌರಾಯುಕ್ತ ಜಗರೆಡ್ಡಿ ಮಾತನಾಡಿ, ನಗರದಲ್ಲಿ ನಾಲ್ಕು ದಿಕ್ಕುಗಳಲ್ಲಿ ಪುಟ್ ಬಾತ್ ವ್ಯಾಪಾರಿಗಳು ವ್ಯಾಪಾರ ಮಾಡುವುದರಿಂದ ಹಾಗೂ ಪಾದಚಾರಿ ರಸ್ತೆ ಆಕ್ರಮಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ರಸ್ತೆ ವಾಹನ ಸವಾರರಿಗೆ ಕಿರಿಕಿರಿಯಾಗುತ್ತದೆ ಆದ್ದರಿಂದ ನಗರಸಭೆ ನಿಗಧಿ ಮಾಡಿದ ಸ್ಥಳದಲ್ಲಿ ಪುಟ್ ಬಾತ್ ವ್ಯಾಪಾರಿಗಳು ವ್ಯಾಪಾರ ನಡೆಸಬೇಕು, ಅದರಂತೆ ನಗರದ ಸಂತೆ ಮೈದಾನದ ಆವರಣದಲ್ಲಿ ಹೂವಿನ ಮಾರುಕಟ್ಟೆ ಹಾಗೂ ಹಣ್ಣಿನ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುತ್ತದೆ, ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಿ ಸ್ವಚ್ಛ ನಗರಕ್ಕೆ ಕೈ ಜೋಡಿಸಿ ಎಂದರು.

ಇನ್ನೂ ನಗರ ಪೋಲೀಸ್ ಠಾಣೆಯ ಪಿಎಸ್ಐ ಶಿವರಾಜ್ ಮಾತನಾಡಿ, ದಿನ ನಿತ್ಯದ ಕಾಯಕ ಮಾಡುವ ಕೂಲಿ ಕಾರ್ಮಿಕರು ಪುಟ್ ಬಾತ್ ಮೇಲೆ ವ್ಯಾಪಾರ ಮಾಡುವುದಲ್ಲದೆ ರಸ್ತೆ ಮೇಲೆ ವ್ಯಾಪಾರ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತದೆ, ಅದರ ಬದಲಾಗಿ ನಗರಸೆಭೆ ನಿಗಧಿ ಮಾಡಿದ ಜಾಗದಲ್ಲಿ ವ್ಯಾಪಾರ ಮಾಡಿ, ಆದ್ದರಿಂದ ಇಲಾಖೆ ಜೊತೆಗೆ ಸಹಕಾರ ನೀಡಿದರೆ, ಆದೇ ರೀತಿಯಲ್ಲಿ ನಿಮ್ಮ ರಕ್ಷಣೆಗೆ ನಾವು ಬದ್ದವಾಗಿರುತ್ತೆವೆ.

ನೆಹರು ವೃತ್ತದ ನಾಲ್ಕು ದಿಕ್ಕಿನಲ್ಲಿ ಪುಟ್ಬಾತ್ ವ್ಯಾಪಾರಿಗಳು ರಸ್ತೆ ಮೇಲೆ ವ್ಯಾಪಾರ ನಡೆಸುವುದರಿಂದ ವಾಹನ ಸಾವರರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ, ಇದನ್ನ ಕಂಡ ಹೊರದೇಶದ, ಹೊರ ರಾಜ್ಯದ ಜನರು ಇಲ್ಲಿನ ವ್ಯವಸ್ಥೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ, ಆದ್ದರಿಂದ ಸ್ವಚ್ಛ ನಗರ ಸುಂದರ ನಗರಕ್ಕೆ ಎಲ್ಲರೂ ಕಟಿಬದ್ಧರಾಗೋಣ ಆದ್ದರಿಂದ ನಗರಸಭೆ ನಿಗದಿ ಮಾಡಿದಂತಹ ಸ್ಥಳದಲ್ಲಿ ಪುಟ್ಬಾತ್ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸಿಕೊಂಡು ತಮ್ಮ ಜೀವನ ಕಟ್ಟಿಕೊಳ್ಳಬೇಕು ನಿಮ್ಮ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ರಕ್ಷಣೆಗೆ ಇರುತ್ತದೆ ಎಂದರು.

ಕಾರ್ಮಿಕ ಸಂಘಟನೆಯ ಅಧ್ಯಕ್ಷ ಶಿವರುದ್ರಪ್ಪ ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯದೆ ಅವರಿಗೆ ನಿಗದಿತ ಸ್ಥಳ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟರೆ ಅವರು ನಿಗದಿತ ಜಾಗಕ್ಕೆ ಹೋಗುತ್ತಾರೆ ಬೆಳಕಿನ ಅವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೌಚಾಲಯ ವ್ಯವಸ್ಥೆ ಹಾಗೂ ಸುಸಜ್ಜಿತವಾದ ರಸ್ತೆ ಈ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ನಗರಸಭೆ ಕೊಡಬೇಕು, ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ ನಗರಸಭೆ ಇರಬೇಕು ಅದರ ಬದಲಾಗಿ ವಿನಾಕಾರಣ ತೊಂದರೆ ಕೊಡಬಾರದು ಎಂದರು

ಇದೇ ಸಂಧರ್ಭದಲ್ಲಿ ಪೌರಾಯುಕ್ತ ಜಗ್ಗರೆಡ್ಡಿ, ಪಟ್ಟಣ ಮಾರಾಟ ಸಮಿತಿಯ ಅಧ್ಯಕ್ಷರು
ಪರಿಸರ ಅಭಿಯಂತರರು ನರೇಂದ್ರಬಾಬು, ಸಂಘಟನಾಧಿಕಾರಿ ಭೂತಯ್ಯ, ಡಿ ಮುತ್ತಪ್ಪ, ಸಮುದಾಯ ಸಂಘಟನಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಸಿವೈ ಶಿವದ್ರಪ್ಪ ,ಪಟೇಲ್, ಸುರೇಶ್ ಕೆ ಮಂಜುನಾಥ್, ಮಂಜಮ್ಮ, ವೀರಭದ್ರಯ್ಯ, ತಿಪ್ಪೇಸ್ವಾಮಿ , ಮಾರಾಟ ಸಮಿತಿಯ ಸದಸ್ಯರುಗಳು ಆರೋಗ್ಯ ಇಲಾಖೆಯಿಂದ ಪ್ರದೀಪ್, ಪೊಲೀಸ್ ಇಲಾಖೆಯಿಂದ ಪಿಎಸ್ಐ ಶಿವರಾಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರು ರುದ್ರಮುನಿ, ಗೀತಕುಮಾರಿ, ಪೂಜಾ, ಚೈತನ್ಯ ನೇತ್ರಾವತಿ ಇನ್ನಿತರ ಸದಸ್ಯರು ಇದ್ದರು.

About The Author

Namma Challakere Local News
error: Content is protected !!